ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೆ.ಉಮೇಶ್ ಶೆಟ್ಟಿಯವರು ಇಂದು ತೆರೆದ ವಾಹನದಲ್ಲಿ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಗರಭಾವಿ ಪಾಲಿಕೆ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ತೇಜಸ್ವಿ ಸೂರ್ಯ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾದ ನೆ.ಲ.ನರೇಂದ್ರ ಬಾಬು,ರಾಜ್ಯ ಬಿಜೆಪಿ ಯುವ ಮುಖಂಡರಾದ ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥ ಗೌಡರವರು ನಾಮಪತ್ರ ಸಲ್ಲಿಕೆಯಲ್ಲಿ ಮುಂತಾದವರು ಉಪಸ್ಥಿತರಿದ್ದರು.
ಕೆ.ಉಮೇಶ್ ಶೆಟ್ಟಿ ರವರು ಉಡುಪಿ ಜಿಲ್ಲೆ ಕುತ್ಪಾಡಿ ಗ್ರಾಮದಲ್ಲಿ ರೈತಾಪಿ ಕುಟುಂಬ.
ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ವಿದ್ಯಾರ್ಥಿ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯರವರ ,ಅಟಲ್ ಬಿಹಾರಿ ವಾಜಪೇಯಿ ರವರವಂತಹ ನಾಯಕರ ಆದರ್ಶ ಗುಣಗಳಿಂದ ಪೇರಿತರಾಗಿ ಬಿಜೆಪಿ ಪಕ್ಷಕ್ಕೆ ಸದಸ್ಯರಾಗಿ ಸೇವೆ.
ಸಚಿವ ವಿ.ಸೋಮಣ್ಣರವರ ಕಳೆದ 20ವರ್ಷಗಳಿಂದ ನಿಕಟ ಸಂಪರ್ಕ. ಪಕ್ಷ ಗುರುತಿಸಿ 2010ಮತ್ತು 2015ರಲ್ಲಿ ನಾಗರಭಾವಿ ವಾರ್ಡ್ ಮತ್ತು ಗೋವಿಂದರಾಜನಗರ ವಾರ್ಡ್ ಎರಡು ಬಾರಿ ಸದಸ್ಯರಾಗಿ ಸೇವೆ.
ಬೃಹತ್ ಬೆಂಗಳೂರು ಹೋಟೆಲು ಅಸೋಸಿಯೋಸನ್ ಅಧ್ಯಕ್ಷರಾಗಿ ಸೇವೆ, ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ. ಬೆಂಗಳೂರುನಗರ ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ,ಇದೀಗ ಪಕ್ಷ ಗುರುತಿಸಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ದಾಸೇಗೌಡ, ರಾಜೇಶ್ವರಿ, ಜಯರತ್ನ, ರಾಮಪ್ಪ ಹಾಗೂ ಗೋವಿಂದರಾಜನಗರ ಬಿಜೆಪಿ ಪಕ್ಷದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.