Tuesday, June 6, 2023
Homeರಾಜ್ಯಕಡುಬಡ ಕುಟುಂಬಕ್ಕೆ ಆಸರೆ ಆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಕಡುಬಡ ಕುಟುಂಬಕ್ಕೆ ಆಸರೆ ಆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಕೋಲಾರ: ಜಿಲ್ಲೆಯ ವೇಮಗಲ್ ಯೋಜನಾ ಕಛೇರಿ ವ್ಯಾಪ್ತಿಯ ಸುಲೂರು ಗ್ರಾಮ ಪಂಚಾಯಿತಿ ಪೆಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಬಡವೃದ್ಧ ರತ್ನಮ್ಮರವರು ಶಿಥಿಲ ಮನೆಯಲ್ಲಿ ವಾಸುಸುತ್ತಿದ್ದು, ಇವರನ್ನು ಗುರುತಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ರತ್ನಮ್ಮರವರಿಗೆ ರೂ 1.೦೦ ಲಕ್ಷ ವೆಚ್ಚದಲ್ಲಿ ಮತ್ತು ಇತರೆ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶೌಚಾಲಯ ಸಹಿತ ಮನೆಯನ್ನು ನಿರ್ಮಿಸಿಲಾಗಿದೆ.
ಮನೆಗೆ ಸಹಕಾರ ನೀಡಿದ ಊರಿನ ಗ್ರಾ.ಪಂ.ಮಾಜಿ ಸದಸ್ಯರಾದ ಮುನಿರಾಜುರವರು ನೂತನವಾಗಿ ವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ನೂತನ ಮನೆಯನ್ನು ಗುರುವಾರ ಬೆಂಗಳೂರು ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ.ಎಂ.ಉದ್ಘಾಟಿಸಿ ಮನೆಯನ್ನು ವೃದ್ದರಿಗೆ ಹಸ್ತಾಂತರ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾತಾಡಿದ ಪ್ರಾದೇಶಿಕ ನಿರ್ದೇಶಕರು ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮನೆಯನ್ನು ನಿರ್ಮಿಸಿದ್ದು, ರತ್ನಮ್ಮರವರಿಗೆ ಸಂಸ್ಥೆಯು 2020 ರಿಂದ 750/-ರೂ. ಹಾಗೆಯೇ ಮಾಶಾಸನವನ್ನು ಕೊಟ್ಟಿದ್ದು ಹಾಗೂ ವಾತ್ಸಲ್ಯ ಕೀಟ್‌ನ್ನು ಕೊಟ್ಟು ರತ್ನಮ್ಮರವರಿಗೆ ಸಂಸ್ಥೆಯು ಆಸರೆಯಾಗಿರುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 2022-23 ನೇ ಸಾಲಿನಲ್ಲಿ ಬಡ ವೃದ್ಧ ಕುಟುಂಬಗಳಿಗೆ 5೦೦ ಮನೆ ನಿರ್ಮಿಸಲು ಪೂಜ್ಯರು ಮತ್ತು ಅಮ್ಮನವರು 5 ಕೋಟಿ ಅನುಧಾನವನ್ನು ಮೀಸಲು ಇಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ನಿರ್ದೇಶಕರಾದ ಶ್ರೀ ಮುರುಳಿಧರಶೆಟ್ಟಿ, ತಾಲೂಕಿನ ಯೋಜನಾಧಿಕಾರಿಯಾದ ಶ್ರೀ ಅನಿಲ್ ಆರ್, ಹಾಗೂ ಮಾಜಿ ಗ್ರಾ.ಪಂ.ಸದಸ್ಯರಾದ ಮುನಿರಾಜುರವರು, ತಾಲೂಕಿನ ಜ್ಞಾನವಿಕಾಸ ಸಮಾನ್ವಯಾಧಿಕಾರಿ ಶ್ರೀಮತಿ ಶಿಲ್ಪ, ಮೇಲ್ವಿಚಾರಕರಾದ ಶ್ರೀಮತಿ ಉಷಾ, ಸೇವಾಪ್ರತಿನಿಧಿ ಉಷಾ ಮತ್ತು ಹೇಮಾವತಿ ಸೇರಿ ಇನ್ನಿತರರು ಇದ್ದರು.
RELATED ARTICLES
- Advertisment -
Google search engine

Most Popular

Recent Comments