ಬೆಂಗಳೂರು ,ಡಿಸೆಂಬರ್ 17, 2022: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಇದರ CSR ಮುಖವಾದ ರಿಲಯನ್ಸ್ ಫೌಂಡೇಶನ್ ಮತ್ತು ಜಪಾನೀಸ್ ಮತ್ತು ಫ್ರೆಂಚ್ ಜಂಟಿ ಉದ್ಯಮ ಕಂಪನಿಯ ಮೂಲಕ ಪ್ರೋಬಯಾಟಿಕ್ಸ್ ಮತ್ತು ಅದರ ಸಂಬಂಧಿತ ಕ್ಲಿನಿಕಲ್ ಸಂಶೋಧನಾ ಸಂಸ್ಥೆಗಳಲ್ಲಿ ಜಾಗತಿಕ ಮುಖ್ಯಸ್ಥರಾಗಿರುವ Yakult Danone ಇಂಡಿಯಾ ಪ್ರೈ. ಲಿಮಿಟೆಡ್ ಇವುಗಳೆರಡೂ ಜಂಟಿಯಾಗಿ ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ (RFYC) ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಸಹಯೋಗವು RFYC ಸ್ಕಾಲರ್‌ಗಳಿಗೆ ಏಷ್ಯಾದಾದ್ಯಂತ ಅಂತರಾಷ್ಟ್ರೀಯ ಯುವ ಫುಟ್ಬಾಲ್ ಪಂದ್ಯಾವಳಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಯಾಕುಲ್ಟ್ ತಂಡವು ಪ್ರೋಬಯಾಟಿಕ್‌ಗಳು ಮತ್ತು ಪೋಷಣೆಯ ಬಗ್ಗೆ ಜ್ಞಾನವನ್ನು ಹಂಚಿಕೊಳ್ಳಲು ತರಬೇತಿ ಮತ್ತು ಇನ್‌ಸ್ಟಿಟ್ಯೂಟ್‌ನಲ್ಲಿನ ಕಾರ್ಯಕ್ಷಮತೆ ತಂಡಗಳೊಂದಿಗೆ ಕೆಲಸ ಮಾಡುತ್ತದೆ, ಇದರಿಂದಾಗಿ ಸ್ಕಾಲರ್‌ಗಳ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.
ಇದಲ್ಲದೆ, RFYC ಸ್ಕಾಲರ್‌ಗಳು ತಮ್ಮ ವಯಸ್ಸಿನ ಕ್ಲಬ್ ಫುಟ್ಬಾಲ್ ಆಟಗಾರರೊಂದಿಗೆ ಅನುಭವ, ತರಬೇತಿ ಮತ್ತು ಜ್ಞಾನವನ್ನು ಜಂಟಿಯಾಗಿ ಹಂಚಿಕೊಳ್ಳಲು ಏಷ್ಯಾದಲ್ಲಿ ವಿವಿಧ ವಯೋಮಾನದ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಅವಕಾಶವನ್ನು ಪಡೆಯುತ್ತಾರೆ. ಈ ಸಂಬಂಧವು ಜಪಾನ್ ಮತ್ತು ಭಾರತದ ನಡುವಿನ ಕ್ರೀಡೆಗಳ ಜ್ಞಾನ ಹಂಚಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೇ ಯುವ ಆಟಗಾರರ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ. RFYC ತಂಡವು ಈ ಹಿಂದೆ ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್ ಲೀಗ್‌ನ ತಂಡಗಳ ವಿರುದ್ಧ ಆಡಿದೆ. ಅಕ್ಟೋಬರ್ 2022 ರಲ್ಲಿ, RFYC U14 ತಂಡಗಳು ಮಲೇಷ್ಯಾ ಸೂಪರ್‌ಮೋಖ್ ಕಪ್ 2022 ರಲ್ಲಿ ಯುರೋಪಿಯನ್, ಆಸಿಯಾನ್ ಮತ್ತು ಜಪಾನೀಸ್ ಯುವ ತಂಡಗಳ ವಿರುದ್ಧ ಆಡಿದ್ದವು. U17 RFYC ತಂಡವು ಜಪಾನ್‌ನಲ್ಲಿ 2023 ರಲ್ಲಿ ಸ್ಯಾನಿಕ್ಸ್ ಇಂಟರ್ನ್ಯಾಷನಲ್ ಕಪ್ ಎಂದು ಹೆಸರಿಸಲಾದ ಉನ್ನತ ಮಟ್ಟದ U17 ಪಂದ್ಯಾವಳಿಗಳಲ್ಲಿ ಭಾಗವಹಿಸಲು ಜಪಾನ್‌ಗೆ ಪ್ರಯಾಣಿಸಲು ನಿರ್ಧರಿಸಲಾಗಿದೆ.
ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಯಾಕುಲ್ಟ್ ಡಾನೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹಿರೋಶಿ ಹಮದಾ ಅವರು, “ಭಾರತದಲ್ಲಿ ಯುವ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ರಿಲಯನ್ಸ್ ಫೌಂಡೇಶನ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ನಾವು ಈಗ ರಿಲಯನ್ಸ್ ಫೌಂಡೇಶನ್‌ನೊಂದಿಗಿನ ನಮ್ಮ ಒಡನಾಟದ ಮೂಲಕ ಭಾರತದ ಯುವಕರ ಆರೋಗ್ಯವನ್ನು ಸುಧಾರಿಸಲು ಆಸಕ್ತಿ ಹೊಂದಿದ್ದೇವೆ, ಇದು ಪ್ರಪಂಚದಾದ್ಯಂತದ ಜನರ ಆರೋಗ್ಯ ಮತ್ತು ಸಂತೋಷಕ್ಕೆ ಕೊಡುಗೆ ನೀಡುವ ನಮ್ಮ ಕಾರ್ಪೊರೇಟ್ ತತ್ವಕ್ಕೆ ಅನುಗುಣವಾಗಿದೆ.” ಎಂದು ಅಭಿಪ್ರಾಯಪಟ್ಟರು.
“ಇಂತಹ ಸಿಎಸ್ಆರ್ ಚಟುವಟಿಕೆಗಳ ಮೂಲಕ, ನಾವು ಜಪಾನ್ ಮತ್ತು ಮಲೇಷ್ಯಾದಲ್ಲಿ ಫುಟ್ಬಾಲ್ ಪರಿಸರ ವ್ಯವಸ್ಥೆಯಲ್ಲಿ ವಿವಿಧ ಪಾಲುದಾರರೊಂದಿಗೆ ಭದ್ರವಾದ ಕೆಲಸದ ಸಂಬಂಧವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಈಗ ಭಾರತದಲ್ಲಿ ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ ಕಾರ್ಯಕ್ರಮದ ಯುವ ಪ್ರತಿಭಾವಂತ ಆಟಗಾರರ ಅನುಕೂಲಕ್ಕಾಗಿ ಅದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ.”
ಮುಂದುವರೆಸಿ, “ನಾವು ನಮ್ಮ ವಿಶಿಷ್ಟವಾದ ಯಾಕುಲ್ಟ್ ಉತ್ಪನ್ನವನ್ನು ಒದಗಿಸುತ್ತೇವೆ ಮತ್ತು ಅದರ ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯ ಪ್ರಯೋಜನಗಳನ್ನು ಹಂಚಿಕೊಳ್ಳುತ್ತೇವೆ, ಇದು ಆಟಗಾರರು ಮತ್ತು ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ ಕಾರ್ಯಕ್ರಮದ ಸಿಬ್ಬಂದಿಗಳೊಂದಿಗೆ ಕ್ರೀಡಾಪಟುಗಳಿಗೆ ಹೆಚ್ಚು ಪ್ರಸ್ತುತವಾಗಿದೆ, ಅವರ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” , ಎಂದು ಶ್ರೀ ಹಮದಾ ಅವರು ತನ್ನ ಮಾತನ್ನು ಸೇರಿಸಿದರು.
ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ ಕಾರ್ಯಕ್ರಮವು ಪ್ರತಿಭಾವಂತ ಯುವ ಫುಟ್‌ಬಾಲ್ ಆಟಗಾರರನ್ನು ಗುರುತಿಸುವ ಮತ್ತು ಪಿಚ್‌ನಲ್ಲಿ ಮತ್ತು ಹೊರಗೆ ಅವರ ಸಾಮರ್ಥ್ಯವನ್ನು ಓರೆಗೆ ಹಚ್ಚುವ ಅತ್ಯುತ್ತಮ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುವ ದೃಷ್ಟಿಯನ್ನು ಆಧರಿಸಿದೆ. ರಿಲಯನ್ಸ್ ಫೌಂಡೇಶನ್‌ನ ಸಂಪೂರ್ಣ ಪ್ರೋತ್ಸಾಹದಿಂದ, ಪ್ರತಿ ವರ್ಷ RFYC ಸಮಗ್ರ ವರ್ಷವಿಡೀ ಸ್ಕೌಟಿಂಗ್ ಪ್ರಕ್ರಿಯೆಯ ನಂತರ ದೇಶದಾದ್ಯಂತದ ಯುವ ಪ್ರತಿಭೆಗಳಿಗೆ ಪೂರ್ಣ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ಈ ವರ್ಷ, ರಾಜ್ಯದಲ್ಲಿ ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ (RFYC) ನ ಮೂಲಕ, ನೌಪಾಂಗ್ (ಮಕ್ಕಳ) ಲೀಗ್ ಮೂಲಕ ತಳಮಟ್ಟದಲ್ಲಿ ಫುಟ್‌ಬಾಲ್‌ಗೆ ಸಂಪೂರ್ಣ ಹೈಪರ್-ಲೋಕಲ್ ಮಾರ್ಗ ಮತ್ತು ವಿಕೇಂದ್ರೀಕೃತ ವಿಧಾನವನ್ನು ವಿಸ್ತರಿಸಲು, ಪರಿವರ್ತಿಸಲು ಮತ್ತು ರಚಿಸಲು ಮಿಜೋರಾಂ ಫುಟ್‌ಬಾಲ್ ಅಸೋಸಿಯೇಷನ್ ಮತ್ತು RFYC ಕೈ ಜೋಡಿಸಿವೆ.
ಮುಂಬೈನಲ್ಲಿರುವ RFYC ಅಕಾಡೆಮಿಯು ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಮರ್ಪಿತ ಬಹು-ಶಿಸ್ತಿನ ಪೂರ್ಣ ಸಮಯದ ಸಿಬ್ಬಂದಿಯನ್ನು ಹೊಂದಿದೆ. RFYC ಪ್ರಸ್ತುತ ದೇಶಾದ್ಯಂತ, ಐದು ವಿವಿಧ ವಯಸ್ಸಿನ ಗುಂಪುಗಳಲ್ಲಿ (U14, U15, U16, U17, ಮತ್ತು U19)
ಮಕ್ಕಳನ್ನು ಆಯೋಜಿಸಿ ಆಡುತ್ತದೆ.