Tuesday, June 6, 2023
Homeರಾಜ್ಯಡಾ. ಶಾಲಿನಿ ರಜನೀಶ್ ಅವರಿಗೆ “ಇಂಡಿಯಾ ಸಿ.ಎಸ್.ಆರ್. ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್”

ಡಾ. ಶಾಲಿನಿ ರಜನೀಶ್ ಅವರಿಗೆ “ಇಂಡಿಯಾ ಸಿ.ಎಸ್.ಆರ್. ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್”

ಬೆಂಗಳೂರು, ಡಿಸೆಂಬರ್ 17, (ಕರ್ನಾಟಕ ವಾರ್ತೆ): ಭಾರತ ಸಿ.ಎಸ್.ಆರ್ ವತಿಯಿಂದ ಕೊಡಮಾಡುವ ಪ್ರತಿಷ್ಟಿತ “ಇಂಡಿಯಾ ಸಿ.ಎಸ್.ಆರ್. ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್” ಗೆ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭಾಜನರಾಗಿದ್ದಾರೆ. ಇವರಿಗೆ ಡಿಸೆಂಬರ್ 17ರಂದು ನವದೆಹಲಿಯ ಸಿರಿ ಇನ್ಸ್ಟಿಟ್ಯೂಷನಲ್ ಏರಿಯಾದ ಮೋದಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಭಾರತ ಸಿಎಸ್‍ಆರ್ ವತಿಯಿಂದ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿ ಇದಾಗಿದ್ದು, 13ನೇ ಭಾರತ ಸಿಎಸ್‍ಆರ್ ಮುಂದಾಳತ್ವದ ಶೃಂಗಸಭೆಯಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗಿದೆ.
ಪ್ರತಿ ವರ್ಷ ಭಾರತದ ಸಿಎಸ್‍ಆರ್ ಮುಂದಾಳತ್ವದ ಶೃಂಗಸಭೆಯನ್ನು ನಡೆಸುತ್ತಾ ಬರಲಾಗುತ್ತಿದ್ದು, ಇದು ದೇಶದ ಆರ್ಥಿಕತೆ ಹಾಗೂ ಮೂಲ ಸೌಕರ್ಯದ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಾಪೆರ್Çೀರೇಟ್ ಕಂಪನಿಗಳು ಸರ್ಕಾರಗಳ ಜತೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲು ಸಿಎಸ್‍ಆರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಶೃಂಗಸಭೆಯಲ್ಲಿ ಸಾಮಾಜಿಕ ಒಳಿತಿಗಾಗಿ ಒಮ್ಮುಖವಾಗಿ ಪ್ರಯತ್ನಿಸುವುದು ಸೇರಿದಂತೆ ಸಂಭಾವ್ಯ ಅವಕಾಶಗಳು ಮತ್ತು ಅಸ್ತಿತ್ವದಲ್ಲಿರುವ ಸವಾಲುಗಳನ್ನು ಅನ್ವೇಷಿಸುವತ್ತ ಗಮನ ಹರಿಸಲಾಗುತ್ತದೆ.

ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕರ್ನಾಟಕದಲ್ಲಿ ಸಿಎಸ್‍ಆರ್ ನಿಧಿಯ ಸಮರ್ಪಕ ಬಳಕೆಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ಯೋಜನಾ ಇಲಾಖೆಯ ಮಾರ್ಗದರ್ಶನದಲ್ಲಿ ಯುಎನ್‍ಡಿಪಿ, ಎಸ್‍ಡಿಜಿಸಿಸಿ ಸಹಯೋಗದಲ್ಲಿ “ಆಕಾಂಕ್ಷ” ವೇದಿಕೆಯನ್ನು ಹುಟ್ಟುಹಾಕಲಾಗಿತ್ತು. ಇದು ಸಿಎಸ್‍ಆರ್ ನಿಧಿ ಬಳಕೆಯ ಒಂದು ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. 2021ರ ಮೇ 26ರಂದು ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ನೀತಿ ಆಯೋಗದ ಸಿಇಒ ಅವರು ಈ ಈ ಆನ್‍ಲೈನ್ ವೇದಿಕೆಗೆ ಚಾಲನೆ ನೀಡಿದ್ದರು.

300ಕ್ಕೂ ಹೆಚ್ಚು ಯೋಜನೆ ಅನುಷ್ಟಾನ

ರಾಜ್ಯದಲ್ಲಿ ಈಗಾಗಲೇ ಆಕಾಂಕ್ಷ ವೇದಿಕೆ ಮೂಲಕ ಕಾಪೆರ್Çರೇಟ್ ಕಂಪನಿಗಳು ರಾಜ್ಯದ ವಿವಿಧ ಆದ್ಯತೆಗಳಿಗೆ ಕೈಜೋಡಿಸಿವೆ. ಇದುವರೆಗೆ 300ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಅನುμÁ್ಠನಗೊಳಿಸಿವೆ. ಯಾವ ಯಾವ ಜಿಲ್ಲೆಗಳು ಸೇರಿದಂತೆ ಯಾವ ಪ್ರದೇಶದಲ್ಲಿ ಯಾವ ಮೂಲ ಸೌಕರ್ಯದ ಅವಶ್ಯಕತೆ ಇದೆ ಎಂಬುದನ್ನು ಈ ವೇದಿಕೆ ಮೂಲಕ ಒಪ್ಪಂದ ಮಾಡಿಕೊಂಡು ಅನುಷ್ಟಾನ ಮಾಡುತ್ತಿವೆ.

ಆಕಾಂಕ್ಷ ಕಾರ್ಯನಿರ್ವಹಣೆ ಹೇಗೆ?

“ಆಕಾಂಕ್ಷ” ಆನ್‍ಲೈನ್ ವೇದಿಕೆಯು ಪಾರದರ್ಶಕತೆಯನ್ನು ಕಾಯ್ದುಕೊಂಡಿದೆಯಲ್ಲದೆ, ಉತ್ತರದಾಯಿತ್ವವನ್ನು ಹೊಂದಿದೆ. ಹೀಗಾಗಿ ಸಿಎಸ್ಆರ್ ಅಡಿ ಸಂಗ್ರಹವಾದ ಹಣದ ಬಳಕೆಯ ಖರ್ಚು, ಭೌಗೋಳಿಕ ಪ್ರದೇಶ, ವಲಯವನ್ನೊಳಗೊಂಡಸಂಪೂರ್ಣ ಮಾಹಿತಿಗಳನ್ನು ಈ ಸಾರ್ವಜನಿಕ ಡೊಮೇನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯ ಸಂಸ್ಥೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಾನಿಗಳ ಸಂಸ್ಥೆಗಳು ಹಾಗೂ ಖಾಸಗಿ ವಲಯದಲ್ಲಿ ಸಿಎಸ್ಆರ್ ಉಪಕ್ರಮದ ಭಾಗವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಕಾಂಕ್ಷ ವೇದಿಕೆಯು ಗುರುತಿಸುವ, ಸುಗಮಗೊಳಿಸುವ ಹಾಗೂ ಸಜ್ಜುಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತದೆ.

ಈ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ

ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಹಸಿವು ಮುಕ್ತ, ಬಡತನ ಮುಕ್ತ ನಾಡನ್ನು ಕಟ್ಟುವುದು ಮುಖ್ಯ ಗುರಿಯಾಗಿದ್ದು, ಇದಕ್ಕೆ ಕಾಪೆರ್Çೀರೇಟ್ ಕಂಪನಿಗಳ ಸಹಭಾಗಿತ್ವವನ್ನು ಪಡೆದುಕೊಳ್ಳಲಾಗುತ್ತದೆ. ರಾಜ್ಯದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ಉಪ ವಲಯಗಳಾದ ಪರಿಸರ, ಆರೋಗ್ಯ, ಶಿಕ್ಷಣ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಸೂಕ್ತ ಎನ್‍ಜಿಒ ಪಾಲುದಾರರನ್ನು ಗುರುತಿಸಲು ದಾನಿಗಳಿಗೆ ಆಕಾಂಕ್ಷ ನೆರವಾಗುತ್ತದೆ. ಈ ಮೂಲಕ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.

ಸರ್ಕಾರ, ಎನ್‍ಜಿಒಗಳು, ದಾನಿ ಏಜೆನ್ಸಿಗಳು, ಎಚ್‍ಎನ್‍ಐಗಳು, ನವೋದ್ಯಮಿಗಳು ಆಕಾಂಕ್ಷದ ಭಾಗವಾಗಿದ್ದಾರೆ. ಅಲ್ಲದೆ, ಇದರ ಮೂಲಕ ಇಲಾಖಾ ಅನುಮೋದನೆಗಳನ್ನು ಪಡೆಯುವುದು ಸರಳವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲದೆ ಸರಳವಾಗಿ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕುವ ಪ್ರಕ್ರಿಯೆ ಸಹ ಇದರಲ್ಲಿದೆ.

ಸಂಯೋಜನೆ ಮತ್ತು ಸಮಗ್ರ ವಿಧಾನದ ಮೂಲಕ ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆಕಾಂಕ್ಷ ಸಹಾಯಕವಾಗಿದೆ. ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಆಕಾಂಕ್ಷ ಈಗ ಇತರ ರಾಜ್ಯಗಳಾದ ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆ ಅನುಷ್ಟಾನಕ್ಕೆ ಮುಂದಾಗಲಾಗಿದೆ.

RELATED ARTICLES
- Advertisment -
Google search engine

Most Popular

Recent Comments