ಅಟಲ್ ಬಿಹಾರಿ ವಾಜಪೇಯಿರವರು ಕ್ರೀಡೆ, ಕ್ರೀಡಾಪಟುಗಳು ನೀಡುತ್ತಿದ್ದ ಪ್ರೋತ್ಸಾಹ, ಸಹಕಾರ ನಮಗೆ ಸ್ಪೂರ್ತಿ,ಪೇರಣೆಯಾಗಿದೆ-ಎಸ್.ಹರೀಶ್
ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್-2022 ರಾಷ್ಟ್ರಮಟ್ಟದ ಪುರುಷ, ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು ರಾಜ್ಯದ ಮಹಿಳಾ ಸಾಧಕಿಯರಿಂದ ವಾಜಪೇಯಿ ಕಪ್-2022ರ ಉದ್ಘಾಟನೆಯನ್ನು ಮಾಜಿ ಸಚಿವರಾದ ರಾಮಚಂದ್ರಗೌಡರವರು,ಮಾಜಿ ಮೇಯರ್ ಶ್ರೀಮತಿ ಕೆ.ಶಾಂತಕುಮಾರಿ, ಶ್ರೀಮತಿ ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಇನ್ನರ್ ವೀಲ್‌ಕ್ಲಬ್, ಡಿಸ್ಟಿಕ್ಸ್-3194 ಚೇರ್ಮನ್ ಶ್ರೀಮತಿ ವಿನುತಾ ಹರೀಶ್, ಅರ್ಜುನ ಪ್ರಶಸ್ತಿ ಪುರಸ್ಕೃರಾದ ಶ್ರೀಮತಿ ಶೋಭಾ ನಾರಾಯಣ್, ಶ್ರೀಮತಿ ಉಮಾದೇವಿ, ಅಂತಾರಾಷ್ಟ್ರೀಯ ಆಟಗಾರರಾದ ಕುಮಾರಿ ರಿತಿಮಾ ವೀರೇಂದ್ರಕುಮಾರ್, ಅಶ್ವಿನಿ ಅಕ್ಕುಂಜಿ, ಶ್ರೀಮತಿ ಪವಿತ್ರ, ಕುಮಾರಿ ರಜನಿ, ಕುಮಾರಿ ಅಂಜಲಿ, ಯುಕ್ತಿ ರಾಜೇಂದ್ರ ಮಹಿಳಾ ಇನ್ಸ್‌ಪೆಕ್ಟರ್‌ಗಳಾದ ಶ್ರೀಮತಿ ರೂಪಾ ಹಡಗಲಿ, ಶ್ರೀಮತಿ ಶಿವರತ್ನ ,ಅಧ್ಯಕ್ಷರು,ಮಾಜಿ ಮಹಾಪೌರರಾದ ಎಸ್.ಹರೀಶ್ ,ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ವಾಲಿಬಾಲ್ ಚಂಡು ಹೊಡೆಯುವ ಮೂಲಕ ಪಂದ್ಯಾವಳಿಯ ಉದ್ಘಾಟನೆ ನೇರವೆರಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಭಾವಚಿತ್ರಕ್ಕೆ ಪುಷ್ಪನಮನ ಗಣ್ಯ ಅತಿಥಿಗಳು ಸಲ್ಲಿಸಿದರು.
ಅಧ್ಯಕ್ಷರು,ಮಾಜಿ ಉಪಮಹಾಪೌರರಾದ ಎಸ್.ಹರೀಶ್ ರವರು ಮಾತನಾಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರು ದೇಶ ಕಂಡ ಅಪ್ರತಿಮ ನಾಯಕ, ದೇಶದ ಜನರು ಅವರನ್ನ ಅಜಾತ ಶತ್ರು ಕರೆಯುತ್ತಿದ್ದರು.
ಅಟಲ್ ಅವರ ಆಡಳಿತದಲ್ಲಿ ಕ್ರೀಡಾಪಟುಗಳಿಗೆ ಅತಿಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಅದೇ ಮಾರ್ಗದಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿರವರು ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಕೊಡುತ್ತಿದ್ದಾರೆ.
ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಕೇಂದ್ರ ಸರ್ಕಾರ ಗೌರವ ಪುರಸ್ಕಾರ ನೀಡಿ ಸನ್ಮಾನಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಬೆಳಯಬೇಕು ಎಂಬ ಉದ್ದೇಶದಿಂದ ನಮ್ಮ ಸಂಘವು ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ,ಪ್ರೋತ್ಸಾಹ ನೀಡಲಾಗಿದೆ.
ಅಟಲ್ ಜೀರವರು ಕ್ರೀಡಾಪಟುಗಳಿಗೆ ನೀಡುತ್ತಿದ್ದ ಸಹಕಾರ, ಪ್ರೋತ್ಸಹ ನಮಗೆ ಸ್ಪೂರ್ತಿ,ಪೇರಣೆಯಾಗಿದೆ.
ಇಂದು ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಯೋಗ ಮತ್ತು ಯುವ ಕ್ರೀಡಾಪಟುಗಳಿಗೆ ತರಭೇತಿ ಕೇಂದ್ರ ಹಾಗೂ ಹಾಸ್ಟಲ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ನಮ್ಮ ಸಂಘವು ಯುವ ಕ್ರೀಡಾಪಟುಗಳಿಗೆ ಉತ್ತೇಜನ, ಆರ್ಥಿಕ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ನೆಲಸೂಗಡು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.