ಮೈಸೂರು ಜಿಲ್ಲೆ, ವರುಣ ಹೋಬಳಿ, ಬಿದರಗೂಡು ಗ್ರಾಮ ಪಂಚಾಯತಿಯಲ್ಲಿ ಇವತ್ತು ಅಂದರೆ 30.03.2023 ಗುರುವಾರ ನಡೆದ ಉಚಿತ ಕಣ್ಣಿನ ತಪಾಸನ ಶಿಬಿರ ಮತ್ತು ಉಚಿತ ಕನ್ನಡಕ ವಿತರಣ ಕಾರ್ಯಕ್ರಮವು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಪ್ರಯುಕ್ತ ವನಸಿರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಎ ಎಸ್ ಜಿ ಕಣ್ಣಿನ ಆಸ್ಪತ್ರೆ ಮತ್ತು ಜೆ ಎಸ್ ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮೈಸೂರು ಇವರ ವತಿಯಿಂದ ಸುಮಾರು 150 ರಿಂದ 175 ಫಲಾನುಭವಿಗಳಿಗೆ ಕಣ್ಣಿನ ತಪಾಸಣೆ ಮಾಡಿದ್ದು ಅದರಲ್ಲಿ 50 ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪರಮಶಿವಮೂರ್ತಿ ಸ್ವಾಮಿಗಳು ಬರಡನಪುರ ಮಠ, ವನಸಿರಿ ಸಂಸ್ಥೆಯ ಸಂತೋಷ್ ಎನ್ ಕಾರ್ಯದರ್ಶಿ, ಜೆ ಎಸ್ ಎಸ್ ಕಾಲೇಜಿನ ಎನ್ಎಸ್ ಎಸ್ ಶಿಬಿರ ಅಧಿಕಾರಿಗಳಾದ ಡಾ. ಶಶಿ ಬಿಂದು, ಡಾ. ಪ್ರೀತಿ ಹೆಚ್ ಮ್ ಜೆ ಎಸ್ ಎಸ್ ಕಾಲೇಜ್ ಮತ್ತು ಬಿದರಗೂಡು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.
ಉಚಿತ ಕಣ್ಣಿನ ತಪಾಸನ ಶಿಬಿರ ಮತ್ತು ಉಚಿತ ಕನ್ನಡಕ ವಿತರಣ ಕಾರ್ಯಕ್ರಮ
RELATED ARTICLES