Tuesday, June 6, 2023
Homeರಾಜ್ಯಕೆ.ಆರ್.ಪೇಟೆಪಂಚರತ್ನ ಜೆಡಿಎಸ್ ವರಿಷ್ಠ ದೇವೇಗೌಡರ ಕನಸಿಕ ಕಲ್ಪನೆಯ ಮಹತ್ವದ ಕಾರ್ಯಕ್ರಮ

ಪಂಚರತ್ನ ಜೆಡಿಎಸ್ ವರಿಷ್ಠ ದೇವೇಗೌಡರ ಕನಸಿಕ ಕಲ್ಪನೆಯ ಮಹತ್ವದ ಕಾರ್ಯಕ್ರಮ

ಕೆ.ಆರ್.ಪೇಟೆ.: ಪಂಚರತ್ನ ಜೆಡಿಎಸ್ ವರಿಷ್ಠ ದೇವೇಗೌಡರ ಕನಸಿಕ ಕಲ್ಪನೆಯ ಮಹತ್ವದ ಕಾರ್ಯಕ್ರಮ. ವಿಶೇಷ ಹಾಗೂ ವಿಭಿನ್ನವಾಗಿ ಆಯೋಜಿಸಿ ನಾಡಿನ ಜನರನ್ಮು ತಲುಪಲು ಸಹಾಯಕವಾಗುವ ಕಾರ್ಯಕ್ರಮ ಎಂದು ತಾಲ್ಲೂಕಿನ ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು. ಅವರು ತಮ್ಮ ಕುಲದೇವರು ಶ್ರೀಕೋಟೆಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಪಂಚರತ್ನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಸಿಎಂ ಕುಮಾರಣ್ಣ ಹೇಳುವಂತೆ ಹೊಸಹೊಳಲು ಸರ್ವ ಜನಾಂಗ ಇರುವ ದೊಡ್ಡ ಗ್ರಾಮ ಈ ವೇದಿಕೆಯಲ್ಲಿ ಎಲ್ಲಾ ಸಮುದಾಯದ ಮುಖಂಡರುಗಳು ಪೂರ್ವಬಾವಿ ಸಭೆಗೆ ಆಗಮಿಸಿರುವುದು ಸಂತಸ ತಂದಿದೆ. ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ನನ್ನ ಮೊದಲ ಸಭೆ ಇಲ್ಲಿ ನಡೆಯುತ್ತಿದ್ದು ಗ್ರಾಮದಲ್ಲಿ ನೀವು ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಅಧಿಕಾರ ಇಲ್ಲದಿದ್ದ ಸಮಯದಲ್ಲಿಯೂ ಕುಮಾರಣ್ಣ ರಾಜ್ಯದಲ್ಲಿ ರೈತರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಜಿಲ್ಲೆಯ ಎಲ್ಲಾ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ, ಸಹಕಾರ ನೀಡಿದರು. ರೈತರ ಸಾಲ ಮನ್ನಕ್ಕಾಗಿ ಬಜೆಟ್‌ನ ಕಾಲುಭಾಗ ಹಣವನ್ನು ರೈತರ ಸಾಲ ಮನ್ನಾಕ್ಕಾಗಿ ಮೀಸಲಿಟ್ಟರು. ನಾಡಿನ ರೈತರನ್ನು ಮೇಲೆತ್ತಲು ಕುಮಾರಣ್ಣ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಪಂಚರತ್ನ ಗ್ರಾಮೀಣ ಪ್ರದೇಶದ ಜನರಿಗೆ ಒಳ್ಳೆಯ ಕಾರ್ಯಕ್ರಮವಾಗಿದೆ. ಕುಮಾರಣ್ಣನ ಒಳ್ಳೆಯತನಕ್ಕೆ ಆ ದೇವರೂ ಸಹ ಕೃಪೆ ತೋರಿ ಎರಡನೇ ಬಾರಿಗೆ ಸಿಎಂ ಆಗುವಂತೆ ಮಾಡಿತು. ಇದೇ ೨೫ ರ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ ಆಗಬೇಕು. ಆ ರೀತಿ ಜನರು ಬೆಂಬಲಿಸಬೇಕು ಎಂದರು.
ವರಿಷ್ಠರಿಗೆ ಅಭಿನಂದನೆಗಳನ್ನು ಸಲ್ಲಿಸುವೆ; ಮಂಜು.
ತಾಲ್ಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಅಧೀಕೃತ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿರುವ ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅಪ್ಪಾಜಿ, ಮಾಜಿ ಸಿಎಂ ಕುಮಾರಣ್ಣ, ಮಾಜಿ ಸಚಿವ ರೇವಣ್ಣ, ರಾಜ್ಯಾದ್ಯಕ್ಷ ಇಬ್ರಾಹಿಂ, ನಿಖಿಲ್ ಕುಮಾರಸ್ವಾಂಇ, ಸೂರಜ್, ಪ್ರಜ್ವಲ್ ರೇವಣ್ಣ, ಪುಟ್ಟರಾಜಣ್ಣ, ಬಾಲಕೃಷ್ಣ, ಚೋಳೇನಹಳ್ಳಿ ಪುಟ್ಟಸ್ವಾಮಣ್ಣ ದೇರಿದಂತೆ ಎಲ್ಲಾ ನಾಯಕರಿಗೆ ನನ್ನ ಅಭಿನಂದನೆಗಳು. ನೀವು ಇಟ್ಟಿರುವ ಅಭಿಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದರು,
ಅಭ್ಯರ್ಥಿ ಘೋಷಣೆ ಕಾರ್ಯಕರ್ತರಲ್ಲಿ ಸಂತಸ ತಂದಿದೆ.; ಜಾನಕೀರಾಮು.
ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹೆಚ್.ಟಿ.ಮಂಜು ರವರನ್ನು ಪಕ್ಷದ ನಾಯಕರು ಘೋಷಿಸಿದ್ದು ಸಂತಸ ತಂದಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು ತಿಳಿಸಿದರು. ಇದೇ ೨೫ ರಂದು ತಾಲ್ಲೂಕಿಗೆ ಪಂಚರತ್ನ ಯಾತ್ರೆ ಆಗಮಿಸುತ್ತಿದ್ದು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ತಾಲ್ಲೂಕಿನ ಜನತೆಯಲ್ಲಿ ಹೆಚ್ಚಿನ ಬಲ ಬಂದಂತಾಗಿದೆ.
ನಾರಾಯಣಗೌಡರ ದುರಾಡಳಿತಕ್ಕೆ ಮುಕ್ತಿ ಕಾಣಿಸಿ; ಬೇಲದಕೆರೆ ನಂಜಪ್ಪ
ಪಂಚರತ್ನ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಜನ ಕಾರ್ಯಕ್ರಮಕ್ಕೆ ಆಗಮಿಸಿ ರಣಕಹಳೆ ಮೊಳಗಿಸಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಬೇಕು. ಬಿಜೆಪಿ ದುಂಡಾವರ್ತನೆ ತಾಲ್ಲೂಕಿನಲ್ಲಿ ಅಂತ್ಯವಾಗಬೇಕು. ಹೆಚ್.ಟಿ.ಮಂಜಣ್ಣನನ್ನು ಗೆಲ್ಲಿಸಲು ಹಾಗೂ ಕುಮಾರಣ್ಣನಿಗೆ ಶಕ್ತಿ ತುಂಬಲು ಪಂಚರತ್ನ ಯಾತ್ರೆಗೆ ಹೆಚ್ಚಿನ ಜನ ಆಗಮಿಸಬೇಕು ತಾಲ್ಲೂಕಿನಲ್ಲಿ ನಾರಾಯಣಗೌಡರ ದುರಾಡಳಿತ ಮಿತಿಮೀರಿದೆ. ಎಲ್ಲಾ ಇಲಖೆಗಳಲ್ಲಿಯೂ ವ್ಯಾಪಕ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಯುವಕರು ಇದೆಲ್ಲವನ್ಮೂ ಗಮನಿಸಿ ಯುವಕರ ಶಕ್ತಿಯ ಪ್ರತೀಕದಂತಿರುವ ಮಂಜಣ್ಣನ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂಡಿಸಿಸಿ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಪುರಸಭಾ ಸದಸ್ಯ ಹೆಚ್.ಡಿ.ಅಶೋಕ್, ತಾಪಂ ಮಾಜಿ ಸದಸ್ಯರಾದ ರಾಜು, ಮೋಹನ್, ಜೆಡಿಎಸ್ ಮುಖಂಡ ಬೇಲದಕೆರೆ ನಂಜಪ್ಪ, ಗ್ರಾಮದ ಮುಖಂಡರಾದ ಚಿಕ್ಕೇಗೌಡ, ರಾಮೇಗೌಡ, ಚಂದ್ರಹಾಸ, ಮಂಜುಳಾಚನ್ನಕೇಶವ, ಕಾಂತರಾಜು, ಸೇರಿದಂತೆ ಹಲವಾರು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments