Tuesday, June 6, 2023
Homeದೇಶದಿಲ್ಲಿ ಕೋಮು ದಂಗೆ ಪ್ರಕರಣ ವಿಚಾರಣೆ ನಿರಂತರ ಮುಂದೂಡಿಕೆ: ಅತೃಪ್ತಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟು

ದಿಲ್ಲಿ ಕೋಮು ದಂಗೆ ಪ್ರಕರಣ ವಿಚಾರಣೆ ನಿರಂತರ ಮುಂದೂಡಿಕೆ: ಅತೃಪ್ತಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟು

ಹೊಸದಿಲ್ಲಿ: ದಿಲ್ಲಿಯ ಕೋಮುದಂಗೆ ಆರೋಪದಡಿಯಲ್ಲಿ   ಜೈಲುಪಾಲಾಗಿರುವವರು ಸಲ್ಲಿಸಿದ  ಜಾಮೀನು ಅರ್ಜಿಯನ್ನು ದಿಲ್ಲಿ ಪೋಲೀಸರು ನಿರಂತರ ಮುಂದೂಡಲು ಆಗ್ರಹಿಸುವ  ಬಗ್ಗೆ  ಸುಪ್ರೀಂ ಕೋರ್ಟು ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದೆ.  ದಿಲ್ಲಿ ಪೊಲೀಸರು ತಮ್ಮ ವಕೀಲ ಸಾಲಿಸಿಟರ್ ಜನರಲ್ ಬೇರೆ ಕೇಸುಗಳಲ್ಲಿ ಬಿಝಿಯಾದ್ದರಿಂದ ಅರ್ಜಿ ಮುಂದೂಡಿಕೆಗೆ ಆಗ್ರಹಿಸಿದ್ದೇವೆ ಎಂದು ದಿಲ್ಲಿ ಪೊಲೀಸ್ ಹೇಳಿತು. ಆದರೆ , ಹೀಗೆ ಹೇಳುವುದು ಸರಿಯಲ್ಲ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಜಸ್ಟಿಸ್ ಎಸ್‍ಕೆ. ಕೌಲ್, ಎಎಸ್ ಓಕ್‍ರ ಪೀಠ ಹೇಳಿತು. ಬದಲಿ ವ್ಯವಸ್ಥೆ ಮಾಡದಿದ್ದರೆ ಈ ವಿಷಯದಲ್ಲಿ ಸರಕಾರಕ್ಕೆ ಏನೂ ಹೇಳಲಿಕ್ಕಿಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಪೀಠ ಹೇಳಿತು. ಆರೋಪ ಹೊರಿಸಿದ ವ್ಯಕ್ತಿಗಳ ವಿಚಾರಣೆ ನಡೆಸದೆ ಅನವಶ್ಯಕವಾಗಿ ಜೈಲಿನೊಳಗಿಡುವುದು ಸರಿಯಲ್ಲ ಎಂದು ಕೋರ್ಟು ಹೇಳಿತು.

2020ರ ಉತ್ತರ ದಿಲ್ಲಿಯ ಕೋಮು ದಂಗೆಯ ಮೂರು ಮಂದಿಗೆ ಹೈಕೋರ್ಟು ಜಾಮೀನು ನೀಡಿದ್ದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಕೋರ್ಟು ಮೇಲಿನಂತೆ ಸೂಚಿಸಿದೆ. ನಂತರ ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಿತು. ಸಾಮಾಜಿಕ ಕಾರ್ಯಕರ್ತೆಯರಾದ ನಟಾಶ ನರ್ವಾಲ್, ದೇವಂಗನಾ ಕಲಿತ, ಆಸಿಫ್ ಇಕ್ಬಾಲ್ ತನ್ಹರ ವಿರುದ್ಧ ಪೊಲೀಸರು ಜಾಮೀನು ರದ್ಧತಿಗೆ ಆಗ್ರಹಿಸಿ ಮೇಲ್ಮನವಿ ಸಲ್ಲಿಸಿದ್ದರು.

ಜನುವರಿ 17ಕ್ಕೆ ಅರ್ಜಿ ವಿಚಾರಣೆಗೆ ಬಂದಿತ್ತು. ಸಾಲಿಸಿಟರ್ ಜನರಲ್ ಸಂವಿಧಾನ ಪೀಠದ ಮುಂದೆ ಇನ್ನೊಂದು ಪ್ರಕರಣದಲ್ಲಿ ಹಾಜರಾಗಬೇಕಿತ್ತು. ಆದ್ದರಿಂದ ಅಂದು ವಿಚಾರಣೆ ಮುಂದೂಡಲಾಗಿತ್ತು. ಸ್ವಲ್ಪ ಸಮಯದ ನಂತರ ಪುನಃ ಪ್ರಕರಣದ ವಿಚಾರಣೆಗೆ ಕರೆದಾಗ ಪೊಲೀಸರ ಪರ ಹಾಜರಾದ ವಕೀಲ ರಜತ್ ನಾಯರ್ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಬೇಕೆಂದು ಮನವಿ ಮಾಡಿದರು. ನಂತರ  ಜಡ್ಜ್ ಪೀಠ ಅತೃಪ್ತಿ ಸೂಚಿಸಿತು.

RELATED ARTICLES
- Advertisment -
Google search engine

Most Popular

Recent Comments