Tuesday, June 6, 2023
Homeರಾಜ್ಯಭಾರತ ವಾಣಿಜ್ಯ ಕ್ಷೇತ್ರದಲ್ಲಿ 3.5 ಟ್ರಿಲಿಯನ್ ನಷ್ಟು ಆರ್ಥಿಕತೆ ಅಭಿವೃದ್ಧಿ: ಬಿ.ಎನ್ ಶ್ರೀಧರ್

ಭಾರತ ವಾಣಿಜ್ಯ ಕ್ಷೇತ್ರದಲ್ಲಿ 3.5 ಟ್ರಿಲಿಯನ್ ನಷ್ಟು ಆರ್ಥಿಕತೆ ಅಭಿವೃದ್ಧಿ: ಬಿ.ಎನ್ ಶ್ರೀಧರ್

ಬೆಂಗಳೂರು ನಗರ ಜಿಲ್ಲೆ: ಭಾರತ ವಾಣಿಜ್ಯ ಕ್ಷೇತ್ರದಲ್ಲಿ 3.5 ಟ್ರಿಲಿಯನ್ ನಷ್ಟು ಆರ್ಥಿಕತೆ ಅಭಿವೃದ್ಧಿಯಾಗಿದೆ ಎಂದು ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (NSTI) (ಮಹಿಳೆಯರ), ಪ್ರಾದೇಶಿಕ ನಿರ್ದೇಶಕರಾದ ಬಿ.ಎನ್ ಶ್ರೀಧರ್ ಅವರು ತಿಳಿಸಿದರು.

ಅವರು ಇಂದು ನಗರದ ಹೊಸೂರು ರಸ್ತೆಯಲ್ಲಿರುವ ಎನ್ಎಸ್‌ಟಿಐ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ ‘ಸ್ಕಿಲ್ ಫೆಸ್ಟ್ -2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ‘Make in India’ ಯೋಜನೆಯನ್ನು ಜಾರಿಗೆ ತಂದ ನಂತರ ಅನೇಕ ನಿರುದ್ಯೋಗಿಗಳಿಗೆ ಅದರಲ್ಲೂ ಐಟಿಐ, ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯ ಅಡಿಯಲ್ಲಿ ಇರುವ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡಿಸೈನ್ ಮತ್ತು ಡೆಕೊರೇಷನ್, ಫ್ಯಾಷನ್ ಡಿಸೈನ್ ಟೆಕ್ನಾಲಜಿ, ಸಿ.ಎಸ್.ಎ/ ಐ.ಟಿ ಇನ್ನೂ ಮುಂತಾದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಆ ಪ್ರದೇಶಗಳಲ್ಲಿ ಕೆಲಸ ಮಾಡುವ ವೃತ್ತಿಪರರೊಂದಿಗೆ ಸಂವಹನ ನಡೆಸಲು ಉಪಯೋಗವಾಗುತ್ತದೆ ಎಂದರು.

ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ, ತರಬೇತಿಗಾರರಿಗೆ ಉತ್ತಮ ಉದ್ಯೋಗಾವಕಾಶ ಸಿಗಲಿದ್ದು, ಜೊತೆಗೆ ಅವರ ಆಸಕ್ತಿಗಳನ್ನು ಹಂಚಿಕೊಳ್ಳುವ ಇತರ ತರಬೇತಿದಾರರೊಂದಿಗೆ ಸಂಪರ್ಕ ಏರ್ಪಡುತ್ತದೆ. ತರಬೇತಿದಾರರು ಮೊಡಲಿಂಗ್,ಇಂಟರ್ನ್ಶಿಪ್, ಅಪ್ರೆಂಟಿಸ್ ನಂತಹ ಕೌಶ್ಯಾಭಿವೃದ್ಧಿ ಬೆಳಸಿಕೊಳ್ಳಬೇಕು ಎಂದರು.

ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿಗಾರರ ಕೌಶಲ್ಯವನ್ನು ಪ್ರದರ್ಶಿಸಲು ಫೆಸ್ಟ್ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ತರಬೇತಿಯ ಭಾಗವಾಗಿ ತಯಾರಿಸಿದ ಯೋಜನೆಗಳು ಮತ್ತು ಮಾದರಿಗಳನ್ನು ಫೆಸ್ಟ್‌ನಲ್ಲಿ ಪ್ರದರ್ಶಿಸಲಾಯಿತು.

ನಂತರ, ಸಂಜೆ ‘ಇನ್‌ಸ್ಟಿಟ್ಯೂಟ್ ಡೇ 2023’ ನಲ್ಲಿ ನಡೆಸಿದ ಸಂಸ್ಕೃತಿಕ ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಲಿಕಾನ್ ಮೈಕ್ರೋ ಸಿಸ್ಟಮ್ ನ ಸಿಇಒ ಎಂ.ಎಸ್.ಜೆ ಆರಾಧ್ಯ, ಪ್ರೋವೋಸ್ಟ್ ಯುಜಿಡಿಸಿಟ್ ನ ವೆಂಕಟೇಶ್ ಸುಂಕಡ್, ಜೆ.ಎಸ್.ಎಸ್ ಅಕಾಡಮಿ ಬೆಂಗಳೂರಿನ ನಿರ್ದೇಶಕರು ಟಿ.ಎಂ ಶಶಿಕಲಾ, ಇತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments