ವನಸಿರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಮೈಸೂರು ವಿಶ್ವವಿದ್ಯಾನಿಲಯ- ಎನ್‌ಎಸ್‌ಎಸ್ ಘಟಕ, ಯುವ ಸಬಲೀಕರಣ, ಎಎಸ್‌ಜಿ ಕಣ್ಣಿನ ಆಸ್ಪತ್ರೆ ಮತ್ತು ರೋಟರಿ ಜಯಪ್ರಕಾಶ್ ನಗರ ವಲಯ ೭, ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಎನ್‌ಎಸ್‌ಎಸ್ ಭವನ, ಸರಸ್ವತಿಪುರಂ, ಮೈಸೂರು ಇಲ್ಲಿ ಆಗಮಿಸಿರುವ ವಿವಿಧ ರಾಜ್ಯಗಳ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಸುಮಾರು ೧೦೦-೧೨೫ ಶಿಬಿರಾರ್ಥಿಗಳು ತಮ್ಮ ಕಣ್ಣನ್ನು ಪರೀಕ್ಷಿಸಿರುತ್ತಾರೆ. ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುತ್ತಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಜಯಪ್ರಕಾಶ್ ನಗರ ಅಧ್ಯಕ್ಷರು ಡಾ. ನಂಜುಂಡಸ್ವಾಮಿ, ಕಾರ್ಯಕ್ರಮ ಸಂಯೋಜನ ಅಧಿಕಾರಿ ಎಂ ಸುರೇಶ, ಪ್ರೊ. ಎಂ.ರುದ್ರಯ್ಯ, ಪ್ರೊ.ಕಾಳಚೆನ್ನಗೌಡ, ಡಾ. ಓಂ ಪ್ರಕಾಶ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ದೊಡ್ಡ ರಾಸಯ್ಯ, ಡಾ. ನಿಂಗರಾಜು ಆರ್, ಡಾ. ಮಹೇಶ್, ಡಾಕ್ಟರ್ ಮಧುಸೂದನ್ ಪಿಎಸ್, ಡಾ. ರಮೇಶ್, ಡಾ. ಕೃಷ್ಣಪ್ಪ, ವನಸಿರಿ ಟ್ರಸ್ಟಿನ ಕಾರ್ಯದರ್ಶಿಯಾದ ಸಂತೋಷ್ ಎನ್, ಎಎಸ್ ಜಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಮುಜೀರ್ ಮತ್ತು ಪ್ರದೀಪ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.