ಕುವೆಂಪು ಹೇಗೆ ನಾ ಮರೆಯಲಿ
ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರ ಕವಿಯು ಕುವೆಂಪು ತಾನೇ
ಹೇಗೆ ನಾನು ಮರೆಯಲಿ
ಕವಿಯೇ ನಿನ್ನ ಕವಿತೆಯಲ್ಲಿ
ವಿಶ್ವ ಮಾನವ ಸಂದೇಶ ಇರುವಲಿ
ನಾಡ ಗೀತೆ ಬರೆದ ಕವಿಯ
ಹೇಗೆ ನಾನು ಮರೆಯಲಿ
ಮಳೆಯಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲಿ
ಮಲೆನಾಡಿನ ಜನರ ಜೀವನ
ಕಣ್ಣ ಮುಂದೆ ತೇಲಿ ಬರುತಲಿ
ಹೇಗೆ ನಾನು ಮರೆಯಲಿ
ದೃಶ್ಯ ಕಾವ್ಯ ರಮ್ಯ ನಾಟಕ
ಜಲಗಾರ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ
ದಶ೯ನ ಭಾಗ್ಯ ನೀಡಿದ ಪ್ರಕೃತಿ ಕವಿಯ ಹೇಗೆ ನಾನು ಮರೆಯಲಿ
ಅಂಕುಶದ ಹಂಗಿಲ್ಲದೆ
ಎದೆಯ ಬೆಳಕಿನ ಆಸರೆಯಲ್ಲಿ
ಜಗಕೆ ಬೆಳಕಾಗುವ ಈ ಸನ್ಮತಿ ನನಗಿರಲಿ ಕವಿಯೇ ಜಗಕ್ಕಿರಲಿ
—
ಗೊರೂರು ಆನಂತರಾಜು
ಹಾಸನ