Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿನನ್ನ ವಿರುದ್ದ ರಾಜಕೀಯ ಷಡ್ಯಂತ್ರ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ- ಸಚಿವ ಮುನಿರತ್ನ

ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ- ಸಚಿವ ಮುನಿರತ್ನ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ:ಜೆ.ಪಿ.ಪಾರ್ಕ್ ಶಾಸಕರ ಕಛೇರಿಯಲ್ಲಿ ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್ ರವರು ತೋಟಗಾರಿಕೆ ಸಚಿವರಾದ ಮುನಿರತ್ನರವರ ವಿರುದ್ದ ಮಾಡಿರುವ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡಲು ಸಚಿವರಾದ ಮುನಿರತ್ನರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು

ಸಚಿವರಾದ ಮುನಿರತ್ನ ರವರು ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್ ರವರು ಏಳು ವರ್ಷಗಳಿಂದ ಬಲ್ಲೆ.
ಅವರ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ರವರು ತಮಿಳು,ತೆಲುಗು, ಮಾಲಯಳಂ ಭಾಷೆಯಲ್ಲಿ ಮಾತನಾಡಿ ಎಂದು ಹೇಳುತ್ತಿದ್ದರು.

ಈಗ ನನ್ನ ವಿರುದ್ದ ಪಿತೂರಿ ಮಾಡಿ ಬಾಷೆ,ಜಾತಿ ವಿಷಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ನಾನು ವಿದ್ಯಾಭ್ಯಾಸ ಮಾಡಿರುವುದು ಕನ್ನಡ ಮಧ್ಯಮದಲ್ಲಿ .

ಜಾತಿ,ಭಾಷೆ ರಾಜಕೀಯಕ್ಕೆ ಬೆಂಗಳೂರುನಗರವನ್ನ ಹಾಳು ಮಾಡಬೇಡಿ.

ಕನ್ನಡನಾಡಿನಿಂದ ಹಲವಾರು ನಟರು ಹೊರ ರಾಜ್ಯದಲ್ಲಿ ಸೂಪರ್ ಸ್ಟಾರ್ ಗಳಾಗಿದ್ದಾರೆ.

ನಾನು ಉಸಿರು, ನನ್ನ ಜೀವನ ಇಲ್ಲೆ.

ಚುನಾವಣೆ ಇನ್ನ 40ದಿನ ಬಾಕಿ ಇದೆ ಅಣ್ಣ ಡಿ.ಕೆ.ಶಿವಕುಮಾರ್ ರವರು ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದಾರೆ, ಅದರೆ ಡಿ.ಕೆ.ಸುರೇಶ್ ರವರು ಆರ್.ಆರ್.ಕ್ಷೇತ್ರ ಬಿಟ್ಟು ಎಲ್ಲು ಹೋಗುತ್ತಿಲ್ಲ.

ಬಿಜೆಪಿ ಕಾರ್ಯಕರ್ತೆ ಸುನಂದ ಬೋರೆಗೌಡರ ಮೇಲೆ ಅಲ್ಪಸಂಖ್ಯಾತ ಮಹಿಳೆ 50ಸಾವಿರ ಹಣ ನೀಡುತ್ತಾರೆ.

ಲೋಕಸಭಾ ಸದಸ್ಯರಾಗಿ ಡಿ.ಕೆ.ಸುರೇಶ್ ರವರ ಕೊಡುಗೆ ಏನು.

ನಿಮ್ಮ ಮತ್ತು ನನ್ನ ನಡುವೆ ಅಭಿವೃದ್ದಿ ವಿಷಯದಲ್ಲಿ ಚರ್ಚೆ ಮಾಡೋಣ.

ಕಾಂಗ್ರೆಸ್ ಕಾರ್ಯಕರ್ತರ ಅವರ ಕಾರ ಮೇಲೆ ಅವರೆ ಕಲ್ಲು ಹೊಡೆದು ನನ್ನ ಬೆಂಬಲಿಗರ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲು ಮಾಡುವುದು ಸರಿಯೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿದೆ.

ಆನೆಕಲ್ಲು,ಕುಣಿಗಲ್, ಬೆಂಗಳೂರು ದಕ್ಷಿಣ, ಮಾಗಡಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲದೇ ಕಾಂಗ್ರೆಸ್ ಮುಕ್ತವಾಗಿದೆ.

ಐದು ವರ್ಷಗಳಿಂದ ಮತ್ತು ಕೊವಿಡ್ ಸಾಂಕ್ರಮಿಕ ಲಾಕ್ ಡೌನ್ ಸಂದ್ರಭದಲ್ಲಿ ಎಲ್ಲಿ ಹೋಗಿದ್ದರು.

ಲೋಕಸಭಾ ಸದಸ್ಯರು ಎಲ್ಲಿ ಹೋಗಿದ್ದರು.

ಅನ್ಯ ಭಾಷಿಕ ಮಕ್ಕಳಿಗೆ ಕನ್ನಡ ಭಾಷೆ ಕಲಿಯುವಂತೆ ಹೇಳಿದ್ದೇನೆ.

ನನ್ನ ಐದು ತಲೆ ಮಾರುಗಳಿಂದ ಮಲ್ಲೇಶ್ವರಂ ನಿವಾಸಿಯಾಗಿದ್ದೇನೆ.

ಮಾಜಿ ಪಾಲಿಕೆ ಸದಸ್ಯ ಶ್ರೀನಿವಾಸಮೂರ್ತಿ(ಜಾನಿ), ಸುನಾಂದಬೋರೆಗೌಡ ಒಕ್ಕಲಿಗ ಸಮುದಾಯದವರ ಎಲ್ಲರು ಕುಟುಂಬದಂತೆ ಇದ್ದೇವೆ.

ನನ್ನ ವಿರುದ್ದ ಪಿತೂರಿ,ರಾಜಕೀಯ ಷಡ್ಯಂತ್ರ ಮಾಡುವವರಿಗೆ ಒಳ್ಳೆಯ ಬುದ್ದಿ ಕೊಡಲಿ.

RELATED ARTICLES
- Advertisment -
Google search engine

Most Popular

Recent Comments