ಕೆ.ಆರ್.ಪೇಟೆ.: ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.ವೀಣಾ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ.
೧೫ ಸಂಖ್ಯಾ ಬಲದ ಮಾಕವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೧೩ ಸದಸ್ಯರು ಅಧ್ಯಕ್ಷೆಯ ವಿರುದ್ದ ಅವಿಶ್ವಾಸಕ್ಕೆ ಸಹಿ ಹಾಕಿದ್ದು ಇದರಿಂದ ಬಿಜೆಪಿ ಬೆಂಬಲಿತ ಅಧ್ಯಕ್ಷೆ ವೀಣಾ ಅವರಿಗೆ ಸೋಲುಂಟಾಗಿದೆ.
ಗ್ರಾಮ ಪಂಚಾಯತಿ ವ್ಯಾಫ್ತಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕೈಗೊಳ್ಳಲು ಯಾವುದೇ ರೀತಿಯ ಸಹಕಾರ ನೀಡದ ಹಾಗೂ ಸಿಬ್ಬಂದಿಯ ನಿಯಂತ್ರಣ ಅಧಿಕಾರ ದುರ್ಬಳಕೆ ಸೇರಿದಂತೆ ಯಾವುದೇ ರೀತಿಯ ಮಾಹಿತಿಗಳನ್ನು ಚುನಾಯಿತ ಜನಪ್ರತಿನಿಧಿಗಳಾದ ನಮಗೆ ನೀಡುತ್ತಿಲ್ಲ.
ಸಭೆಗಳನ್ನು ನಿಗಧಿತ ಸಮಯಕ್ಕೆ ಕರೆದು ಅಭಿವೃದ್ದಿ ಕಾರ್ಯಗಳಮಾಡುವಿಕೆ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಸೌಜನ್ಯವನ್ನೂ ತೋರದ ಹಿನ್ನೆಲೆಯಲ್ಲಿ ಹಲವು ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಂಡವಪುರ ಉಪವಿಬಾಗಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲಿಸಿ ಸೋಮವಾರ ಅವಿಶ್ವಾಸ ಗೊತ್ತುವಳಿಗೆ ಸಮಯ ನಿಗಧಿಗೊಳಿಸಿದ್ದ ಪಾಂಡವಪುರ ಉಪವಿಬಾಗಾಧಿಕಾರಿ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಅಧ್ಯಕ್ಷೆ ವೀಣಾ ಪರ ಇಬ್ಬರು ಹಾಗೂ ಅಧ್ಯಕ್ಷರ ವಿರೋಧವಾಗಿ ೧೩ ಮಂದಿ ಮತ ಚಲಾಯಿಸಿದರು. ಇದರೊಂದಿಗೆ ಅವಿಶ್ವಾಸ ಗೊತ್ತುವಳಿಯಲ್ಲಿ ಅಧ್ಯಕ್ಷರಿಗೆ ಸೋಲುಂಟಾಯಿತು. ಇದರಿಂದ ಬಿಜೆಪಿ ಬೆಂಬಲಿಗರಿಗೆ ನಿರಾಸೆ
ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.ವೀಣಾ
RELATED ARTICLES