Tuesday, June 6, 2023
Homeರಾಜ್ಯಕೋರಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ: ವಿಜೇತರಿಗೆ ಬಹುಮಾನ ವಿತರಣೆ

ಕೋರಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ: ವಿಜೇತರಿಗೆ ಬಹುಮಾನ ವಿತರಣೆ

ಬೆಂಗಳೂರು;ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯ ಮಟ್ಟದ ಕಿರಿಯರ ಕರಾಟೆ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಕೋರಮಂಗಲದ ಬಿಲ್ಡರ್ಸ್ ನ್ಯಾಷನಲ್ ಗೇಮ್ಸ್ ವಿಲೇಜ್ ಕ್ಲಬ್ ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದರು.

ವೈಟ್ ಬೆಲ್ಟ್ ವಿಭಾಗದಲ್ಲಿ 6 ರಿಂದ 13 ವರ್ಷ ವಯೋಮಾನದ ಬಾಲಕರು, 4 ರಿಂದ 12 ವರ್ಷದ ಬಾಲಕಿಯರು ಸ್ಪರ್ಧಿಸಿದ್ದರು. ಇದೇ ರೀತಿ ಎಲ್ಲೋ ಬೆಲ್ಟ್, ಗ್ರೀನ್ ಬೆಲ್ಟ್, ಆರಂಜ್ ಬೆಲ್ಟ್, ಆರಂಜ್ ಮತ್ತು ಪರ್ಪಲ್ ಬೆಲ್ಟ್, ಪರ್ಪಲ್ ಬೆಲ್ಟ್, ಬ್ಲ್ಯೂ ಬೆಲ್ಟ್, ಗ್ರೇ ಬೆಲ್ಟ್, ಬ್ರೌನ್ ಮತ್ತು ಬ್ರೌನ್ ಬ್ಲಾಕ್ ಬೆಲ್ಟ್, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಕರ್ನಾಟಕದ ಸಂಸ್ಥಾಪಕ ಮತ್ತು ತಾಂತ್ರಿಕ ನಿರ್ದೇಶಕ ಕ್ಯೊಶಿ ಪಿ.ಆರ್. ರಮೇಶ್, ಪ್ರಧಾನ ಕಾರ್ಯದರ್ಶಿ ರೆನ್ಶಿ ಆರ್. ಗಣೇಶ್ ನಿರ್ದೇಶಕರಾದ ನಿತಿ ಮಹೇಂದ್ರ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

RELATED ARTICLES
- Advertisment -
Google search engine

Most Popular

Recent Comments