Tuesday, June 6, 2023
Homeದೇಶಕೆಯುಡಬ್ಲ್ಯೂಜೆ ದತ್ತಿ ನಿಧಿಗೆ 1.10 ಲಕ್ಷ ರೂ ನೀಡಿದ ಪತ್ರಕರ್ತ ಟಿ.ಕೆ.ಮಲಗೊಂಡ

ಕೆಯುಡಬ್ಲ್ಯೂಜೆ ದತ್ತಿ ನಿಧಿಗೆ 1.10 ಲಕ್ಷ ರೂ ನೀಡಿದ ಪತ್ರಕರ್ತ ಟಿ.ಕೆ.ಮಲಗೊಂಡ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ದತ್ತಿ ನಿಧಿಗೆ ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ
ಟಿ.ಕೆ.ಮಲಗೊಂಡ ಅವರು 1.10ಲಕ್ಷ ರೂ ನೀಡಿದ್ದಾರೆ.

ದತ್ತಿ ನಿಧಿ ಸ್ಥಾಪಿಸಿದ ಟಿ.ಕೆ.ಮಲಗೊಂಡ ಅವರನ್ನು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿದರು.

ಅಪರಾಧಕ್ಕೆ ಸವಾಲು ಪತ್ರಿಕೆಯ ಸಂಪಾದಕರು ಆಗಿರುವ ಅವರ ಟಿ.ಕೆ.ಮಲಗೊಂಡ ಅವರು, ಪ್ರತಿ ವರ್ಷ ಕೆಯುಡಬ್ಲ್ಯೂಜೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ
ಅತ್ಯುತ್ತಮ ಅಪರಾಧ ವರದಿಗಾಗಿ ನೀಡುವಂತೆ ತಿಳಿಸಿದ್ದಾರೆ.

ಸರಳ ಸಮಾರಂಭದಲ್ಲಿ ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘದ ಇರ್ಫಾನ್ ಷೇಖ್, ಯಾದಗಿರಿ ಜಿಲ್ಲಾ ಸಂಘದ ಖಜಾಂಚಿ ಕುಮಾರಸ್ವಾಮಿ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ದಿನೇಶ್ ಗೌಡಗೆರೆ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments