ನಟ ಪಂಕಜ್‌ ತ್ರಿಪಾಠಿ ನಟಿಸುತ್ತಿರುವ ವಾಜಪೇಯಿ ಅವರ ಜೀವನಗಾಥೆಯ ಕಥಾಹಂದರವನ್ನು ಹೊಂದಿರುವ ʼ ಮೇ ಅಟಲ್ ಹೂʼ ಚಿತ್ರದ ಫಸ್ಟ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಕವಿ, ರಾಜನೀತಿಜ್ಞ, ನಾಯಕ ಮತ್ತು ಮಾನವತಾವಾದಿ ಆಗಿದ್ದ ಅಟಲ್‌ ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರು ಅವರ ಬದುಕು ಹಾಗೂ ರಾಜಕೀಯ ಜೀವನದ ಹಾದಿಯನ್ನು ಬಣ್ಣದ ಲೋಕದಲ್ಲಿ ತೋರಿಸುವ ಸಿನಿಮಾವೇ ʼಮೇ ಅಟಲ್ ಹೂʼ.

ಫಸ್ಟ್‌ ಲುಕ್‌ ಹಾಗೂ ಮೋಷನ್‌ ಪಿಕ್ಚರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಪಂಕಜ್‌ ತ್ರಿಪಾಠಿ ಥೇಟು ಅಟಲ್‌ ರಂತಯೇ ಉಡುಗೆ – ತೊಡುಗೆ, ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಟಲ್‌ ಅವರಂತೆ ನಿಂತುಕೊಂಡು, ಅವರಂತೆಯೇ ಕೂದಲು ಬಾಚಿಕೊಂಡು, ಕನ್ನಡಕ ಹಾಕಿಕೊಂಡರುವ ಪಂಕಜ್‌ ಅವರ ಲುಕ್‌ ನೋಡಿ ಪ್ರೇಕ್ಷಕರು ಭೇಷ್‌ ಎಂದಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್‌ ಈ ಸಿನಿಮಾವನ್ನು ನಿರ್ದಶಿಸಿದ್ದು, ಉತ್ಕರ್ಷ್ ನೈತಾನಿ ಅವರು ಬರೆದಿದ್ದಾರೆ. ಸಲೀಂ-ಸುಲೈಮಾನ್ ಅವರ ಮ್ಯೂಸಿಕ್‌, ಸಮೀರ್‌ ಅವರ ಲಿರಿಕ್ಸ್‌ ಚಿತ್ರಕ್ಕೆ ಇರಲಿದೆ. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಸಿನಿಮಾವನ್ನು ಅರ್ಪಿಸುತ್ತಿದೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ. 2023ರ ಡಿಸೆಂಬರ್‌ ನಲ್ಲಿ ಸಿನಿಮಾ ತೆರೆಗೆ ಬರಲಿದೆ.