ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಯುವ ನಾಯಕ ರಾಹುಲ್ ಗಾಂಧಿರವರು ಭಾರತ್ ಜೋಡೋ ಯಶ್ವಸಿಯಾಗಿ ಪೂರೈಸಿದ ಶುಭಾ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಪ್ರೋಫೆಸರ್ ರಾಧಕೃಷ್ಣ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಡಾ||ನಾರಾಯಣಸ್ವಾಮಿರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಕೇಶವಮೂರ್ತಿ,ಯುವ ಕಾಂಗ್ರೆಸ್ ಪಕ್ಷದ ಹೆಚ್.ಎಸ್.ಮಂಜುನಾಥಗೌಡ, ಬ್ಲಾಕ್ ಅಧ್ಯಕ್ಷರುಗಳಾದ ಪರಿಸರ ರಾಮಕೃಷ್ಣ,ಸುಧೀಂದ್ರ ನಟರಾಜ್,ಮತ್ತು ಮಹಿಳಾ ಮುಖಂಡರಾದ ಶ್ರೀಮತಿ ಮಂಜುಳನಾಯ್ಡುರವರು ಮಹಾತ್ಮ ಗಾಂಧಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ಮಾಡಿದರು
ಭಾರತ್ ಜೋಡೋ ಪಾದ ಯಾತ್ರೆಯ ಗುರಿ ಭಾರತವನ್ನು ಒಂದುಗೂಡಿಸುವುದು. ಒಗ್ಗೂಡಿ ನಮ್ಮ ರಾಷ್ಟ್ರವನ್ನು ಬಲಪಡಿಸಲು. ಯಾತ್ರೆಯು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಂಡಿದೆ-
ಸುಮಾರು 150 ದಿನಗಳ ಅವಧಿಯಲ್ಲಿ ಸುಮಾರು 3,700ಕ್ಕೂ ಹೆಚ್ಚು ಕಿಮೀ ದೂರವನ್ನು ಕ್ರಮಿಸಿದೆ
ನಮ್ಮ ದೇಶವನ್ನು ವಿಭಜಿಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಕಾಂಗ್ರೆಸ್ ನಾಯಕರೊಂದಿಗೆ ಕೊಟ್ಯಂತರ ಜನರು ಯಾತ್ರೆಯುಲ್ಲಿ ಪಾಲ್ಗೊಂಡಿದ್ದರು.
ಸಮಾಜದ ಎಲ್ಲಾ ವರ್ಗಗಳ ಜನರು ಒಗ್ಗೂಡಿದ್ದಾರೆ.
ಭಾರತದ ಏಕತೆ, ಅದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಜನರನಿರುದ್ಯೋಗ ಮತ್ತು ಹಣದುಬ್ಬರ, ದ್ವೇಷ ಮತ್ತು ವಿಭಜನೆಯ ರಾಜಕೀಯ ಮತ್ತು ನಮ್ಮ ರಾಜಕೀಯ ವ್ಯವಸ್ಥೆಯ ವಿರುದ್ದ ಯಶ್ವಸಿಯಾಗಿ ಭಾರತ್ ಜೋಡೋ ಪಾದಯಾತ್ರೆ ಯಾಗಿದೆ.
ಭಾರತ್ ಜೋಡೋ ಯಶ್ವಸಿಯಾದ ಶುಭಾ ಸಂದರ್ಭದಲ್ಲಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕಾಂಗ್ರೆಸ್ ಪಕ್ಷ ಸಂಭ್ರಮಾಚರಣೆ ಅಚರಿಸಲಾಯಿತು.