Tuesday, June 6, 2023
Homeದೇಶಎಂ.ಎಂ.ಕೆ.ಮತ್ತು ಎಸ್.ಡಿ.ಎಂ.ಮಹಿಳಾ ಮಹಾವಿದ್ಯಾಲಯದಲ್ಲಿ‌ 75ನೇ ಸರ್ವೋದಯ ದಿನಾಚರಣೆ

ಎಂ.ಎಂ.ಕೆ.ಮತ್ತು ಎಸ್.ಡಿ.ಎಂ.ಮಹಿಳಾ ಮಹಾವಿದ್ಯಾಲಯದಲ್ಲಿ‌ 75ನೇ ಸರ್ವೋದಯ ದಿನಾಚರಣೆ

ಮೈಸೂರು: ಎಂ.ಎಂ.ಕೆ.ಮತ್ತು ಎಸ್.ಡಿ.ಎಂ.ಮಹಿಳಾ ಮಹಾವಿದ್ಯಾಲಯದಲ್ಲಿ‌ 75ನೇ ಸರ್ವೋದಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸರ್ವೋದಯ ದಿನಾಚರಣೆ ಕುರಿತು‌ ಮಾತನಾಡಿದ
ಡಾ.ವಿನೋದ ಅವರು ಮಾತನಾಡಿ ಗಾಂಧಿಜಿ ಅವರ ಬಗೆಗೆ ಎಷ್ಟೇ ವಾದ ವಿವಾದಗಳಿದ್ದರೂ ಅವರ ಸರಳತೆ ಆದರ್ಶ ಗುಣಗಳು ಇಂದಿನ ಸಮಾಜಕ್ಕೆ ಮಾದರಿಯಾಗುತ್ತದೆ ಶಿಕ್ಷಣದ ಬಗೆಗೆ ಅಪಾರ ನಂಬಿಕೆಯಿಟ್ಟಿದ ಗಾಂಧೀಜಿ ಅವರು ಒಂದು ಮಗುವಿನ ಸರ್ವಾಂಗೀಣ ಅಭಿವೃದ್ದಿಯ ದಾರಿಗೆ ಶಿಕ್ಷಣವನ್ನು ನೀಡಬೇಕು ಎಂದು ನಂಬಿದ್ದರು ಪ್ರಾರ್ಥನೆ ನಮ್ಮ ಮನಸ್ಸಿನ ಸ್ವಚ್ಛತೆಗೆ ಇರುವ ಮಂತ್ರ ಎಂದು ನಂಬಿ ಮಾದರಿ ಬದುಕನ್ನು ನಮಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಅವರು ಮಾತನಾಡಿ ದೇಶದ ಇತಿಹಾಸವನ್ನು ಅರಿತುಕೊಳ್ಳಲು ಮಹಾತ್ಮರ ಜೀವನ ಚರಿತ್ರೆಗಳನ್ನು ಓದುವುದು ಅನಿವಾರ್ಯ ಸತ್ಯ ಅಹಿಂಸೆ ತ್ಯಾಗ ಮತ್ತು ಸೇವೆಯನ್ನು ಬದುಕಿನ ಭಾಗವಾಗಿ ಅನುಸರಿಸಿದಾಗ ಅವರ ಬದುಕು ಇಂದಿನ ಯೋಜನತೆಗೆ ಮಾದರಿಯಾಗಿದೆ ಎಂದು ತಿಳಿಸಿ ಗಾಂಧಿಯವರ ಬಗೆಗೆ ಇರುವ ವಿರೋಧಗಳನ್ನು ನಿಜವಾದ ಅರ್ಥದಲ್ಲಿ ಅರ್ಥೈಸಿಕೊಂಡರೆ ವಾಸ್ತವದಲ್ಲಿ ಗಾಂಧಿಯ ಮನಸ್ಸು ಎಂಥ ಮಹತ್ವದ್ದು ಎಂದು ಅರಿಯಬಹುದು ಗ್ರಾಮೀಣ ಭಾರತದ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ಗಾಂಧಿ ಸ್ವತಂತ್ರ ಪೂರ್ವದಲ್ಲಿ ತಿಳಿಸಿದರು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದ ಗಾಂಧೀಜಿ ಭಾರತದ ಆರ್ಥಿಕತೆಗೆ 75 ವರ್ಷದ ಹಿಂದೆ ಅತ್ಯುತ್ತಮ ಆರ್ಥಿಕ ನೀತಿಯನ್ನು ಪ್ರತಿಪಾದಿಸಿದರು.
1920 ರಿಂದ ಸ್ವಾತಂತ್ರ್ಯ ಹೋರಾಟಕ್ಕೆ ತೊಡಗಿಸಿಕೊಂಡ ಗಾಂಧಿ ಅಹಿಂಸೆಯ ಮಾರ್ಗವನ್ನು ಅನುಸರಿಸಿ ಸರ್ವೋದಯ ಪರಿಕಲ್ಪನೆಯನ್ನು ದೇಶದ ಜನತೆಗೆ ತಿಳಿಸಿದರು ಈ ದೇಶದ ಮಹಾಚೇತನವಾಗಿದ್ದಾರೆ ಗಾಂಧೀಜಿಯವರ ತತ್ವ ಆದರ್ಶ ಕನಸುಗಳನ್ನು ಮೌಲ್ಯದೊಂದಿಗೆ ಸ್ಮರಿಸುವ ಗುಣವನ್ನು ಹಿಂದಿನ ಕಾಲಘಟ್ಟ ಮೈಗೂಡಿಸಿಕೊಳ್ಳಬೇಕು ಇಂದು ಕರೆ ನೀಡಿದರು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸರ್ವಧರ್ಮ ಸಂರಕ್ಷಣಾ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಪ್ರೊ.ಕೆ. ಎಸ್. ಸುಕೃತಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ರಜಿತಾ. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಬಿಎನ್ ಮಾರುತಿ ಪ್ರಸನ್ನ ಅಧ್ಯಾಪಕ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments