Saturday, June 3, 2023
Homeರಾಜ್ಯವಿಶ್ವ ರಂಗಭೂಮಿ ದಿನಾಚರಣೆ

ವಿಶ್ವ ರಂಗಭೂಮಿ ದಿನಾಚರಣೆ

ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಮಾರ್ಚ್ 27, 2023ರಂದು ಸೋಮವಾರ ಸಂಜೆ ನಗರದ ನಯನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅಯೋಜಿಸಿತ್ತು.

ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಬಿಬಿಎಂಪಿ ಸದಸ್ಯ ಎಂ.ಮುನಿರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಪರಿಚಾರಕರಾದ ಟಿ.ಎನ್.ಸಾಯಿಕುಮಾರ್ ಮತ್ತು ಹೆಚ್.ಪರಮೇಶ್ವರ ಅವರಿಗೆ 2023ನೇ ಸಾಲಿನ ಪರಂಪರಾ ರಂಗ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಲೇಖಕ ಕೆ.ಎನ್.ಭಗವಾನ್, ಕಲಾಕುಟೀರ ವೇದಿಕೆಯ ಸೋ.ಫಾಲನೇತ್ರ ಹಾಗೂ ಕನ್ನಡ ಪರಿಚಾರಕ ಟಿ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪರಂಪರಾ ಆಧ್ಯಕ್ಷರಾದ ಜಿ.ಪಿ.ರಾಮಣ್ಣ, ಕಲಾಪೋಷಕರಾದ ಜಿ ಎಸ್ ನಂಜುಂಡಸ್ವಾಮಿ, ಮಂ.ಅ.ವೆಂಕಟೇಶ್, ಎ.ಎಸ್.ಶ್ರೀನಾಥ್ ಮತ್ತು ಆರ್.ರಾಘವೇಂದ್ರ ಅವರಿಗೆ ಪರಂಪರಾ ಸ್ನೇಹಾಭಿನಂದನೆ ಸಲ್ಲಿಸಿದರು.

ಸಮಾರಂಭದ ನಂತರ ಕೆ.ಪರಮಶಿವಂ ಅವರ ನಿರ್ದೇಶನದ, ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ನಾಟಕ ಪ್ರದರ್ಶನವಿತ್ತು. ನಾಟ್ಯಮಯೂರಿ ಪಿ.ಚಂದನ ಅವರಿಂದ ನೃತ್ಯ ಕಾರ್ಯಕ್ರಮವಿತ್ತು

RELATED ARTICLES
- Advertisment -
Google search engine

Most Popular

Recent Comments