ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲಾ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ. ಇಂಥವರಿಗೆ ಮತ ನೀಡಿ ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೋದಕಡೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ. ಅರ್ಜಿ ಹಾಕಿದವರಿಗೆ ನಮಗೂ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇರುತ್ತದೆ. ಏಕಾಏಕಿ ಟಿಕೆಟ್ ಘೋಷಿಸಿದರೆ, ಅರ್ಜಿ ಹಾಕಿದವರಿಗೆ ನಿರಾಸೆಯಾಗುತ್ತದೆ.
ಅರ್ಜಿ ಇತ್ಯರ್ಥ ಆಗದೆ ಇಂಥವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು. ಬೆಳಗಾವಿ ಗಡಿ ವಿಚಾರ ವರ್ಷಕ್ಕೆ ಒಂದು ಸರಿ ಬಂದು ಹೋಗುವ ಮಳೆ. ಚುನಾವಣಾ ಸಂದರ್ಭದಲ್ಲಿ ವಿವಾದ ಹುಟ್ಟಿಕೊಳ್ಳುತ್ತದೆ. ಆನಂತರ ಶಮನವಾಗುತ್ತದೆ ಎಂದಿದ್ದಾರೆ.