Tuesday, June 6, 2023
Homeದೇಶಗೊರೂರು ಅನಂತರಾಜು ಅವರ ಸೇವೆಯ ಹಾದಿಯಲ್ಲಿ ಕೃತಿ ಬಿಡುಗಡೆ

ಗೊರೂರು ಅನಂತರಾಜು ಅವರ ಸೇವೆಯ ಹಾದಿಯಲ್ಲಿ ಕೃತಿ ಬಿಡುಗಡೆ

ಕನಾ೯ಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕ ಮತ್ತು ಸ್ಪಂದನ ಸಿರಿ ವೇದಿಕೆ ವತಿಯಿಂದ ಹಾಸನದ ಅರಳೇಪೇಟೆ
ರಸ್ತೆಯಲ್ಲಿರುವ ವಿಶ್ವ ಮಾನವ ಬಂಧುತ್ವ ಸಭಾಂಗಣದಲ್ಲಿ ಹಾಸನದ ಸಾಹಿತಿ ಗೊರೂರು ಅನಂತರಾಜು ಅವರ ಸೇವೆಯ ಹಾದಿಯಲ್ಲಿ ಕೃತಿ ಲೋಕಾಪ೯ಣೆಗೊಂಡಿತು. ಬೆಂಗಳೂರಿನ ಸುವೆ೯ ಕಲ್ಚರಲ್ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾಗಿರುವ ಪತ್ರಕರ್ತರು ಲೇಖಕರು ಶ್ರೀ ರಮೇಶ್ ಸುವೆ೯ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಹಲವು ಮಂದಿ ಹಲವು ಬಗೆಯಲ್ಲಿ ಸೇವೆಯನ್ನು ಮಾಡುತ್ತಾರೆ. ಅಂತಹ ಮಹಾನ್ ವ್ಯಕ್ತಿಗಳ ಸಾಧನೆಯ ಹಾದಿಯಲ್ಲಿ ಹಲವು ಕಷ್ಟ ನಷ್ಟ ಸಂಕಷ್ಟಗಳು ಎದುರಾಗಿ ಅದನ್ನೆಲ್ಲಾ ನಿಭಾಯಿಸಿ
ತಮ್ಮ ಗುರಿ ಸಾಧಿಸಿ ಸಮಾಜಕ್ಕೆ ಯಾವುದಾದರೂ ಬಗೆಯಲ್ಲಿ ತಮ್ಮ ಕೊಡುಗೆಯನ್ನು ಸಮಾಜಮುಖಿ ಚಿಂತನೆಯಲ್ಲಿ ಸಾವ೯ಜನಿಕ ಜೀವನದಲ್ಲಿ ಜನತೆಯ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಅಂತಹ ವ್ಯಕ್ತಿಗಳ ಸಮಾಜ ಸೇವೆಯ ಹಾದಿಯನ್ನು ಗೊರೂರು ಅನಂತರಾಜು ತಮ್ಮ ಸೇವೆಯ ಹಾದಿಯಲ್ಲಿ ಕೃತಿಯಲ್ಲಿ ಗುರುತಿಸಿ ಮಹತ್ಕಾಯ೯ ಮಾಡಿದ್ದಾರೆ. ತ್ರಿವಿಧ ದಾಸೋಹ ಸೇವೆಯ ಡಾ. ಶಿವಕುಮಾರ ಸ್ವಾಮೀಜಿಯವರು ಒಳಗೊಂಡಂತೆ ಸಮಾಜದ ಸಾಹಿತ್ಯ ಮತ್ತು ಕಲಾಸಾಧಕರ ಹೊರತು ಪಡಿಸಿ ಕನ್ನಡ ನಾಡು ನುಡಿ ಸೇವೆ ಶಾಲೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ನಿಸ್ಪೃಹ ಸ್ವಯಂ ಸೇವೆ, ವಿದ್ಯಾ ದಾನಿಗಳು, ಇವರೆ ಮೊದಲಾದ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಕುರಿತು ಮಾಹಿತಿ ಸಂಗ್ರಹಿಸಿ ಸಂದಶಿ೯ಸಿ ಸುಮಾರು 50 ಮಂದಿಯನ್ನು ಪರಿಚಯಿಸಿರುವ ಕೃತಿ ಮಹತ್ವದ್ದಾಗಿದೆ ಎಂದರು.
ತಾವು ತಮ್ಮ ಅಕಾಡೆಮಿ ಯಿಂದ ಕಳೆದ ಮೂವತ್ತು ವರ್ಷಗಳ ಸತತ ಸಾಂಸ್ಕೃತಿಕ ಸೇವೆಯಲ್ಲಿ ಸಂಪೂಣ೯ ತೊಡಗಿಸಿಕೊಂಡಿದ್ದ ವಷ೯ದಲ್ಲಿ ಐದಾರು ಸಾಹಿತ್ಯ, ರಂಗ ಚಟುವಟಿಕೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಬರುತ್ತಿದ್ದು ಅವುಗಳ ಬೆಂಗಳೂರಿನಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದನ್ನು ಪ್ರಾದೇಶಿಕ ವಾಗಿ ವಿಂಗಡಿಸಿ ವಿಕೇಂದ್ರೀಕರಣ ಮಾಡುತ್ತಿದ್ದು ಇದರ ಮೊದಲ ಹೆಜ್ಜೆ ಯಾಗಿ ಶಿವಮೊಗ್ಗದಲ್ಲಿ ಫೆಬ್ರವರಿ 20-21 ಒಟ್ಟು 2 ದಿನಗಳು ಪ್ರಾದೇಶಿಕ ಅಸಮಾನತೆಯ ವಿಷಯ ಕುರಿತು ಅಧ್ಯಯನ ಉಪನ್ಯಾಸ ಹಾಗೂ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದುಇದರಲ್ಲಿ ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ ಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಹಲೋ ಹಾಸನ ದಿನಪತ್ರಿಕೆ ಯ ಸಂಪಾದಕರು ಕ. ರಾ. ಬ. ಸಂಘ ಹಾಸನ ಜಿಲ್ಲಾ ಘಟಕದ ಗೌರವ ಅಧ್ಯಕ್ಷರು ಶ್ರೀ ರವಿ ನಾಕಲಗೋಡು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ. ಸಾ. ಪ. ಮಾಜಿ ಅಧ್ಯಕ್ಷರಾದ ಶ್ರೀ ಉದಯರವಿ, ಶ್ರೀ ನಾಯಕರಹಳ್ಳಿ ಮಂಜೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಲೇಖಕರು ಗೊರೂರು ಅನಂತರಾಜು ರಂಗನಟರು ಯಲಗುಂದ ಶಾಂತಕುಮಾರ್, ನಿವೃತ್ತ ಉಪನ್ಯಾಸಕರು ಬಾಲಕೃಷ್ಣ, ಚನ್ನರಾಯಪಟ್ಟಣ ಪತ್ರಕರ್ತ ಗೋಕಾಕ್ ಪುಟ್ಟಣ್ಣ, ಗೋಡೆ ಬರಹಗಾರ ಯಾಕುಬ್ ಗೊರೂರು, ಗಾಯಕಿ ನಟಿ ನಮಿತ ಇದ್ದರು. ಗಾಯಕ ಚೆಲುವನಹಳ್ಳಿ ಶಂಕರಪ್ಪ ಪ್ರಾಥಿ೯ಸಿದರು. ಶ್ರೀಮತಿ ಕಲಾವತಿ ಮಧುಸೂಧನ್ ಸ್ವಾಗತಿಸಿದರು. ಶ್ರೀಮತಿ ಚೈತ್ರ ಮಂಜೇಗೌಡ ವಂದಿಸಿದರು. ಗೊರೂರು ಅನಂತರಾಜು ಕಾಯ೯ಕ್ರಮ ನಿರೂಪಿಸಿದರೆ.

RELATED ARTICLES
- Advertisment -
Google search engine

Most Popular

Recent Comments