Tuesday, June 6, 2023
Homeರಾಜ್ಯಮಾತನ್ನು ಬಿತ್ತಿ ಬೆಳೆದ ಬೇಂದ್ರೆ ಅವರಿಗೆ ಕಡು ಕಷ್ಟಗಳೇ ಕಾವ್ಯದ ಒರತೆಯಾಗಿತ್ತು: ಗೊರೂರು ಪಂಕಜ

ಮಾತನ್ನು ಬಿತ್ತಿ ಬೆಳೆದ ಬೇಂದ್ರೆ ಅವರಿಗೆ ಕಡು ಕಷ್ಟಗಳೇ ಕಾವ್ಯದ ಒರತೆಯಾಗಿತ್ತು: ಗೊರೂರು ಪಂಕಜ

ಮಾತನ್ನು ಬಿತ್ತಿ ಬೆಳೆದ ಬೇಂದ್ರೆ ಅವರಿಗೆ ಕಡು ಕಷ್ಟಗಳೇ ಕಾವ್ಯದ ಒರತೆಯಾಗಿತ್ತು ಎಂದು ಲೇಖಕಿ ಗೊರೂರು ಪಂಕಜ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು, ಸ್ವರ್ಣಭೂಮಿ ಫೌಂಡೇಶನ್ ಮತ್ತು ಇಂಚರ ಸಾಹಿತ್ಯ ಕುಟೀರ ಕೋಲಾರ ಇವುಗಳ ಸಂಯುಕ್ತಶ್ರಯ ದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ವರಕವಿ ಬೇಂದ್ರೆ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಬೇಂದ್ರೆ ಅವರ ಬದುಕು ಬರಹ ಕುರಿತು ಮಾತನಾಡಿದರು.

ಬಂಡೆಗಳೆಲ್ಲ ವಿಗ್ರಹ ವಾಗುವುದಿಲ್ಲ, ಹಾಗೆ ವಿಷಯವನ್ನು ಕಾವ್ಯಕ್ಕೆ ಬಳಸಿಕೊಳ್ಳುವ ಸೃಜನತೆ ಮತ್ತು ಪದಗಳಿಂದ ದುಡಿಸಿಕೊಳ್ಳುವ ಕ್ರಿಯೆ ಬಲ್ಲವರು ಕವಿಯಾಗುತ್ತಾನೆ. ಬೇಂದ್ರೆ ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷರಾದ ಡಾ. ಆರ್. ಕೆ. ನಲ್ಲೂರ ಪ್ರಸಾದ್, ನಾಡಿನ ಜನ ಮಾನಸದಲ್ಲಿ ಉಳಿದಿರುವ ಬೇಂದ್ರೆಯವರು ಅಘಾತವಾದ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದರು. ಪ್ರತಿಯೊಬ್ಬರಿಗೂ ಗುರುವೇ ದೊಡ್ಡವನು. ಗುರವಿಗಿಂತ ದೊಡ್ಡವರಾರು ಇಲ್ಲ ಎಂದು ಪ್ರತಿಪಾದಿಸಿದರು

ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ಕನ್ನಡಿಗ ಮನು ಗೊರೂರು ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಇಂಚರ ನಾರಾಯಣಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷರಾದ ಬಿ. ಶಿವಕುಮಾರ್, ಪ್ರಸ್ತಾವಿಕವಾಗಿ ಮಾತನಾಡಿದರು. ಚಲನಚಿತ್ರ ಹಿರಿಯ ನಟಿ ಪುಷ್ಪಾಸ್ವಾಮಿ, ರಮೇಶ ಕಮತಗಿ, ದಿವ್ಯಾ ಮಿಥುನ್, ಸುರೇಂದ್ರ ನಾಡಗುಡ್ಡೆ ಹೋಟೆಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಶರಣಪ್ಪ ಗಬ್ಬೂರು ಅವರ ಕಾರಿರುವ ಕಣ್ಣೀರ ಕಣಿವೆ ಗಜಲ್ ಕೃತಿ ಬಿಡುಗಡೆಗೊಂಡಿತು.

ನಂತರ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

RELATED ARTICLES
- Advertisment -
Google search engine

Most Popular

Recent Comments