Tuesday, June 6, 2023
Homeರಾಜ್ಯತುಮಕೂರುಎಎಪಿ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್ ತುಮಕೂರಿನ ಚುನಾವಣಾ ಮತ್ತು ಸಂಘಟನಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ

ಎಎಪಿ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್ ತುಮಕೂರಿನ ಚುನಾವಣಾ ಮತ್ತು ಸಂಘಟನಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ

ತುಮಕೂರು: ಕರ್ನಾಟಕದ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್ ಅವರನ್ನು ತುಮಕೂರಿನ ಚುನಾವಣಾ ಮತ್ತು ಸಂಘಟನಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಇದು ಅವರ ಸಮರ್ಪಣಾ ಮನೋಭಾವ ಮತ್ತು ಪಕ್ಷದ ಉದ್ದೇಶ ಈಡೇರಿಕೆ ಕಡೆಗೆ ವಹಿಸಿರುವ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ.

ಪರಿಣತ ಕನ್ಸಲ್ಟೆಂಟ್ ಡಯಾಬಿಟಾಲಜಿಸ್ಟ್ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ವಿಶ್ವನಾಥ್ ಅವರು ಸಾಕಷ್ಟು ಸಮಯದಿಂದ ಎಎಪಿ ಪಕ್ಷದಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಅವರ ಪ್ರಭಾವಶಾಲಿ ರುಜುವಾತು, ಸಾರ್ವಜನಿಕ ಸೇವೆಯಲ್ಲಿನ ಅನುಭವ, ಜನರ ಆರೋಗ್ಯ, ಕ್ಷೇಮ, ಸಂತೋಷದ ಬಬಗೆಗಿನ ಹಿತಾಸಕ್ತಿಯ ಮೌಲ್ಯವು ಅವರನ್ನು ಪಕ್ಷಕ್ಕೆ ಅತ್ಯಮೂಲ್ಯ ಆಸ್ತಿಯನ್ನಾಗಿ ಮಾಡಿದೆ. ತುಮಕೂರಿನ ಚುನಾವಣಾ ಮತ್ತು ಮತಗಟ್ಟೆ ಉಸ್ತುವಾರಿಯಾಗಿ ಅವರ ನೇಮಕವು ಅವರ ಅಸಾಧಾರಣ ನಾಯಕತ್ವದ ಗುಣಗಳು ಮತ್ತು ಸಮಾಜದ ಸ್ವಾಸ್ಥ್ಯ ಮತ್ತು ಸುಧಾರಣೆಗಾಗಿ ಮಾಡುವ ಅವರ ಕೆಲಸಗಳನ್ನು ಗುರುತಿಸಿದಂತ್ತಾಗಿದೆ.

ಕರ್ನಾಟಕದಲ್ಲಿ ಎಎಪಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಡಾ.ವಿಶ್ವನಾಥ್ ಅವರ ನೇಮಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅವಕಾಶವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ತುಮಕೂರು ನಿರ್ಣಾಯಕ ಕ್ಷೇತ್ರವಾಗಿದ್ದು, ಡಾ.ವಿಶ್ವನಾಥ್ ಅವರ ನಾಯಕತ್ವ ಮತ್ತು ಜನರ ಒಳಿತಿನ ಬಗ್ಗೆ ಇರವ ಅನುಕಂಪ ಈ ಕ್ಷೇತ್ರದಲ್ಲಿ ಪಕ್ಷದ ಯಶಸ್ಸಿಗೆ ಸಹಕಾರಿಯಾಗಲಿದೆ.

ಚುನಾವಣಾ ಉಸ್ತುವಾರಿಯಾಗಿ ಡಾ.ವಿಶ್ವನಾಥ್ ಅವರು ತುಮಕೂರಿನ ಜನತೆಯ ಸಬಲೀಕರಣ ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಹೆಚ್ಚು ಗಮನ ನೀಡಲಿದ್ದಾರೆ. ಸಹಾನುಭೂತಿ ಮತ್ತು ದಕ್ಷತೆಯೊಂದಿಗೆ ಸ್ವಾಸ್ಥ್ಯ ಕ್ಷೇತ್ರದ ವೃತ್ತಿಪರತೆಯಲ್ಲಿನ ಅವರ ಟ್ರ್ಯಾಕ್ ರೆಕಾರ್ಡ್ ತುಮಕೂರಿನ ಜನರಿಗೆ ಇವರೇ ಕೆಲಸಕ್ಕೆ ಸೂಕ್ತ ವ್ಯಕ್ತಿ ಎಂಬ ವಿಶ್ವಾಸವನ್ನು ತಂದುಕೊಡಲಿದೆ.

ಡಾ. ವಿಶ್ವನಾಥ್ ಅವರ ಜನಸೇವೆಯಲ್ಲಿನ ಅವರ ಬದ್ಧತೆಯು ಆರೋಗ್ಯಕರ, ಸಂತಸದಿಂದ ಕೂಡಿದ ಹಾಗೂ ಅಭಿವೃದ್ಧಿಶೀಲ ಸಮಾಜಕ್ಕಾಗಿ ಇರುವ ಅವರ ದೃಷ್ಟಿಕೋನವನ್ನು ಎತ್ತಿ ತೋರಿಸುತ್ತದೆ. ಅವರ ಮೌಲ್ಯಗಳು ಎಎಪಿಯ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತದ ತತ್ವಗಳೊಂದಿಗೆ ಹೊಂದಿಕೊಂಡಿವೆ. ಅವರ ನೇಮಕವು ಕರ್ನಾಟಕ ರಾಜ್ಯಕ್ಕೆ ಬದಲಾವಣೆ ತರಲು ಮತ್ತು ಸಮಗ್ರತೆ, ನೈತಿಕತೆ ಮತ್ತು ಶಾಂತಿಯ ರಾಜಕೀಯವನ್ನು ಉತ್ತೇಜಿಸುವ ಪಕ್ಷದ ಬದ್ಧತೆಯನ್ನು ಬಲಪಡಿಸುತ್ತದೆ.

ರಾಜ್ಯದಲ್ಲಿ ಎಎಪಿ ಸತತವಾಗಿ ಬೆಂಬಲ ಪಡೆಯುತ್ತಿದ್ದು, ಡಾ.ವಿಶ್ವನಾಥ್ ಅವರ ನೇಮಕದೊಂದಿಗೆ ಪಕ್ಷವು ತನ್ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ತುಮಕೂರಿನ ಜನತೆ ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಅವರ ನೇಮಕ ಈ ಕ್ಷೇತ್ರದ ಪಾಲಿಗೆ ಸಕಾರಾತ್ಮಕ ಬೆಳವಣಿಗೆಯಾಗಿದೆ.
ತುಮಕೂರಿನ ಚುನಾವಣಾ ಉಸ್ತುವಾರಿಯಾಗಿ ಡಾ. ವಿಶ್ವನಾಥ್ ಅವರ ನೇಮಕವು ಕರ್ನಾಟಕದಲ್ಲಿ ಬದಲಾವಣೆಯನ್ನು ತರಲು ಮತ್ತು ಸಮಗ್ರತೆ ಪಾರದರ್ಶಕತೆ ಮತ್ತು ಸಮೃದ್ಧಿಯ ರಾಜಕೀಯವನ್ನು ಉತ್ತೇಜಿಸಲು ಎಎಪಿಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಚುನಾವಣೆಯ ಸಮಯ ಬಹಳಾ ಹತ್ತಿರದಲ್ಲಿದ್ದು, ಇದೀಗ ಎಲ್ಲರ ಕಣ್ಣು ಎಎಪಿ (AAP) ಪಕ್ಷ ಮತ್ತು ರಾಜ್ಯದಲ್ಲಿ ಪಕ್ಷದ ಕಾರ್ಯಕ್ಷಮತೆಯ ಮೇಲೆ ನೆಲೆಸಿದೆ.

RELATED ARTICLES
- Advertisment -
Google search engine

Most Popular

Recent Comments