Saturday, June 3, 2023
Homeಇದೀಗ ಬಂದ ತಾಜಾ ಸುದ್ದಿಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಸನ ಶಿಬಿರ ಮತ್ತು ಉಚಿತ ಕನ್ನಡಕ ವಿತರಣ

ಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಸನ ಶಿಬಿರ ಮತ್ತು ಉಚಿತ ಕನ್ನಡಕ ವಿತರಣ

ವನಸಿರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಮೈಸೂರು, ನಕ್ಷತ್ರ ಮಹಿಳಾ ಸೇವಾ ಸಂಸ್ಥೆ ಮತ್ತು ಎ ಎಸ್ ಜಿ ಕಣ್ಣಿನ ಆಸ್ಪತ್ರೆ ಇವರುಗಳ ಸಂಯುಕ್ತ ಆಶಯದಲ್ಲಿ ಇವತ್ತು ಕೊಮ್ಮೆಗೌಡನ ಕೊಪ್ಪಲು, ಬಿಳಿಕೆರೆ, ಮೈಸೂರು ತಾಲೂಕು ಇಲ್ಲಿನ ಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಸನ ಶಿಬಿರ ಮತ್ತು ಉಚಿತ ಕನ್ನಡಕ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 100 ಕ್ಕೂ ಮೇಲ್ಪಟ್ಟು ಜನರು ಬಂದು ತಮ್ಮ ಕಣ್ಣನ್ನು ಪರೀಕ್ಷಿಸಿರುತ್ತಾರೆ. ಇದರಲ್ಲಿ ಸುಮಾರು 50ಕ್ಕೂ ಮೇಲ್ಪಟ್ಟು ಜನರಿಗೆ ಉಚಿತ ಕನ್ನಡಕವನ್ನು ನೀಡಿರುತ್ತೇವೆ ಮತ್ತು 30 ರಿಂದ 35 ಜನರಿಗೆ ಶಸ್ತ್ರ ಚಿಕಿತ್ಸೆ ಆಗಬೇಕೆಂದು ಸಂಬಂಧಿಸಿದ ಡಾಕ್ಟರ್ ಹೇಳಿರುತ್ತಾರೆ ಅದನ್ನು ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಮಾಡುವುದಾಗಿ ಒಪ್ಪಿಕೊಂಡಿರುತ್ತೇವೆ. ಇವತ್ತಿನ ಕಾರ್ಯಕ್ರಮದಲ್ಲಿ ವನಸಿರಿ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಬಿ ಮಲ್ಲೇಶ್ ಕೋಟೆ ಮತ್ತು ಎ ಎಸ್ ಜಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಮುಜೀರ್ ಅವರು ಮತ್ತು ಪ್ರದೀಪ್ ಮತ್ತು ನಕ್ಷತ್ರ ಸಂಸ್ಥೆಯ ಅಧ್ಯಕ್ಷರಾದ ಶೀಲಾವತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

RELATED ARTICLES
- Advertisment -
Google search engine

Most Popular

Recent Comments