ವಿದ್ಯುತ್ ಉಪಕರಣಗಳನ್ನು ಕಳವು ಮಾಡಿದ್ದಕ್ಕೆ ಸಂಬಂಧಿಸಿದ 9 ಪ್ರತ್ಯೇಕ ಪ್ರಕರಣಗಳಲ್ಲಿ ಉತ್ತರ ಪ್ರದೇಶದ ಇಕ್ರಂ ಎಂಬುವವರಿಗೆ ವಿಚಾರಣಾಧೀನ ನ್ಯಾಯಾಲಯವು ತಲಾ ಎರಡು ವರ್ಷದಂತೆ ಒಟ್ಟು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ವಿಚಾರಣೆಗೆ ಒಳಪಡಿಸಿತು.
ಸುಪ್ರೀಂಕೋರ್ಟ್‌ಗೆ ಯಾವ ಪ್ರಕರಣವೂ ಸಣ್ಣದಲ್ಲ. ಯಾವ ಪ್ರಕರಣವೂ ದೊಡ್ಡದಲ್ಲ. ನಾಗರಿಕರ ಆತ್ಮಸಾಕ್ಷಿ ಹಾಗೂ ಸ್ವಾತಂತ್ರ್ಯದ ಕೂಗಿಗೆ ನಾವು ಉತ್ತರ ನೀಡಲೇಬೇಕಾಗುತ್ತದೆ. ಅದಕ್ಕಾಗಿಯೇ ನಾವು ಇಲ್ಲಿದ್ದೇವೆ. ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಅಮೂಲ್ಯ ಹಾಗೂ ಪರಭಾರೆ ಮಾಡಲಾರದಂತದ್ದು ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರ ವಾದ ಆಲಿಸಿದ ನ್ಯಾಯಪೀಠವು ಇದೊಂದು ಆಘಾತಕಾರಿ ಪ್ರಕರಣ ಎಂದು ಹೇಳಿ ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತು.