Friday, June 2, 2023
Homeರಾಜ್ಯಬೆಳಗಾವಿ21305 ಸಾವಿರ ಪ್ರಾಣಿಗಳು ಸತ್ತಿವೆ, ಸಚಿವರೇ ಏನ್ರಿ ಇದು: ಸದನದಲ್ಲಿ ಪಶು ಸಚಿವರಿಗೆ ಸಿದ್ದರಾಮಯ್ಯ ಚಾಟಿ

21305 ಸಾವಿರ ಪ್ರಾಣಿಗಳು ಸತ್ತಿವೆ, ಸಚಿವರೇ ಏನ್ರಿ ಇದು: ಸದನದಲ್ಲಿ ಪಶು ಸಚಿವರಿಗೆ ಸಿದ್ದರಾಮಯ್ಯ ಚಾಟಿ

ಬೆಳಗಾವಿ: ರಾಜ್ಯದಲ್ಲಿ 21305 ಸಾವಿರ ಪ್ರಾಣಿಗಳು ಸತ್ತಿವೆ,1200 ಪೋಸ್ಟ್ ಖಾಲಿ ಬಿದ್ದಿವೆ. ಪಶು ಸಂಗೋಪನೆ ಸಚಿವರನ್ನ ಇದಕ್ಕೆ ಏನು ಉತ್ತರ ಕೋಡತ್ತಿರಾ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಚಿವರನ್ನ ಸದನದಲ್ಲಿ ಬೆವರಿಸಿದರು.

ಜಾನುವಾರಿನ ಗಂಟು ರೋಗ ವಿಚಾರವಾಗಿ ಪಶು ಸಂಗೋಪನೆ ಇಲಾಖೆ ಕಾರ್ಯನಿರ್ವಾಹಣೆ ಬಗ್ಗೆ ಪ್ರಶ್ನೆ ಮಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಚಿವರಿಗೆ ಚಾಟಿ ಬಿಸಿದರು.
ಗೋವುಗಳಿಗೆ ಖಾಯಿಲಿ ಹೆಚ್ಚಾಗಿದೆ. ಆರು ತಿಂಗಳುಗಳಿಂದ ಲಸಿಕೆ ಹಾಕುವ ಕೆಲಸ ಮಾಡ್ತಾ ಇದ್ದಾರೆ. ಪಶುಸಂಗೋಪನೆ ಇಲಾಖೆ ಸತ್ತು ಹೋಗಿದ್ಯಾ?

14 ಲಕ್ಷ ಲೀಟರ್ ಕಡಿಮೆ ಆಗಿದೆ. ಹಾಲಿನ ರೇಟು 37 ರೂಪಾಯಿ ಇದೆ, 37*14 ಲಕ್ಷ ಲೀಟರ್ 6 ಕೋಟಿ 66 ಲಕ್ಷ ಹಣ ಪ್ರತಿ ದಿನ ಲಾಸ್ ಆಗ್ತಿದೆ. ರಾಜಕೀಯಕ್ಕಾಗಿ ಗೋರಕ್ಷಣೆ ಅಂತೀರಿ ಎಲ್ಲಪ್ಪ ಗೋರಕ್ಷಣೆ? ಎಂದು ಮಾತಿನಲ್ಲಿ ತಿವಿದರು.
ಇದಕ್ಕೆ ದ್ವನಿಗೂಡಿಸಿದ ಇತರೆ ಶಾಸಕರು, ಕೂಡಲೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ
ಸಚಿವ ಚೌಹಾನ್, ಸೋಮವಾರ ಉತ್ತರ ನೀಡುವುದಾಗಿ ಸಮಯವಕಾಶ ಕೋರಿದರು. ನಂತರ ಸ್ಪೀಕರ್ ಕಾಗೇರಿ ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇವೆಲ್ಲಾ ಸಮಸ್ಯೆಗೆ ಪರಿಹಾರ ನೀಡಿ. ಸರ್ಕಾರದ ಹಿರಿಯ ಸಚಿವರ ಸಲಹೆ ಪಡೆಯಿರಿ, ಮನುಷ್ಯರು ಅವರ ಭಾವನೆ ವ್ಯಕ್ತಪಡಿಸಬಹುದು ಆದರೆ ಇವು ಮೂಕ ಪ್ರಾಣಿಗಳು ಕೋವಿಡ್ ಮಾದರಿಯಲ್ಲಿ ತ್ವರಿತ ಪರಿಹಾರ ನೀಡಿ ಎಂದು ಸೂಚನೆ ನೀಡಿದರು.

RELATED ARTICLES
- Advertisment -
Google search engine

Most Popular

Recent Comments