ವಾಜಪೇಯಿ ಕಪ್-2022 ಎರಡನೇಯ ದಿನದಾಟ
ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್-2022 ರಾಷ್ಟ್ರಮಟ್ಟದ ಪುರುಷ, ಮಹಿಳಾ ವಾಲಿಬಾಲ್ ಎರಡನೇಯ ದಿನದ ಪಂದ್ಯಾವಳಿ.
ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಮಾಜಿ ಮಹಾಪೌರರುಗಳಾದ ಎಸ್.ಕೆ.ನಟರಾಜ್, ಕಟ್ಟೆ ಸತ್ಯನಾರಾಯಣ್, ಅಧ್ಯಕ್ಷರು, ಮಾಜಿ ಉಪಮಹಾಪೌರರಾದ ಎಸ್.ಹರೀಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನಾರಾಯಣಸ್ವಾಮಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಎಸ್.ಕೇಶವಮೂರ್ತಿ, ರಾಜೇಂದ್ರಕುಮಾರ್, ಬಿ.ಜೆ.ಪಿ.ಯುವ ಮುಖಂಡರಾದ ಸಪ್ತಗಿರಿಗೌಡ, ಶ್ರೀಮತಿ ವಿನುತಾ ಹರೀಶ್ ರವರು ಆಟಗಾರರಿಗೆ ಶುಭಾಕೋರಿದರು.
ಕರ್ನಾಟಕ ಮತ್ತು ತಮಿಳುನಾಡು ಮಹಿಳಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾರಿ ಪೈಪೋಟಿಯಿಂದ ಕೊಡಿತ್ತು.
20-25, 27-29, 21-25 ನೇರ ಸೆಟ್ ಮೂಲಕ ತಮಿಳುನಾಡು ಮಹಿಳಾ ತಂಡ ಜಯಭೇರಿ ಬಾರಿಸಿತು.
ತಮಿಳುನಾಡು ತಂಡದ ಪರ ಕಾವ್ಯ, ಪ್ರೀತಿ ಅತ್ಯುತ್ತಮ ಹೊಡೆತಗಳಿಂದ ಪಾಯಿಂಟ್ ಸಂಗ್ರಹ ಮಾಡಿದರು.
ಕೇರಳ ಕಳರಿಪಾಯಟ್ಟು ಸಾಹಸ ಕಲೆ ಪ್ರದರ್ಶನ ಏರ್ಪಡಿಸಲಾಗಿತ್ತು.