Tuesday, June 6, 2023
Homeರಾಜ್ಯಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ

ತುಮಕೂರು: ಈ ದಿನ ತುಮಕೂರಿನ ಗಂಗಸಂದ್ರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಶ್ರೀ ಬಸವರಾಜು ರವರು, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು, ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್ ರವರು, ತಾಲೂಕು ದಂಡಾಧಿಕಾರಿಗಳಾದ ಶ್ರೀ ಸಿದ್ದೇಶ್ ರವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಮದುವೆ ಸಹಾಯಧನ ಬಾಂಡುಗಳ ವಿತರಣೆ, ತಾಯಿ ಮಗು ಸಹಾಯ ಹಸ್ತ ಮಂಜೂರಾತಿ ಆದೇಶಗಳು, ಪ್ರಮುಖ ವೈದ್ಯಕೀಯ ಮಂಜೂರಾತಿ ಆದೇಶಗಳು, ಅಂತ್ಯಸಂಸ್ಕಾರದ ಮಂಜೂರಾತಿ ಆದೇಶಗಳು ಹಾಗೂ ಕಟ್ಟಡ ಕಾರ್ಮಿಕ ಫಲಾನುಭವಿ ಮಕ್ಕಳ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ಗಳನ್ನು ವಿತರಿಸಿದರು. ಈ ಸಮಯದಲ್ಲಿ ತುಮಕೂರಿನ 1ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಶ್ರೀ ಡಿಎಂ ವೆಂಕಟೇಶ್ ಬಾಬು ರವರು ಇಲಾಖೆಯ ಮಂಡಳಿಗಳ ವಿವಿಧ ಸೌಲಭ್ಯಗಳ ಕುರಿತಾದ ಮಾಹಿತಿಯನ್ನು ಹಾಗೂ e-shram ನೊಂದಣಿ ಕಾರ್ಯವನ್ನು ಸಹ ಸಿಬ್ಬಂದಿಯ ಸಹಕಾರದೊಂದಿಗೆ ವಿತರಿಸಿದರು

RELATED ARTICLES
- Advertisment -
Google search engine

Most Popular

Recent Comments