Tuesday, June 6, 2023
Homeದೇಶಹನಿಗವನಗಳು

ಹನಿಗವನಗಳು

ಆರು ಒಳ ಏಟುಗಳು

1. ಮನೆಗೆ ನೆಂಟರು ಬರುತ್ತಾರೆಂದು
ಕೋಳಿ ಕುಕ್ಕರ್ ತರುತ್ತಿದ್ದೆನು
ಟೋಲ್ ನಲ್ಲೇ ತಡೆದು ಲೆಕ್ಕ ಕೇಳಿದರು
ಯಾವುದು ಕೊಡಲಿ..?

2, ಕುಕ್ಕರ್ ತಂದು ಬ್ಲಾಸ್ಟ್ ಆದರೆ
ತೌರಿಗೆ ಹಾರಿ ಹೋಗುತ್ತಾಳೆ ಗೌರಿ
ಲಿಕ್ಕರ್ ಕುಡಿದು ಔಟಾದರೆ
ಸ್ವಗ೯ದಲ್ಲಿ ತೇಲಿ ಹೋಗುತ್ತಾನೆ ಶೌರಿ

3. ಲಿಕ್ಕರ್ ಕುಕ್ಕರ್ ಆಮಿಷಗಳಿಗೆ
ಬಲಿಯಾಗದಿರಿ ಕರೆ
ಕೊಟ್ಟರು ಈರಣ್ಣನವರು
ಅಪ್ಪ ನಾನು ಸೇಲ್ ಆದೆ ಸೆರೆ
ಕುಡಿದು ಘೋಷಿಸಿದರು ಕಾಶಿನಾಥರು

4. ಚುನಾವಣಾ ಅಖಾಡಕ್ಕೆತೊಡೆ
ತಟ್ಟಿ ಕರೆದರು ಮೀಸೆ ತಿರುವಿ
ಸರಿಯಾದ ಗದೆ ಹುಡುಕುತ್ತಿರುವರು
ಭೀಮ ದುರ್ಯೋಧನರು ಗಡ್ಡ ನೀವಿ

5. ಅಳೆದು ತೂಗಿ ನೋಡ್ತಾರೆ
ಹುರಿಯಾಳುಗಳ ವೈಟೇಜ್
ಆಸ್ತಿ ಅಂತಸ್ತು ಫೈನಾನ್ಸ್
ಮತ್ತು ಏಜ್ ..!

6. ಮೊನ್ನೆ ಆ ಪಾಟಿ೯ಯ
ಮೊದಲ ಪಟ್ಟಿ ಪ್ರಕಟ
ಸಿಕ್ಸರ್ ಬಾರಿಸಿದ ಖುಷಿ
ಚಪ್ಪಾಳೆ ತಟ್ಟಿ ಸ್ವಾಗತಿಸಿದರು
ಇಂದು 2ನೇ ಪಟ್ಟಿ ಪ್ರಕಟಿಸಿದರು
ಕೆಲವರು ಬೌಂಡರಿ ಗೆರೆ ದಾಟಿದರು
ನಾಳೆ ಬರುತ್ತಿದೆ 3ನೇ ಪಟ್ಟಿ
ಕಾಯ್ದಿದೆ ಪಾಟಿ೯ಗಳಿಗೆ ಒಳ ಏಟು


ಗೊರೂರು ಅನಂತರಾಜು
ಹಾಸನ

RELATED ARTICLES
- Advertisment -
Google search engine

Most Popular

Recent Comments