Friday, June 2, 2023
Homeಇದೀಗ ಬಂದ ತಾಜಾ ಸುದ್ದಿಪ್ರಧಾನಿ ನರೇಂದ್ರಮೋದಿರವರ ಆಶಯದಂತೆ ಬಡವರಿಗೆ ಉಚಿತ ಆರೋಗ್ಯ ಸೇವೆ- ಸಚಿವ- ವಿ.ಸೋಮಣ್ಣ

ಪ್ರಧಾನಿ ನರೇಂದ್ರಮೋದಿರವರ ಆಶಯದಂತೆ ಬಡವರಿಗೆ ಉಚಿತ ಆರೋಗ್ಯ ಸೇವೆ- ಸಚಿವ- ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ,ದಾಸರಹಳ್ಳಿ ವಾರ್ಡ್ ನಲ್ಲಿ ಅದಿಚುಂಚನಗಿರಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದಿನಾಂಕ 16ನೇ ತಾರೀಖು ಲೋಕಾರ್ಪಣೆಯಾಗಲಿದೆ.

ಇದರ ಕುರಿತು ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ಅಧಿಕಾರಿ,ವೈದ್ಯರುಗಳ ಜೊತೆಯಲ್ಲಿ ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.

ನಂತರ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಯಾರಿ ಕುರಿತು ವೀಕ್ಷಣೆ ಮಾಡಿದರು.

ಸಚಿವರಾದ ವಿ.ಸೋಮಣ್ಣರವರು ಮತಾನಾಡಿ ದಾಸರಹಳ್ಳಿಯಲ್ಲಿ ಹಳೆಯ ಆಸ್ಪತ್ರೆ ಜಾಗಕ್ಕೆ ಬಾಲಗಂಗಾಧರನಾಥ ಸ್ವಾಮೀಜಿರವರು ಭೇಟಿ ನೀಡಿ ಇಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡು ಎಂದು ಆಶೀರ್ವಾದ ಮಾಡಿದರು.ಅವರ ಪೇರಣೆ ಮತ್ತು ಸ್ಪೂರ್ತಿಯಿಂದ ಇಂದು ಅವರ ಸ್ಮರಣೆಯಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ 106ಕೋಟಿ ವೆಚ್ಚದಲ್ಲಿ 300ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗಿದೆ.

ಆಸ್ಪತ್ರೆಯು ಇದೇ ತಿಂಗಳು 16ನೇ ತಾರೀಖು 5ಗಂಟೆಗೆ ಅದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗಾ ಸ್ವಾಮೀಜಿಗಳು,ಪಟ್ಟನಾಯಕನ ಹಳ್ಳಿಯ ನಂಜಾವಧೂತ ಸ್ವಾಮೀಜಿಗಳು, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರ್ ಮಹಾಸ್ವಾಮೀಜಿರವರು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರು ಮತ್ತು ಸಚಿವರುಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಲಿದ್ದಾರೆ.

ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರ ಬಡವರಿಗೆ ಉಚಿತ ಆರೋಗ್ಯ ಸೇವೆ ಲಭಿಸಬೇಕು ಎಂಬ ಆಶಯವನ್ನ ನಮ್ಮ ಕ್ಷೇತ್ರದಲ್ಲಿ ನೇರವೆರಿಸಲಾಗಿದೆ.
ಬಡವರ ಜೇಬಿನಲ್ಲಿ 10ರೂಪಾಯಿ ಇಲ್ಲವೆಂದರು ಅವನಿಗೆ ಉಚಿತವಾಗಿ ಹೈಟೆಕ್ ಆರೋಗ್ಯ ಸೇವೆ ಸಿಗಬೇಕು .

ನಮ್ಮ ಕ್ಷೇತ್ರದಲ್ಲಿ ಕಿಡ್ನಿ ಡಯಾಲಿಸಿಸ್ ಕೇಂದ್ರದಲ್ಲಿ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ.

ನಾಯಂಡಹಳ್ಳಿ ಕೆರೆಯನ್ನು 2000ಸಾವಿರ ಲಾರಿಯಷ್ಟು ಹೂಳು ತೆಗೆದು ಕೆರೆಯನ್ನ ನವೀಕರಣ ಮಾಡಿ,ಸಂರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್,ದಾಸೇಗೌಡ, ಬಿಜೆಪಿ ಮುಖಂಡರುಗಳಾದ ರಾಜಪ್ಪ, ಶ್ರೀಧರ್ ರವರು ಉಪಸ್ಥಿತರಿದ್ದರು.

ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಪ್ರಮುಖ ಉಪಕ್ರಮಗಳಲ್ಲಿ ವೈದ್ಯಕೀಯ ಸೇವೆಗಳು ಮತ್ತು ರೋಗ ನಿರ್ಣಯದ ಸೌಲಭ್ಯಗಳಲ್ಲಿನ ಶ್ರೇಷ್ಠತೆಗೆ ಒತ್ತು ನೀಡುವ ಹಾಗೂ ಆರೋಗ್ಯ ರಕ್ಷಣೆಯ ತಾಣವಾಗಿ ಭಾರತದ ಜಾಗತಿಕ ಮಹೋನ್ನತತೆಯನನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಸದರಿ ಆಸ್ಪತ್ರೆಯು ಆತ್ಯಾಧುನಿಕ ತಂತ್ರಜ್ಞಾನ, ಮೂಲಭೂತ ಸೌಕರ್ಯ ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಸೇವಾಬದ್ಧ್ದತೆಯ ಸಂಗಮವನ್ನು ಪ್ರತಿನಿಧಿಸುತ್ತದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನದೊಂದಿಗೆ, ನವಜಾತ ಶಿಶುವಿನಿಂದ ವೃದ್ದಾಪ್ಯದವರೆಗೆ ಎಲ್ಲಾ ವಯೋಮಾನದವರಿಗೂ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರ್ಮಾಣಗೊಳಿಸಲಾಗಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಮುಖ ಅಂಶಗಳು:

 • ಆಸ್ಪತ್ರೆಯ ಒಟ್ಟು ವೆಚ್ಚ: 106 ಕೋಟಿ ರೂ.
  • 1ನೇ ಹಂತ: 35 ಕೋಟಿ ರೂ.(ನವ ನಗರೋತ್ಥಾನ ಯೋಜನೆ)
  • 2ನೇ ಹಂತ: 10 ಕೋಟಿ ರೂ.(ವಿಶೇಷ ಅಭಿವೃದ್ಧಿ ಕಾಮಗಾರಿಗಳು)
  • 3ನೇ ಹಂತ:
  12 ಕೋಟಿ ರೂ.(ಅಮೃತ ನಗರೋತ್ಥಾನ)
  25 ಕೋಟಿ ರೂ.(ಇಂಟಿರಿಯರ್ ಮತ್ತು ವೈದ್ಯಕೀಯ ಉಪಕರಣಗಳು)
  24 ಕೋಟಿ ರೂ.(ವೈದ್ಯಕೀಯ ಉಪಕರಣಗಳು)
 • ಆಸ್ಪತ್ರೆ ಕಟ್ಟಡದ ವಿಸ್ತೀರ್ಣವು ಒಟ್ಟು 14886.50 ಚ.ಮೀ ವಿಸ್ತೀರ್ಣದಲ್ಲಿದ್ದು, ಇದರಲ್ಲಿ ತಳಮಹಡಿ, ಮೊದಲ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿ ಮತ್ತು ನಾಲ್ಕನೇ ಮಹಡಿಗಳನ್ನು ನಿರ್ಮಿಸಲಾಗಿರುತ್ತದೆ.
 • ತಳ ಮಹಡಿ ಲ್ಯಾಬ್‌ರೇಟರಿಗಳು, ರೇಡಿಯಾಲಜಿ ಸಂಬAಧಿಸಿದ ಕೊಠಡಿಗಳು, ರಕ್ತ ಶೇಖರಣಾ ಕೊಠಡಿ, ವಿದ್ಯುತ್ ಕೊಠಡಿ, ಜನರೇಟರ್ ಕೊಠಡಿ, ಯುಪಿಎಸ್ ಕೊಠಡಿ, ಶವಗಾರದ ಕೊಠಡಿ, ಅಗ್ನಿಶಾಮಕ ಕೊಠಡಿ, ವಾಹನ ನಿಲುಗಡೆ ಸ್ಥಳ.
  ನೆಲ ಮಹಡಿ: ಹೊರರೋಗಿ ವಿಭಾಗ, ತುರ್ತು ನಿಗಾಘಟಕ, ರಿಸ್ಪಷನ್, ಔಷದಾಲಯ, ಆಡಳಿತ ವಿಭಾಗ, ಮೈನರ್ ಓಟಿ, ವೈದ್ಯರ ಕೊಠಡಿಗಳು.
  ಮೊದಲನೇ ಮಹಡಿ: ಹೆರಿಗೆ ಕೊಠಡಿ, ಶಸ್ತç ಚಿಕಿತ್ಸಾ ಕೊಠಡಿ, ನವಜಾತ ಶಿಶು ತೀವ್ರ ನಿಗಾ ಘಟಕ, ಜನರಲ್ ವಾರ್ಡ್, ಆಪ್ತಮಾಲಜಿ ಮತ್ತು ಡೆಂಟಲ್ ವಿಭಾಗ.
  ಎರಡನೇ ಮಹಡಿ: ತೀವ್ರ ನಿಗಾ ಘಟಕ, ಶ್ರಸ್ತç ಚಿಕಿತ್ಸಾ ಕೊಠಡಿ, ಜನರಲ್ ವಾರ್ಡ್, ಮೇಜರ್ ಮಾಡ್ಯುಲರ್ ಓಟಿ-4
  ಮೂರನೇ ಮಹಡಿ: ಹೃದಯ ರೋಗ ವಿಭಾಗ, ಚಿಕಿತ್ಸಾ ಕೊಠಡಿ, ಜನರಲ್ ವಾರ್ಡ್ ಮತ್ತು ಸ್ಪೆಷಲ್ ವಾರ್ಡ್.
  ನಾಲ್ಕನೇ ಮಹಡಿ: ಜನರಲ್ ವಾರ್ಡ್ ಮತ್ತು ಸ್ಪೆಷಲ್ ವಾರ್ಡ್.
 • ಲಿಫ್ಟ್ ವ್ಯವಸ್ಥೆ.
  ಶೌಚಾಲಯದ ವ್ಯವಸ್ಥೆ.

ವೈದ್ಯಕೀಯ ಸೇವೆಗಳ ಪ್ರಮುಖ ಅಂಶಗಳು:

 • ಹೊರರೋಗಿ ಸೇವೆಗಳು: ನೇತ್ರತಜ್ಞ, ಇ.ಎನ್.ಟಿ, ದಂತತಜ್ಞ, ಕಾರ್ಡಿಯಾಕ್, ಫಿಸಿಯೋಥೆರಪಿ, ಆರ್ಥೋಪೆಡಿಕ್, ಒ.ಬಿ.ಜಿ, ಪೀಡಿಯಾಟ್ರಿಕ್ಸ್, ಹದಿಹರೆಯದವರು ಮತ್ತು ಟೆಲಿಮೆಡಿಸಿನ್.
 • ಒಳರೋಗಿ ಸೇವೆಗಳು: ಔಷಧಿ, ಶಸ್ತçಚಿಕಿತ್ಸೆ, ಪೀಡಿಯಾಟ್ರಿಕ್ಸ್, ನವಜಾತ ಆರೈಕೆ, ಪ್ರಸೂತಿ ಮತ್ತು ಸ್ತಿçÃರೋಗ ತಜ್ಞ, ಮೂಳೆಚಿಕಿತ್ಸೆ, ನೇತ್ರ ಶಸ್ತç ಚಿಕಿತ್ಸೆ, ಹೃದಯ ತಪಾಸಣೆ, ಕೀಮೋಥೆರಪಿ, ರೇಡಿಯೋಲಾಜಿ ಸೇವೆಗಳು, ಮಹಿಳಾ ಮತ್ತು ಮಕ್ಕಳ ಆರೋಗ್ಯ, ಟೆಲಿಮೆಡಿಸನ್ ಸೇವೆ ಹಾಗೂ ಕುಟುಂಬ ಕಲ್ಯಾಣ ಸೇವೆಗಳನ್ನು ನಿರ್ವಹಿಸಲಾಗುತ್ತಿದೆ.
 • ಐಸಿಯು(IಅU): 13 ಹಾಸಿಗೆಗಳು
 • ಎನ್.ಐ.ಸಿ.ಯು(ಓIಅU): 8 ಹಾಸಿಗೆಗಳು
 • ಹೆಚ್.ಡಿ.ಯು(ಊಆU): 9 ಹಾಸಿಗೆಗಳು
 • ಒಳರೋಗಿ ಹಾಸಿಗೆಗಳು: 270 ಹಾಸಿಗೆಗಳು
 • ಕೌನ್ಸೆಲಿಂಗ್ ಸೇವೆಗಳು.
 • ವರ್ಚುವಲ್ ಕ್ಲಿನಿಕ್.
 • ಹೈಟೆಕ್ ಪ್ರಯೋಗಾಲಯ ಸೇವೆಗಳು.
 • ಎಕ್ಸ್-ರೇ, ಸ್ಕಾö್ಯನಿಂಗ್ ಮತ್ತು ಮ್ಯಾಮೊಗ್ರಫಿ ಸೇರಿದಂತೆ ಇನ್ನಿತರೆ ಸೌಲಭ್ಯಗಳ ವ್ಯವಸ್ಥೆ.
RELATED ARTICLES
- Advertisment -
Google search engine

Most Popular

Recent Comments