ಕೆ.ಆರ್.ಪೇಟೆ.: ಕ್ರೀಡಾಸಚಿವ ಕೆ.ಸಿ.ನಾರಾಯಣಗೌಡ ಕ್ಷೇತ್ರದ ಅಭಿವೃದ್ಧಿಗೆ 1700 ಕೋಟಿ ಅನುದಾನ ತಂದಿರುವುದು ಸಾಬೀತು ಪಡಿಸಲು ಬಹಿರಂಗ ಮುಖಾಮುಖಿ ಚರ್ಚೆಗೆ ಆಹ್ವಾನಿಸಿ, ನಾವೋ, ನೀವೋ ಕ್ಷೇತ್ರದ ಜನರಿಗೆ ಗೊತ್ತಾಗಲಿ ಎಂದು ಕಾಂಗ್ರೆಸ್ ಮುಖಂಡರುಗಳು ಸಚಿವರಿಗೆ ಬಹಿರಂಗ ಸವಾಲನ್ನು ಹಾಕಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರಕುಮಾರ್ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು ಕೆಬಿಸಿ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಹನ್ನೆರಡುವರೆ ಸಾವಿರ ರೈತರಿಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ನೀಡಿದ್ದಾರೆ. ಊಯ್ಗೋನಹಳ್ಳಿ 220 ಮೆಗಾವ್ಯಾಟ್ ವಿದ್ಯುತ್ ಸ್ವೀಕರಣ ಕೇಂದ್ರ ಸ್ಥಾಪನೆ, ನಾಲೆ ಆಧುನೀಕರಣ, ಬಸ್ ಡಿಪೋ, ಎಳನೀರು ಮಾರಕಟ್ಟೆ, ಡಿಗ್ರಿ ಕಾಲೇಜು ಸ್ಥಾಪನೆಗೆ ಕಾರಣಕರ್ತರು. ಕೆಬಿಸಿ ಎಂದು ದ್ವೇ?ದ ರಾಜಕಾರಣ ಮಾಡಿಲ. ತಾಲ್ಲೂಕಿನಾದ್ಯಂತ ಮಂಡಿ ಉದ್ದ ಗುಂಡಿ ಬಿದ್ದಿವೆ. ಈ ರಸ್ತೆಗಳಲ್ಲಿ ಸಚಿವ ಓಡಾಡುತ್ತಿದ್ದರೂ ಗುಂಡಿ ಮುಚ್ಚಿಸಿಲ್ಲ. ತಾಲೂಕು ಕ್ರೀಡಾಂಗಣ ಮುಚ್ಚಿ ಸ್ವಿಮ್ಮಿಂಗ್ ಫುಲ್ ಮಾಡಿದ್ದೀರಿ. ಹೊಸಹೊಳಲು ಕೆರೆ ಅಬಿವೃದ್ಧಿಗೆ ಜನ ವಿರೋಧವಿದೆ. ಅಭಿವೃದ್ಧಿ ವಿಚಾರದ ಬಗ್ಗೆ ಬಹಿರಂಗ ಚರ್ಚೆಗೆ ಸಚಿವರನ್ನು ಆಹ್ವಾನಿಸಿದರು. ಧಾರ್ಮಿಕ ಕಾರ್ಯಕ್ರಮ ಕುಂಭಮೇಳದಲ್ಲಿ ರಾಜಕಾರಣ ಮಾಡಿದರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಅದು ಕೇಸರಿ ಮೇಳವಾಗಿತ್ತು. ಅಧಿಕಾರ ಶಾಶ್ವತವಲ್ಲ ಎಂದರು.
ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಜಿಪಂ ಮಾಜಿ ಸದಸ್ಯ ವೆಂಕಟೇಶ್. 2೦೦8 ತನಕ ರಾಜಕೀಯ ಕ್ಷೇತ್ರದಲ್ಲಿ ಗೌರವವಿತ್ತು. ನಂತರ ಈ ಕ್ಷೇತ್ರಕ್ಕೆ ಯಾವುದೇ ಗೌರವವಿಲ್ಲದಂತಾಗಿದೆಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಕಾಲದಲ್ಲಿ ವಿಠಲಾಪುರ, ಬಂಡಿಹೊಳೆ, ಮುರುಕನಹಳ್ಳಿ ಸೇತುವೆ ನಿರ್ಮಾಣ. 5೦೦೦ ಜನರಿಗೆ ನಿವೇಶನ ಹಂಚಿಕೆ. ಮಂದಗೆರೆ ಎಡ ಮತ್ತು ಬಲ ದಂಡೆ ನಾಲೆ ಆಧುನೀಕರಣ.
90 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ ಕೆಲಸವಾಗಿದೆ. ಸಚಿವರ 1700 ಕೋಟಿ ಅನುದಾನ ಸುಳ್ಳು ಎಂದರು. ಮೂಡಾ ಅಧ್ಯಕ್ಷರೆ ಹಿಂದಿನದನ್ನು ನೆನಪಿಸಿಕೊಳ್ಳಿ.; ಪುರಸಭೆ ಸದಸ್ಯ ರವೀಂದ್ರಬಾಬು. ಹಿಂದೆ ಚಂದ್ರಶೇಖರ್ ಜತೆ ಇದ್ದಾಗ ದೇವರಾಗಿದ್ದರು. ಈಗ ದೇವ್ವವಾಗಿದ್ದಾರಾ.
ಹೇಮಾವತಿ ಬಡಾವಣೆಯಲ್ಲಿ ಕೆ.ಬಿ.ಚಂದ್ರಶೇಖರ್ ಹಣ ಪಡೆದು ನಿವೇಶನ ಕೊಟ್ಟಿಲ್ಲ. ದ್ವೇಷದ ರಾಜಕಾರಣ ಮಾಡಿದ್ದಕ್ಕೆ ಪ್ರಕರಣ ಹೈಕೋರ್ಟ್‌ಗೆ ಹೋಯಿತು. ನಿಮ್ಮ ಮನೆಗೆ ಹೋಗುವ ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ. ಪೌರಡಳಿತ ಸಚಿವರಾಗಿದ್ದಾಗ ಪಟ್ಟಣಕ್ಕೆ ಅನುದಾನ ಕೊಡಲಿಲ್ಲ, ಯುಜಿಡಿ ಸಮಸ್ಯೆ ಕ್ಲಿಯರ್ ಮಾಡಲಿಲ್ಲ. ರಸ್ತೆ ಅಭಿವೃದ್ಧಿಗೆ ೪.೫ ಕೋಟಿ ಅನುದಾನ ತಂದವರು ಮಾಜಿ ಶಾಸಕ ಕೆ.ಬಿ.ಸಿ ಎಂದರು.
ಅಭಿವೃದ್ದಿ ನಿಮ್ಮ ಕರ್ತವ್ಯ ನೆನಪಿರಲಿ.; ಬಸ್ತಿ ರಂಗಪ್ಪ. ಮಾಜಿ ಶಾಸಕ ಕೆಬಿಸಿ ಸಚಿವರನ್ನು ತಮ್ಮ ಕೊಡುಗೆ ಎನು ಎಂದು ಕೇಳಿದ್ದು ತಪ್ಪಾ? ಅಭಿವೃದ್ಧಿಯನ್ನು ನಿಮ್ಮ ಮನೆಯಿಂದ ತಂದು ಮಾಡಿ ಅಂತೀಲ್ಲ. ಸಚಿವರಾಗಿರೋದರಿಂದ ಕೆಲಸ ಮಾಡಿ ಎಂದು ಕೇಳುತ್ತೀವಿ. ಸಚಿವರು ನೂರು ಎಕರೆ ಆಸ್ತಿ ಮಾಡಿಕೊಂಡಿದ್ದಾರೆ. ಸಾದ್ಗೋನಹಳ್ಳಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಜಮೀನು ಮಾಡಿದ್ದೀರಿ. ಸಚಿವರು ಪಕ್ಷದಿಂದ ಪಕ್ಷಕ್ಕೆ ಕಪ್ಪೆಯಂತೆ ಜಿಗಿದು ಹೋಗುತ್ತಾರೆ.
ನಾವು ಇಂತಹ ಚಂಗಲಾಟ ಮಾಡಿಲ್ಲ ಎಂದರು. ಅದ್ಯಾವ ಡಬಲ್‌ಡಿಗ್ರಿ ಮಾಡಿದ್ದೀರಿ ಅಂತಾ ಮೂರು ಖಾತೆ ಕೊಟ್ರೊ ಗೊತ್ತಿಲ್ಲ ; ಪುರಸಭೆಸದಸ್ಯ ಕೆ.ಸಿ.ಮಂಜುನಾಥ್. ಬಿಜೆಪಿ ಸರ್ಕಾರದ ಸಚಿವ ನಾರಾಯಣಗೌಡ ಮೂರು ಪಕ್ಷಕ್ಕೂ ಹೋಗಿ ಬಂದವರು. ಕೆಬಿಸಿ ಕಾಂಗ್ರೆಸ್‌ನಲ್ಲಿ 35 ವರ್ಷದಿಂದ ಇದ್ದಾರೆ. ಸಚಿವ ಅದ್ಯಾವ ಡಬಲ್ ಡಿಗ್ರಿ ಮಾಡಿದ್ದೀರಿ ಅಂತಾ ಬಿಎಸ್‌ವೈ ಮೂರು ಖಾತೆ ಕೊಟ್ರೊ ಗೊತ್ತಿಲ್ಲ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ಪುರಸಭೆ ಕಚೇರಿ ನಿರ್ಮಾಣಕ್ಕೆ ಮೈತ್ರಿ ಸರ್ಕಾರ ಅನುದಾನ ಕೊಟ್ಟರು ಕಾಮಗಾರಿ ಪ್ರಾರಂಭವಾಗಿಲ್ಲ. ಕ್ಷೇತ್ರದಲ್ಲಿ ನಿಮ್ಮ ಸಾಧನೆ ಎನಿದೆ. ಪಟ್ಟಣದ ರಸ್ತೆ ಅಗಲೀಕರಣದ ವೇಳೆ ಮನೆ ಮಾಲೀಕರಿಗೆ ನೋಟಿಸ್ ನೀಡದೆ ಹೊಡೆದರೂ ಮಾಲೀಕರಿಗೆ ಪರಿಹಾರ ಕೊಟ್ಟಿಲ್ಲ ಎಂದರು.
ಕ್ಷೇತ್ರದ ಅಭಿವೃದ್ಧಿಗೆ 1700 ಕೋಟಿ ಅನುದಾನ ತಂದಿರುವುದು ಸಾಬೀತು ಪಡಿಸಲು ಬಹಿರಂಗ: ಕ್ರೀಡಾಸಚಿವ ಕೆ.ಸಿ.ನಾರಾಯಣಗೌಡ
RELATED ARTICLES