Tuesday, June 6, 2023
Homeನೃತ್ಯವಾಗ್ಗೇಯಕಾರ ತ್ಯಾಗರಾಜರ ರಾಮಾಯಣ

ವಾಗ್ಗೇಯಕಾರ ತ್ಯಾಗರಾಜರ ರಾಮಾಯಣ

ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ದಿಗ್ಗಜ, ಶ್ರೀ ತ್ಯಾಗರಾಜರ ಒಂದೊಂದು ಕೃತಿಗಳೂ ಅನುಪಮ-ಅರ್ಥಗರ್ಭಿತ. ಭಕ್ತಿ ರಸಾಯನದಲ್ಲಿ ಮಿಂದೇಳುವ ಕೃತಿಗಳ ಗಾನಮಾಧುರ್ಯಕ್ಕೆ ಮರುಳಗದವರೇ ಇಲ್ಲ. ಸಂಗೀತಕ್ಕೆ ಒಂದು ಹೊಸ ವರ್ಚಸ್ಸು-ಜೀವಕಳೆ ತುಂಬಿದ, ಹೊಸರಾಗಗಳಿಂದ ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನ್ ವಾಗ್ಗೇಯಕಾರರು. ನಟನಂ ಈ ನೃತ್ಯಾರ್ಪಣೆ ಆ ಮಹಾನ್ ಚೇತನಕ್ಕೆ ಸಮರ್ಪಿತ.
‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ಸಂಸ್ಥೆಯ ನಿರ್ದೇಶಕಿ, ಅಭಿನಯ ಚತುರೆ, ಆಚಾರ್ಯ ಡಾ. ರಕ್ಷಾ ಕಾರ್ತೀಕ್, ಶ್ರೀ ತ್ಯಾಗರಾಜರ ಹೃದಯಸ್ಪರ್ಶಿ ರಚನೆಗಳಿಗೆ ಮೂರ್ತರೂಪ ನೀಡುವ ಸಾರ್ಥಕ ಪ್ರಯೋಗ ಮಾಡಿದವರಲ್ಲಿ ಮುಖ್ಯರು. ಇಂದಿಗೂ ಈಕೆ, ದಂತವೈದ್ಯೆಯಾಗಿ ವೃತ್ತಿ ನಿರ್ವಹಿಸುತ್ತಾ, ನೃತ್ಯ ಕಲಾವಿದೆಯಾಗಿ ಸುವಿಖ್ಯಾತಿ ಪಡೆದು, ವೃತ್ತಿ-ಪ್ರವೃತ್ತಿಗಳನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿರುವ ಕ್ರಿಯಾಶೀಲೆ. ಕೋರಮಂಗಲದ ಮತ್ತು ಜಯನಗರದಲ್ಲಿ ತಮ್ಮದೇ ಆದ ‘’ ನಟನಂ ಇನ್ಸಿಟ್ಯೂಟ್ ಆಫ್ ಡಾನ್ಸ್’’ ಎಂಬ ತಮ್ಮ ನೃತ್ಯಶಾಲೆಯ ಮೂಲಕ ನೂರಾರು ಮಕ್ಕಳಿಗೆ ಭರತನಾಟ್ಯ, ಜಾನಪದ ಮತ್ತು ಕಾನ್ಟೆಂಪೊರರಿ ನೃತ್ಯಗಳಲ್ಲಿ ತರಬೇತಿ ನೀಡುತ್ತಿರುವ ನವರಸಗಳ ಅಭಿನಯಕ್ಕೆ ಹೆಸರಾದ ರಕ್ಷಾಗೆ ಅಭಿನಯ ಪ್ರಾಧಾನ್ಯ ಕೃತಿಗಳ ಬಗ್ಗೆ ಹೆಚ್ಚು ಪ್ರೀತಿ.
ಇದೇ ಭಾನುವಾರ ದಿ. 2 ನೇ ಏಪ್ರಿಲ್ ಸಂಜೆ 5 ಗಂಟೆಗೆ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಡಾ.ರಕ್ಷಾ ಕಾರ್ತೀಕ್ ತಮ್ಮ ಶಿಷ್ಯೆಯರೊಂದಿಗೆ ತ್ಯಾಗರಾಜರಿಗೆ ನೃತ್ಯಾರ್ಪಣೆ ಸಲ್ಲಿಸಲಿದ್ದಾರೆ. ತ್ಯಾಗರಾಜರ ಹಲವು ಕೃತಿಗಳನ್ನು ಸಮರ್ಥವಾಗಿ ನೃತ್ಯಕ್ಕೆ ಅಳವಡಿಸಿ ಪ್ರದರ್ಶಿಸಲಿರುವ ಇವರ ‘ತ್ಯಾಗರಾಜ ರಾಮಾಯಣ’ -ಸುಮನೋಹರ ನೃತ್ಯ ಪ್ರಸ್ತುತಿಯನ್ನು ವೀಕ್ಷಿಸಲು ಸರ್ವರಿಗೂ ಆದರದ ಸುಸ್ವಾಗತ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್. ಸಡಗೋಪನ್, ಡಾ. ಎಂ.ಆರ್.ವಿ. ಪ್ರಸಾದ್, ನಾಟ್ಯಗುರು ಮಿನಾಲ್ ಪ್ರಭು ಮುಂತಾದವರು ಭಾಗವಹಿಸಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments