Friday, June 2, 2023
Homeರಾಜಕೀಯಸುವರ್ಣಸೌಧ ಆವರಣದಲ್ಲಿ ಆಕರ್ಷಕ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ: ತಲೆದೂಗಿದ ಸಿಎಂ

ಸುವರ್ಣಸೌಧ ಆವರಣದಲ್ಲಿ ಆಕರ್ಷಕ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ: ತಲೆದೂಗಿದ ಸಿಎಂ

ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಖ ಇಲಾಖೆಯ ಹಾಸ್ಟೇಲ್ ವಿದ್ಯಾರ್ಥಿನಿಯರಿಂದ ಸುವರ್ಣಸೌಧದ ಎದುರು ಹುಲ್ಲುಹಾಸಿನ‌ ಮೇಲೆ ಆಕರ್ಷಕ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ನಡೆಯಿತು.
ಸಾವಿರಾರು ವಿದ್ಯಾರ್ಥಿನಿಯರು ಶುಭ್ರ ಬಂದ ಬಿಳಿ ವಸ್ತ್ರಧಾರಿಗಳಾಗಿ ಕರಾಟೆ ಪ್ರದರ್ಶನ ನಡೆಸಿಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸ್ಪೀಕರ್ ಬಸವರಾಜ ಹೊರಟ್ಟಿ, ಕಾನೂನು ಸಚಿವ ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನಂದ್ರ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಎಂಟಿಬಿ ನಾಗರಾಜ, ಬಿ.‌ಶ್ರೀರಾಮುಲು ಇತರರು ಉಪಸ್ಥಿತರಿದ್ದರು.
ಕ್ರೈಸ್ ವಸತಿ ಶಾಲೆಗಳು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಹಯೋಗ ನೀಡಿದ್ದವು.

RELATED ARTICLES
- Advertisment -
Google search engine

Most Popular

Recent Comments