Saturday, June 3, 2023
Homeಆರೋಗ್ಯ & ಸದೃಡತೆಸಕ್ಕರೆ ಕಾಯಿಲೆ ಬರಬಾರದು ಎಂದರೆ ಎಷ್ಟು ಗಂಟೆ ಒಳಗೆ ತಿಂಡಿ ತಿಂದು ಬಿಡಬೇಕು

ಸಕ್ಕರೆ ಕಾಯಿಲೆ ಬರಬಾರದು ಎಂದರೆ ಎಷ್ಟು ಗಂಟೆ ಒಳಗೆ ತಿಂಡಿ ತಿಂದು ಬಿಡಬೇಕು

ಸಕ್ಕರೆ ಕಾಯಿಲೆ ಬರಬಾರದು ಎಂದರೆ ಎಷ್ಟು ಗಂಟೆ ಒಳಗೆ ತಿಂಡಿ ತಿಂದು ಬಿಡಬೇಕು?

ನಿಮಗೂ ಕೂಡ ಮಧುಮೇಹ ಬರಬಹುದು ಎಂಬ ಭಯ ಇದೆಯೇ? ಹಾಗಿದ್ದರೆ ದಿನಾ ಇನ್ನು ಮೇಲೆ ಬೇಗನೆ ತಿಂಡಿ ತಿಂದುಬಿಡಿ….

ಸಕ್ಕರೆ ಕಾಯಿಲೆಯಿಂದ ಹಲವಾರು ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವು ಜನರಲ್ಲಿ ಇವುಗಳು ಸಾಮಾನ್ಯವಾಗಿರುತ್ತವೆ. ಯಾವುದೇ ಆಹಾರ ಪದ್ಧತಿ ಅನುಸರಿಸಿದರೂ ಅಥವಾ ಯಾವುದೇ ಜೀವನಶೈಲಿ ಇದ್ದರೂ ಸಹ ಆರೋಗ್ಯದ ತೊಂದರೆಗಳು ಎದುರಾಗುತ್ತವೆ. ಸಾಧ್ಯವಾದಷ್ಟು ಬೆಳಗ್ಗೆ ಬೇಗ ತಿಂಡಿ ತಿಂದರೆ ಸುಲಭವಾಗಿ ಮಧುಮೇಹದ ರೋಗ ಲಕ್ಷಣಗಳನ್ನು ಮ್ಯಾನೇಜ್ ಮಾಡಬಹುದಾಗಿದೆ….

ಮಧುಮೇಹ ಸಮಸ್ಯೆಯ ನಿಯಂತ್ರಣ ಸಾಧ್ಯ

  • ಯಾರು ಬೆಳಗಿನ ಸಮಯದಲ್ಲಿ ಬಹಳ ಬೇಗನೆ ತಿಂಡಿ ತಿನ್ನುತ್ತಾರೆ ಅಂದರೆ ಬೆಳಗ್ಗೆ 8:30 ಕ್ಕೆ ಮುಂಚೆ ತಿಂಡಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರು ಟೈಪ್ 2 ಮಧುಮೇಹ ದಿಂದ ಪಾರಾಗುವ ಸಾಧ್ಯತೆ ಇರುತ್ತದೆ.
  • ಬೆಳಗ್ಗೆ 8:30 ಕ್ಕೆ ಮುಂಚೆ ತಿಂಡಿ ತಿನ್ನುವವರ ದೇಹದ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧತೆ ಕೂಡ ಕಡಿಮೆ ಇರುತ್ತದೆ. ಇದು ಮಧುಮೇಹ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
  • ಅಧ್ಯಯನ ಹೇಳುವಂತೆ ಯಾರು ಪ್ರತಿ ದಿನ ಬೆಳಗ್ಗೆ ಬೇಗನೆ ತಿಂಡಿ ತಿನ್ನುವ ಅಭ್ಯಾಸ ಮಾಡಿಕೊಂಡಿ ರುತ್ತಾರೆ (ಅವರು ಯಾವುದೇ ತಿಂಡಿ ತಿಂದರೂ ಕೂಡ) ಅವರಿಗೆ ಬ್ಲಡ್ ಶುಗರ್ ಲೆವೆಲ್ ಕಡಿಮೆ ಇರುತ್ತದೆ ಜೊತೆಗೆ ಕಡಿಮೆ ಇನ್ಸುಲಿನ್ ಪ್ರತಿರೋಧ ಇರುತ್ತದೆ ಎಂದು ಹೇಳಿದ್ದಾರೆ.
  • ಬೆಳಗ್ಗೆ ತಿಂಡಿ ತಿಂದ ನಂತರದಲ್ಲಿ 10 ಗಂಟೆಗಳು ಬೇಕಾದರೂ ಉಪವಾಸ ಇರಬಹುದು. ಆದರೆ ತಿಂಡಿ ಮಾತ್ರ ಬೇಗ ತಿನ್ನಬೇಕು.

ವರದಿಗಳ ಪ್ರಕಾರ

ವರದಿಗಳ ಪ್ರಕಾರ ತಿಂಡಿ ಎಷ್ಟು ಹೊತ್ತಿಗೆ ತಿಂದರೂ ಕೂಡ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಅಥವಾ ಇಳಿಕೆ ಆಗುವುದರ ಮೇಲೆ ಅದರ ಯಾವುದೇ ಪ್ರಭಾವ ಇರುವುದಿಲ್ಲ. ಆದರೆ ಬೆಳಗ್ಗೆ 8:30ಗೆ ಮುಂಚೆ ತಿಂಡಿ ತಿನ್ನುವುದರಿಂದ ಇನ್ಸುಲಿನ್ ಪ್ರತಿರೋಧತೆ ಕಡಿಮೆ ಇರುತ್ತದೆ.

ಬೆಳಗಿನ ಉಪಹಾರ ಮತ್ತು ಮಧುಮೇಹ

  • ನಿಮಗೆ ಈಗ ಒಂದು ಆಲೋಚನೆ ಬರುತ್ತಿರಬಹುದು. ಅದೇನೆಂದರೆ ಬೆಳಗಿನ ಸಮಯದಲ್ಲಿ ಬೇಗ ತಿಂಡಿ ತಿನ್ನುವುದಕ್ಕೆ ಮತ್ತು ಮಧುಮೇಹಕ್ಕೆ ಏನು ಸಂಬಂಧ ಎಂದು.
  • ಇನ್ಸುಲಿನ್ ಪ್ರತಿರೋಧ ಯಾವಾಗ ಉಂಟಾಗುತ್ತದೆ ಎಂದರೆ ನಮ್ಮ ದೇಹದ ಜೀವಕೋಶಗಳಿಗೆ ಪ್ಯಾಂಕ್ರಿಯಾಸ್ ನಿಂದ ಉತ್ಪತ್ತಿ ಆಗುತ್ತಿರುವ ಇನ್ಸುಲಿನ್ ಬಳಸಿಕೊಳ್ಳಲು ಸಾಧ್ಯವಾಗು ವುದಿಲ್ಲ. ಇದರಿಂದ ಮಧುಮೇಹ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಈ ವಿಷ್ಯ ಗೊತ್ತಿರಲಿ…

ಒಬ್ಬ ವ್ಯಕ್ತಿಯ ಮೆಟಬಾಲಿಸಂ ಪ್ರಕ್ರಿಯೆಗೆ ಇನ್ಸುಲಿನ್ ಪ್ರತಿರೋಧತೆ ಮತ್ತು ರಕ್ತದಲ್ಲಿನ ಹೆಚ್ಚಿನ ಶುಗರ್ ಲೆವೆಲ್ ಪ್ರಭಾವ ಬೀರುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬಿನ ಅಂಶಗಳು ಮಧುಮೇಹ ಹೆಚ್ಚು ಅಥವಾ ಕಡಿಮೆ ಮಾಡಬಹುದಾದ ಸಾಧ್ಯತೆ ಇರುತ್ತದೆ.

ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡಿಕೊಳ್ಳುವ ಟಿಪ್ಸ್

  • ನಿಮ್ಮ ಸಕ್ಕರೆ ಕಾಯಿಲೆಯನ್ನು ಸುಲಭವಾಗಿ ನಿರ್ವಹಣೆ ಮಾಡಿಕೊಳ್ಳಲು ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತೆ. ಇಲ್ಲಿ ಅವುಗಳನ್ನು ತಿಳಿಸಿಕೊಡಲಾಗಿದೆ.
  • ಆರೋಗ್ಯಕರವಾದ ಮತ್ತು ಸಮತೋಲನ ಆಹಾರ ಸೇವಿಸುವುದು
  • ಗೋಧಿ ಮತ್ತು ಇತರ ಕಾಳುಗಳು ಜೊತೆಗೆ ಮೊಸರು ಮತ್ತು ತಾಜಾ ಹಣ್ಣು ತರಕಾರಿಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಇರಲಿ.
  • ನಾರಿನ ಅಂಶ, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿರಲಿ.
  • ಓಟ್ಸ್ ಮತ್ತು ಕೋಳಿ ಮೊಟ್ಟೆ ತಿನ್ನುವುದಾದರೆ ಅದನ್ನು ಸೇವಿಸಿ.
RELATED ARTICLES
- Advertisment -
Google search engine

Most Popular

Recent Comments