ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶ್ರೀ ರಾಮಮಂದಿರ ವಾರ್ಡ ನಲ್ಲಿ ಶ್ರೀ ಶಂಕರ ಸೇವಾ ಸಮಿತಿ ಮತ್ತು ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಸಾರ್ವಜನಿಕರಿಗೆ ನಾರಾಯಣ ನೇತ್ರಾಲಯ ವತಿಯಿಂದ ಉಚಿತ ನೇತ್ರಾ ತಪಸಣಾ ಶಿಬಿರ ಆಯೋಜಿಸಲಾಗಿತ್ತು.
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷರಾದ ಆರ್.ಲಕ್ಷ್ಮೀಕಾಂತ್, ಸಮಾಜ ಕಲ್ಯಾಣ ಇಲಾಖೆ ಸಚಿವರ ವಿಶೇಷ ಕರ್ತವ್ಯಧಿಕಾರಿ ಗಣಪತಿಭಟ್,
ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ರವಿಶಂಕರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ದೀಪಾ ನಾಗೇಶ್, ಪತ್ರಕರ್ತರುಗಳಾದ ಜೆ.ಹೆಚ್.ಆನಿಲ್ ಕುಮಾರ್ ,ಮೋಹನ್ ರವರು ದೀಪಾ ಬೆಳಗಿಸಿ , ಅದಿ ಶಂಕರಚಾರ್ಯರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟನೆ ಮಾಡಿದರು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಪ್ರಪಂಚ ನೋಡಲು ಎಲ್ಲರು ದೃಷ್ಟಿ ಮುಖ್ಯ .ಕಾಲಕಾಲಕ್ಕೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಿ.
ಮಾನಸಿಕ ಒತ್ತಡದಿಂದ ಸಕ್ಕರೆ ಖಾಯಿಲೆ,ಬಿ.ಪಿ.ಮತ್ತು ನಾನ ರೋಗಗಳ ಸಮಸ್ಯೆಗಳ ಜನರು ನರಳುತ್ತಾರೆ.
ನಮ್ಮ ಕ್ಷೇತ್ರದಲ್ಲಿ ಒತ್ತಡ ನಿವಾರಣೆ ಮತ್ತು ನೆಮ್ಮದ್ದಿ ಜೀವನ ನಡೆಸಲು ಕೆಲವು ತಜ್ಞರುಗಳಿಂದ ಸಾರ್ವಜನಿಕರಿಗೆ ತರಭೇತಿ ಶಿಬಿರ ನಡೆಸಲಾಗುವುದು.
ಕೆಲವು ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ ಅವರಿಗೆ ತಪಾಸಣೆ ಅಗತ್ಯವಿದೆ ಎಂದು ಹೇಳಿದರು.
ಲಕ್ಷ್ಮೀಕಾಂತ್ ರವರು ಮಾತನಾಡಿ ಶ್ರೀ ಶಂಕರ ಸೇವಾ ಸಮಿತಿ ಅದಿ ಶಂಕರರ ಸಂದೇಶಗಳನ್ನು ಜನರಿಗೆ ತಿಳಿಸುವಲ್ಲಿ ಮಹತ್ವವಾದ ಕಾರ್ಯ ಮಾಡುತ್ತಿದೆ.
ನಮ್ಮ ಸಮಿತಿ ವತಿಯಿಂದ ಹಿಂದೂ ಧರ್ಮ, ಸಂಸ್ಕೃತಿ,ಸಂಪ್ರಾದಯ ಉಳಿಸಲು ಹಲವಾರು ಸಾಮಾಜಿಕ ಕಾರ್ಯಗಳನ್ನು ಸತತವಾಗಿ ಮಾಡಿಕೊಂಡು ಬರಲಾಗುತ್ತಿದೆ.
ಉಚಿತ ಆರೋಗ್ಯ ತಪಾಸಣೆ,ವಿದ್ಯಾರ್ಧಿ ವೇತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ
ನೇತ್ರ ತಪಾಸಣಾ ಶಿಬಿರದಲ್ಲಿ ದೃಷ್ಟಿದೋಷ ಇರುವವರಿಗೆ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮಪ್ರಸಾದ್,ಹರಿಪ್ರಸಾದ್,ಬಿ.ಎನ್.ಶ್ರೀನಿವಾಸ್,ಸತೀಶ್ ಭಗವಾನ್,ಕಿರಣ್,ಯಶಸ್ ನಾಯಕ್,ಕಿಷ್ಣಮೂರ್ತಿರವರು ಪಾಲ್ಗೊಂಡಿದ್ದರು.