ಬೆಂಗಳೂರು: ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ ಕೊಡ ಮಾಡುವ ಪ್ರಶಸ್ತಿಗೆ (ಆರ್ಥಿಕ ವರದಿ ವಿಭಾಗ) ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರು ಆಯ್ಕೆಯಾಗಿರುವುದಕ್ಕೆ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಭಿನಂದನೆ ಸಲ್ಲಿಸಿದೆ.
ಮೂರು ದಶಕಗಳ ಕಾಲ ಸಂಯುಕ್ತ ಕರ್ನಾಟಕ, ಜನವಾಹಿನಿ, ಉದಯವಾಣಿ ಮತ್ತು ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ರುದ್ರಣ್ಣ ಹರ್ತಿಕೋಟೆ ಅವರಿಗೆ ಈ ಪ್ರಶಸ್ತಿ ಸಂದಿದೆ. ಆ ಮೂಲಕ ಕನ್ನಡದ ಪತ್ರಕರ್ತರೊಬ್ಬರಿಗೆ ಸಿಕ್ಕ ಮೊದಲ ಪ್ರಶಸ್ತಿಯು ಇದಾಗಿರುವುದು ವಿಶೇಷ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಫೆ. 28 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ 50 ಸಾವಿರ ರೂ ನಗದು, ಪ್ರಶಸ್ತಿ ಫಲಕವನ್ನೊಳಗೊಂಡಿದೆ.