Tuesday, June 6, 2023
Homeರಾಜ್ಯಬೆಂಗಳೂರುಡಿ.ಕೆ.ಶಿ ಪರಮಾಪ್ತ ಎಸ್.ಕೇಶವಮೂರ್ತಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಡಿ.ಕೆ.ಶಿ ಪರಮಾಪ್ತ ಎಸ್.ಕೇಶವಮೂರ್ತಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿರವರು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆಯಲ್ಲಿ ನಾಗಪುರ ವಾರ್ಡ್ ನಲ್ಲಿರುವ ಬಿಬಿಎಂಪಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ರವರು, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಚ್.ಮಂಜುನಾಥ್ ಗೌಡ, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಸಾತ್ ನೀಡಿದರು.

ಎಸ್.ಕೇಶವಮೂರ್ತಿ ರವರು ಕೆ.ಎಲ್.ಇ.ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಸೇವೆ.

ಡೊನೇಷನ್ ಹಾವಳಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅನುಕೂಲ, ವಿದ್ಯಾರ್ಥಿಗಳ ಪರ ಹೋರಾಟ.

ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ರವರು ಕೇಶವಮೂರ್ತಿರವರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಪಕ್ಷ ಸೇರ್ಪಡೆ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್ಮರವರ ನಿಕಟ ರಾಜಕೀಯ ಸಂಪರ್ಕ.

ಎರಡು ಬಾರಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಮಹಾಲಕ್ಷ್ಮೀಪುರಂ ವಾರ್ಡ್ ನಿಂದ ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್.ಕೇಶವಮೂರ್ತಿರವರನ್ನು ಆಯ್ಕೆ.

ಎಸ್.ಕೇಶವಮೂರ್ತಿ ಧರ್ಮಪತ್ನಿ ಶ್ರೀಮತಿ ಚೇತನಾ ಕೇಶವಮೂರ್ತಿ ರವರು ಸಮಾಜ ಸೇವೆ ತೊಡಗಿಸಿಕೊಂಡಿದ್ದಾರೆ.

ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಶಂಶೀರ್ ಬೇಗ್ ,ಶಿವಕುಮಾರ್ ,ಕುಮಾರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪರಿಸರ ರಾಮಕೃಷ್ಣ, ಸುಧೀಂದ್ರ, ನಟರಾಜ್ ರವರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments