Tuesday, June 6, 2023
Homeರಾಜ್ಯಕೆಯುಡಬ್ಲ್ಯೂಜೆಗೆ ಜೊತೆಗೆ ಹೆಜ್ಜೆ ಇಟ್ಟ, ಕಾರವಾರ ಪತ್ರಕರ್ತರು ಒಂದು ಸಂತಸದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು.

ಕೆಯುಡಬ್ಲ್ಯೂಜೆಗೆ ಜೊತೆಗೆ ಹೆಜ್ಜೆ ಇಟ್ಟ, ಕಾರವಾರ ಪತ್ರಕರ್ತರು ಒಂದು ಸಂತಸದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು.

ನಾನಾ ಕಾರಣಗಳಿಗಾಗಿ ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕಡಲ ತೀರದ ಕಾರವಾರ ಪತ್ರಕರ್ತರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಜೊತೆಗೆ ಹೆಜ್ಜೆ ಇಡಲು ಸರ್ವ ಸಮ್ಮತವಾಗಿ ತೀರ್ಮಾನಿಸಿದ್ದಾರೆ.

ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಕಾರವಾರದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಪತ್ರಕರ್ತರು ಸಂಘದೊಳಗೆ ಬರಲು ನಿರ್ಣಯಿಸಿದ್ದು ವಿಶೇಷ.

ಇದುವರೆಗೂ ಪ್ರತ್ಯೇಕ ಸಂಘವಾಗಿ ಗುರುತಿಸಿಕೊಂಡಿದ್ದ ಕಾರವಾರ ಕೇಂದ್ರ ಸ್ಥಾನದ ಕಾರ್ಯನಿರತ ಪತ್ರಕರ್ತರನ್ನು ಇದೀಗ kuwj ತನ್ನ ಮಡಿಲಿಗೆ ಸೇರಿಸಿಕೊಳ್ಳುವ ಸಂಘಟನಾತ್ಮಕ ಪ್ರಯತ್ನ ಫಲಕೊಟ್ಟಿದೆ.

ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ kuwj ಯನ್ನು ಇನ್ನಷ್ಟು ಗುಣಾತ್ಮಕವಾಗಿ, ಸಂಘಟನಾತ್ಮಕವಾಗಿ ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದಂತಾಗಿದೆ.

ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದ
ಕಾರವಾರದ ಕೇಂದ್ರ ಸ್ಥಾನದಲ್ಲಿನ ಕಾರ್ಯನಿರತ ಪತ್ರಕರ್ತರ ಅಭಿಲಾಷೆಯಂತೆ ಅವರ ಜೊತೆ kuwj ಕಳೆದ ಐದಾರು ತಿಂಗಳಿಂದ ಸತತವಾಗಿ ಚರ್ಚೆ ನಡೆಸುತ್ತಾ ಬರಲಾಗಿತ್ತು. ಸದಸ್ಯತ್ವ ಕುರಿತ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು.

ಅಂತಿಮವಾಗಿ ಕಾರವಾರದ ಪತ್ರಿಕಾ ಭವನದಲ್ಲಿ kuwj ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರವಾರ ಕೇಂದ್ರದಲ್ಲಿನ ಕಾರ್ಯನಿರತ ಪತ್ರಕರ್ತರು ಸದಸ್ಯತ್ವ ಪಡೆಯಲು ಸಮ್ಮತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್ ಅವರು ಸೂಕ್ತ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಮಾತನಾಡಿದ ಎಲ್ಲರೂ ಕೆಯುಡಬ್ಲ್ಯೂಜೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಕೆಯುಡಬ್ಲ್ಯೂಜೆ ಸದಸ್ಯತ್ವದೊಂದಿಗೆ ಸಂಘಟನಾತ್ಮಕವಾದ ಮುಖ್ಯ ಧಾರೆಯಲ್ಲಿ ಹೆಜ್ಜೆ ಹಾಕುವುದರೊಂದಿಗೆ ಸವಾಲಿನ ಸಮಸ್ಯೆಗಳು ತಾರ್ಕಿಕ ಅಂತ್ಯಕಂಡಿರುವುದು ಸಂಘಟನೆಯ ಪಾಲಿಗೆ ಮಹತ್ವದ ಹೆಜ್ಜೆ.
ಇಷ್ಟು ಬೆಳವಣಿಗೆಗೆ ಸೌಹಾರ್ದ ಕೊಂಡಿಯಾಗಿ ಕೆಲಸ ಮಾಡಿದ ಇಂಡಿಯನ್ ಎಕ್ಸ್‌ಪ್ರೆಸ್ ನ ಸುಭಾಷ್ ಚಂದ್ರ ಅವರ ಪಾತ್ರ ಮರೆಯಲಾಗದು.

ಕಾರವಾರದ ಹಿರಿಯ ಪತ್ರಕರ್ತರೂ ಕಾರವಾರ ಕೇಂದ್ರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಹರಿಕಾಂತ್ , ಶೇಷಗಿರಿ, ದರ್ಶನ ನಾಯಕ್ ಅವರುಗಳು ಸೇರಿದಂತೆ ಎಲ್ಲಾ ಪತ್ರಕರ್ತರು ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದು ಸೂಸೂತ್ರ ಪರಿಹಾರಕ್ಕೆ ಸಹಕಾರಿಯಾಯಿತು. ಎಲ್ಲರಿಗೂ ಧನ್ಯವಾದಗಳು.

ನಿಜ ವೃತ್ತಿ ಬಾಂಧವರಾದ ಎಲ್ಲರನ್ನೂ ಒಳಗೊಳ್ಳುವುದೇ ( inclusive) ಕೆಯುಡಬ್ಲ್ಯೂಜೆ ಮೂಲ ಆಶಯ. ಅದನ್ನು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಸಾಧಿಸಲಾಗಿದೆ. ಇದು ಗುರಿತಲುಪುವ ಗುಟ್ಟು ಮತ್ತು ಹೋರಾಟದ ಮಂತ್ರ…

RELATED ARTICLES
- Advertisment -
Google search engine

Most Popular

Recent Comments