ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಹಾಗೂ ಮಹಿಳಾ ಬಾಕ್ಸಿಂಗ್ ಪಂದ್ಯಾವಳಿಯನ್ನು 2022 ಅನ್ನು ಆಯೋಜಿಸಲಾಗಿತ್ತು.
ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ ಪುರುಷ 20, ಮಹಿಳಾ ಇಪ್ಪತ್ತು ಬಾಕ್ಸಿಂಗ್ ಸ್ಪರ್ದಾಳುಗಳು ಭಾಗವಹಿಸಿದ್ದರು. ಪಂದ್ಯಾವಳಿಗೆ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜಿ.ನಾರಾಯಣ್, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಅಪ್ಪಾಜಿ ಗೌಡ ಚಾಲನೆ ನೀಡಿದರು.
ಕಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆನಂದ್ ಮಾತನಾಡಿ, ಇದು ಐದನೇ ವರ್ಷದ ಬಾಕ್ಸಿಂಗ್ ಅಂತರ ಕಾಲೇಜು ಪಂದ್ಯಾವಳಿಯಾಗಿದ್ದು. ಸುಮಾರು ಇಪ್ಪತ್ತು ಕಾಲೇಜುಗಳಿಂದ ಸ್ಪರ್ದಾಳುಗಳು ಕಣದಲ್ಲಿದ್ದಾರೆ ಎಂದು ಹೇಳಿದರು.