ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆ ಸಮಾರಂಭ.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆಗೆ ರಾಜ್ಯ ಬಿಜೆಪಿ ಯುವ ನಾಯಕಾರಾದ ಡಾ.ಅರುಣ್ ಸೋಮಣ್ಣರವರು, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್,ಕೆ.ಉಮೇಶ್ ಶೆಟ್ಟಿ, ದಾಸೇಗೌಡ ಗಂಗಭೈರಯ್ಯ, ರೂಪಲಿಂಗೇಶ್ವರ್ ರವರು ದೀಪಾ ಬೆಳಗಿಸಿ, ಪುಷ್ಪನಮನ ಸಲ್ಲಿಸಿದರು
ಡಾ.ಅರುಣ್ ಸೋಮಣ್ಣರವರು ಮಾತನಾಡಿ ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಸಂವಿಧಾನ ಎಂಬುದು ಪವಿತ್ರ ಗ್ರಂಥವಾಗಿದೆ.
ಅಂತಹ ಶೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕ ಭಾರತರತ್ನ ಬಿ.ಆರ್.ಅಂಬೇಡ್ಕರ್ ರವರು .
ಎಲ್ಲ ಧರ್ಮ ಮತ್ತು ವರ್ಗದವರು ಸರಿಸಮಾನವಾಗಿ ಬಾಳುವ, ಸಹೋರತ್ವದಲ್ಲಿ ಬದುಕಲು ಸಂವಿಧಾನದಲ್ಲಿ ಅವಕಾಶ ನೀಡಿದೆ.
ಸಂವಿಧಾನದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮೂಲಕ ತಮ್ಮ ನಾಯಕನ್ನು ಅರಿಸುವ ಶಕ್ತಿ ಪಡೆದಿದ್ದಾರೆ.
ರಾಜಕಾರಣ ನಿಂತ ನೀರಲ್ಲ, ಜನಸೇವೆ ಮಾಡಲು ರಾಜಕೀಯ ಕ್ಷೇತ್ರ ಉತ್ತಮವಾದ ವೇದಿಕೆಯಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರುಗಳಾದ ರಾಜಪ್ಪ, ಶ್ರೀಧರ್, ಹೆಚ್. ರಮೇಶ್, ಸಿದ್ದಾರ್ಥರವರು, ಸುರೇಶ್,ಗೋಪಾಲ್, ಭಾಗವಹಿಸಿದ್ದರು.