ಹಿರಿಯ ರಂಗಕರ್ಮಿ ಸಿದ್ದಗಂಗಯ್ಯರ ಚಿಕಿತ್ಸೆಗೆ ನೆರವು
ಬೆಂಗಳೂರು: ತುಮಕೂರಿನ ಹಿರಿಯ ರಂಗಕರ್ಮಿ, ಸಾಹಿತಿ, ನಾಟಕ ನಿರ್ದೇಶಕ ಹಾಗೂ ಸಂಗೀತ ಸಂಯೋಜಕ ಸಿದ್ದಗಂಗಯ್ಯ ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಶಾಂತಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ವೈದ್ಯಕೀಯ ವೆಚ್ಚಕ್ಕಾಗಿ ಕಲಾಬಂಧು ಫೌಂಡೇಶನ್ ವತಿಯಿಂದ ಅಧ್ಯಕ್ಷ ನರಸಿಂಹರಾಜು.ಹೆಚ್
ಅವರು 5 ಸಾವಿರ ರೂ. ನೆರವಿನ ಚೆಕ್ಕನ್ನು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ವೈದ್ಯ ಡಾ.ಶಿವರಾಜ್ ಗೌಡ ಅವರ
ಸಮ್ಮುಖದಲ್ಲಿ ನೀಡಿ, ಚೇತರಿಕೆಗೆ ಹಾರೈಸಿದರು. ಸಿದ್ದಗಂಗಯ್ಯರ ಪುತ್ರ ನಂದೀಶ್ ಹಾಗೂ ಆಸ್ಪತ್ರೆ ಸಿಬ್ಬಂದಿ
ಉಪಸ್ಥಿತರಿದ್ದರು.