Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿ.ಟಿ.ಪ್ಯಾರಡೈಸ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ 132ನೇ ಜನ್ಮ ದಿನಾಚರಣೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ.

ಡಾ.ಬಿ.ಆರ್ ಅಂಬೇಡ್ಕರ್ ಬಾವಚಿತ್ರಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮತ್ತು ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮೀದೇವಿ, ಚಲನಚಿತ್ರ ನಟ ಅವಿನಾಶ್, ಉಪ ಆಯುಕ್ತರಾದ ಡಿ.ಕೆ.ಬಾಬು, ಅಧ್ಯಕ್ಷರಾದ ಅಮೃತ್ ರಾಜ್ ರವರು ಪುಷ್ಪನಮನ ಸಲ್ಲಿಸಿ, ದೀಪಾ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಸಂವಿಧಾನ ರಚನೆ ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಎರಡು ವರ್ಷಗಳ ಕಾಲ ಸಮಗ್ರ ಅಧ್ಯಯನ ಮಾಡಿ, ವಿಶ್ವದ ಅತಿ ಶೇಷ್ಠ ಸಂವಿಧಾನ ನಮ್ಮ ದೇಶಕ್ಕೆ ನೀಡಿದರು.

ಕಾನೂನು ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದರು .
ಮಹಿಳೆಯರಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದರು ಇದರಿಂದ ಶಿಕ್ಷಣ, ಉದ್ಯೋಗ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಕ್ಕಿತ್ತು.

ಬಿಬಿಎಂಪಿಯಲ್ಲಿ ಜನಸೇವೆ ಮಾಡಲು ಅವಕಾಶ ಸಿಕ್ಕಿರುವುದು ಪುಣ್ಯ.

ಚಲನಚಿತ್ರ ನಟ ಅವಿನಾಶ್ ಮಾತನಾಡಿ ದೇಶ ಕಂಡ ಮೇರು,ಮೇಧಾವಿ ವ್ಯಕ್ತಿ , ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು.
ಅವರ ಜೀವನ ಚರಿತ್ರೆ, ಅವರ ಬರಹಗಳನ್ನು ಇಂದಿನ ಯುವ ಸಮೂಹ ಓದಬೇಕು ಮತ್ತು ಅವರು ನಡೆದ ಹಾದಿಯಲ್ಲಿ ಇಂದಿನ ಯುವಕರು ನಡೆಯಬೇಕು ಎಂದು ಹೇಳಿದರು

ಎ.ಅಮೃತ್ ರಾಜ್ ರವರು ಮಾತನಾಡಿ ಭಾರತಕ್ಕೆ ಸಂವಿಧಾನ ಎಂಬುದು ಪವಿತ್ರ ಗ್ರಂಥವಾಗಿದೆ.

ಅಂತಹ ಶೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕ ಭಾರತರತ್ನ ಬಿ.ಆರ್.ಅಂಬೇಡ್ಕರ್ ರವರು .

ಎಲ್ಲ ಧರ್ಮ ಮತ್ತು ವರ್ಗದವರು ಸರಿಸಮಾನವಾಗಿ ಬಾಳುವ ಅವಕಾಶ ನೀಡಿದೆ.

ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಎಲ್ಲ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನ ನೀಡಿದೆ.

ನಮ್ಮ ಸಂಘದ ವತಿಯಿಂದ ಫ್ರೀಡಂ ಪಾರ್ಕ್ ಅವರಣದಲ್ಲಿ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಶೀಘ್ರದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.

ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ “ಡಾ|| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನಯನ್ನು
ಡಾ. ಮದನ್, ನುರಿತ ಆಯುರ್ವೇದಿಕ್ ವೈದ್ಯರು ಶ್ರೀ ವೀರಣ್ಣ ಮಗಿ, ಪೊಲೀಸ್ ಇನ್ಸ್‌ಸ್ಪೆಕ್ಟರ್, ಮೂಗು ಸುರೇಶ್, ಹಿರಿಯ ಚಲನಚಿತ್ರ ಹಾಸ್ಯ ನಟರು
ಮಾವಳ್ಳಿ ಶಂಕರ್, ಅಧ್ಯಕ್ಷರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಿ.ವಿ. ದೇವರಾಜು, ಕನ್ನಡ ಪರ ಹೋರಾಟಗಾರರು
ಅರಸೀಕೆರೆ ಉಮೇಶ್‌, ಸಮಾಜ ಸೇವಕರು
ಧನಂಜಯ, ಚಲನಚಿತ್ರ ನಟ ಮತ್ತು ಖ್ಯಾತ ನಿರೂಪಕ
ಬಸವರಾಜು, ವ್ಯವಸ್ಥಾಪಕ ನಿರ್ದೇಶಕರು, ಕಾರ್ಲ್ಟನ್ ಮೀಡಿಯಾ ಶ್ರೀ ವಿಠಲಯ್ಯ, ನಿವೃತ್ತ ಸಹಾಯಕ ಕಂದಾಯ ಅಧಿಕಾರಿ ಮತ್ತು ಪಾಲಿಕೆ ಅಧಿಕಾರಿ/ನೌಕರರಿಗೆ “ಡಾ|| ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಡಿ.ರಾಮಚಂದ್ರ, ರುದ್ರೇಶ್, ಮಂಜೇಗೌಡ, ಬಾಬಣ್ಣ, ಮಂಜುನಾಥ್, ಸಂತೋಷ್ ಕುಮಾರ್ ನಾಯಕ್, ನರಸಿಂಹರವರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments