ಈ ವೇಳೆ ಮಾತನಾಡಿದ ಸಚಿವರು, ಅತ್ಯಂತ ಹಿಂದುಳಿದ ಮರಾಠ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರಕಾರ ಮರಾಠ  ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಹಲವಾರು ಯೋಜನೆ ಜಾರಿಗೊಳಿಸಿದೆ ಹಾಗೂ ಕುಳವಾಡಿ ಮರಾಠಿ ಸಮುದಾಯವು ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೆ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಶೀಘ್ರದಲ್ಲೇ ನಿವಾರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಮ್.ಜಿ.ಮುಳೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ್, ಪ್ರಮುಖರಾದ ರಾಮು ನಾಯ್ಕ, ರವಿ ಕೈಟಕರ್, ಬಾಲಕೃಷ್ಣ ನಾಯಕ ಸೇರಿದಂತೆ ಮರಾಠ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.