ಕೊಪ್ಪಳ.ಅಂತಾರಾಷ್ಟ್ರೀಯಮಹಿಳಾದಿನಾಚರಣೆ-2023ರ ಪ್ರಯುಕ್ತಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಫೆ.22ರಂದು ನಡೆದ ಬೃಹತ್ ಮಹಿಳಾ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ಕೌಶಲ್ಯ ಅಭಿವೃದ್ಧಿ ಮೇಳವು ಸ್ತ್ರೀ ಶಕ್ತಿ ಬಲದ ಸಂದೇಶಕ್ಕೆ ಹೊಸ ಮುನ್ನುಡಿ ಬರೆಯಿತು.

ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆಯ ಪಕ್ಕದ ಆವರಣದಲ್ಲಿ ತಾಲೂಕಿನ ಮಹಿಳೆಯರು ಕಿಕ್ಕಿರಿದು ಸೇರಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ‌‌‌ ವಿದ್ಯುಕ್ತ್‌ ಚಾಲನೆ ನೀಡಿದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (ಭಾರತ ಸರ್ಕಾರ)ದ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಘನ ಉಪಸ್ಥತಿ ವಹಿಸಿ ಮಾತನಾಡಿ,
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರ ಪರ ಯೋಜನೆಗಳನ್ನು ರೂಪಿಸುತ್ತಿವೆ. ಇದರಿಂದಾಗಿ ಈಗ ಮಹಿಳೆಯರು ಆರ್ಥಿಕ ಯೋಚನೆ ಶಕ್ತಿ ಪಡೆದಿದ್ದಾರೆ; ಅವರ ಧನಿಗೆ ಈಗ ಬಲ ಬಂದಿದೆ ಎಂದರು.
ನಮ್ಮ‌ ಮಕ್ಕಳಿಗೆ ಶಿಕ್ಷಣ ನೀಡಿದಾಗ, ಮಹಿಳೆಯರು ಸಹ ಆರ್ಥಿಕವಾಗಿ ಸಬಲರಾದಾಗ ಮಹಿಳಾಧನಿಗೆ ಬಲಬರುತ್ತದೆ ಎಂದು ಅವರು ಸಲಹೆ ಮಾಡಿದರು.
ಸ್ತ್ರೀ ಶಕ್ತಿ ಸಂಘಗಳ ಕಲ್ಪನೆ ನೀಡಿದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕಂಡ ಕನಸು ಇಂದು ನನಸಾಗುತ್ತಿದೆ ಎಂಬುದಕ್ಕೆ ಇಂದು ಸ್ವಸಹಾಯ ಸಂಘಗಳಡಿಹೆಚ್ಚಿನಸಂಖ್ಯೆಯಲ್ಲಿಸೇರಿದಮಹಿಳೆಯರೇ ಸಾಕ್ಷಿಯಾಗಿದ್ದಾರೆ ಎಂದರು.
ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಜನಿಸುವ ಮಗುವಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಯೋಜನೆ ರೂಪಿಸಿದ,‌ ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇನ್ನೀತರ ಜನಪರ ಯೋಜನೆ ಜಾರಿ ಮಾಡಿ ಹಿಂದಿನಮುಖ್ಯಮಂತ್ರಿಗಳಾದಬಿ.ಎಸ್.ಯಡಿಯೂರಪ್ಪನರು ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ ಕಾರ್ಯಕ್ರಮ ಇದಾಗಿದ್ದು, ಮಹಿಳಾ ಒಗ್ಗಟ್ಟನ್ನು ಕಂಡು ತಮಗೆ ಸಂತಸವಾಗಿದೆ
ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳಾದಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಹ ಜನಮುಖಿ ಕಾರ್ಯ ಮಾಡುತ್ತಿದ್ದು, ರಾಜ್ಯ ಸರ್ಕಾರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳಾ ಅಭಿವೃದ್ದಿಗೆ ಸಹ ಹೆಚ್ಚಿನ ಒತ್ತು ಕೊಡಲಾಗಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಬಸವರಾಜ ಧಡೇಸಗೂರು,ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ಜಿಪಂ ಮುಖ್ಯ ಯೋಜನಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಹಾಗೂ ಇತರರು ಇದ್ದರು.
ಮಹಿಳಾ‌ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಜಿ.ಪದ್ಮಾವತಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯಲಬುರ್ಗಾ-ಕುಕನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಅಂಗಡಿ ಸ್ವಾಗತಿಸಿದರು. ಕುಕನೂರು ತಹಶೀಲ್ದಾರರಾದ ಮುರಳೀಧರರಾವ್ ಕುಲಕರ್ಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಣ್ಣ ದೊಡ್ಡಮನಿ, ಯಲಬುರ್ಗಾ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಇದ್ದರು.