Tuesday, June 6, 2023
Homeಕ್ರೀಡೆಬಿಗ್‌ ಬ್ಯಾಷ್‌ ಟಿ20: ಘಟಾನುಘಟಿಗಳಿದ್ದ ಸಿಡ್ನಿ ಥಂಡರ್ಸ್ ತಂಡ 15ರನ್‌ಗೆ ಆಲೌಟ್

ಬಿಗ್‌ ಬ್ಯಾಷ್‌ ಟಿ20: ಘಟಾನುಘಟಿಗಳಿದ್ದ ಸಿಡ್ನಿ ಥಂಡರ್ಸ್ ತಂಡ 15ರನ್‌ಗೆ ಆಲೌಟ್

ಅಡಿಲೇಡ್‌ ಸ್ಟೈಕರ್ಸ್‌ ತಂಡದ ಆಟಗಾರರ ಸಂಭ್ರಮ (ಚಿತ್ರಕೃಪೆ: Twitter / @StrikersBBL)

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸ್ಟೈಕರ್ಸ್‌, ಕ್ರಿಸ್‌ ಲಿನ್‌ (36) ಹಾಗೂ ಕಾಲಿನ್‌ ಡಿ. ಗ್ರಾಂಡ್‌ಹೋಂ (33) ಅವರ ಉಪಯುಕ್ತ ಆಟದ ನೆರವಿನಿಂದ 9 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು.

ಈ ಸಾಧಾರಣ ಗುರಿ ಬೆನ್ನಟ್ಟಿದ ಥಂಡರ್ಸ್‌ ಕೇವಲ 5.5 ಓವರ್‌ಗಳಲ್ಲಿ 15 ರನ್‌ಗಳಿಗೆ ಆಲೌಟಾಗಿ, 124 ರನ್‌ಗಳಿಂದ ಸೋತಿತು. ಥಂಡರ್ಸ್‌ ಪಡೆಯ ಐವರು ಬ್ಯಾಟರ್‌ಗಳು ಸೊನ್ನೆ ಸುತ್ತಿದರೆ, ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಸ್ಫೋಟಕ ಬ್ಯಾಟಿಂಗ್‌ ಮೂಲಕ ಟಿ20 ಸ್ಪೆಷಲಿಸ್ಟ್‌ಗಳೆನಿಸಿದ್ದ ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ (0), ದಕ್ಷಿಣ ಆಫ್ರಿಕಾದ ರೈಲಿ ರುಸ್ಸೋ (3), ಆಸ್ಟ್ರೇಲಿಯಾದ ಆಲ್‌ರೌಂಡರ್‌ ಡೇನಿಯಲ್‌ ಸ್ಯಾಮ್ಸ್‌ (1) ಹೀನಾಯ ಪ್ರದರ್ಶನ ತೋರಿದರು.

ಹೆನ್ರಿ ಥಾರ್ಟನ್‌ (3ಕ್ಕೆ 5) ಮತ್ತು ವೆಸ್‌ ಅಗರ್‌ (6ಕ್ಕೆ 4) ಅವರ ದಾಳಿಗೆ ಎದುರಾಳಿ ತಂಡ ನಲುಗಿತು.

2019 ರಲ್ಲಿ ನಡೆದ ಕಾಂಟಿನೆಂಟಲ್‌ ಕಪ್‌ ಟೂರ್ನಿಯ ಪಂದ್ಯದಲ್ಲಿ ಟರ್ಕಿ ತಂಡ, ಜೆಕ್‌ ರಿಪಬ್ಲಿಕ್‌ ಎದುರು 21 ರನ್‌ಗಳಿಗೆ ಆಲೌಟಾಗಿದ್ದು, ವೃತ್ತಿಪರ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದಿನದ ಕನಿಷ್ಠ ಮೊತ್ತ ಆಗಿತ್ತು.

RELATED ARTICLES
- Advertisment -
Google search engine

Most Popular

Recent Comments