ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಆಲ್ಬಮ್ ನಲ್ಲಿನ ನಟನೆಗೆ ನಟ, ಸಮಾಜ ಸೇವಕ ಮಹೇಂದ್ರ ಮನೋತ್ ಅವರಿಗೆ ವಿಶೇಷ ಪ್ರಶಸ್ತಿ ಸಂದಿದೆ. ಹುಬ್ಬಳ್ಳಿಯ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಮೂರು ದಿನಗಳ ಕರ್ನಾಟಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ೨೦೨೨ ದಲ್ಲಿ ಚಿತ್ರನಟಿಯರಾದ ಪ್ರಿಯಾಂಕ ಉಪೇಂದ್ರ ಮತ್ತು ಭವ್ಯ ಅವರು ಮಹೇಂದ್ರ ಮನೋತ್ ಅವರಿಗೆ ಮನೋಜ್ಞ ನಟನೆಗಾಗಿ ಮುನೋತ್ ಅನುಪಸ್ಥಿತಿಯಲ್ಲಿ ನಿರ್ದೇಶಕ ಹರಿಹರನ್ ಬಿ.ಪಿ. ಅವರಿಗೆ “ವಿಶೇಷ ಸಮರ್ಪಣಾ ಪ್ರಶಸ್ತಿ” ಪ್ರದಾನ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ನಿರ್ಮಿಸಿದ “ಹೆದರದಿರು ಓ ಮನಸೆ” ಸಾಕ್ಷ್ಯ ಚಿತ್ರದ ಸಾಹಿತ್ಯಕ್ಕೆ ಇದೇ ಸಂದರ್ಭದಲ್ಲಿ ಮಹೇಂದ್ರ ಮನೋತ್ ಅವರಿಗೆ ಉತ್ತಮ ಸಾಹಿತ್ಯ ಪ್ರಶಸ್ತಿ ಸಂದಿದೆ.
ನಾಡ ಗೀತೆಗೆ ಸಂಗೀತ ಸಂಯೋಜನೆಯನ್ನು ಸಂಗೀತಕಾರ ವಿಜಯಕೃಷ್ಣ ಮಾಡಿದ್ದಾರೆ. ಗಾಯಕ ಅಜಯ್ ವಾರ್ಯರ್ ಧ್ವನಿ ಇದ್ದು, ಹರಿಹರನ್ ಬಿ ಪಿ ನಿರ್ದೇಶನದಲ್ಲಿ ಈ ಆಲ್ಬಮ್ ಮೂಡಿ ಬಂದಿದೆ.
ನಾಡಗೀತೆಯ ಆಲ್ಬಮ್ ನಲ್ಲಿನ ನಟನೆಗಾಗಿ ಮಹೇಂದ್ರ ಮನೋತ್ ಅವರಿಗೆ “ವಿಶೇಷ ಸಮರ್ಪಣಾ ಪ್ರಶಸ್ತಿ”: “ಹೆದರದಿರು ಓ ಮನಸೆ” ಚಿತ್ರಕ್ಕೆ ಉತ್ತಮ ಸಾಹಿತ್ಯ ಪ್ರಶಸ್ತಿ
RELATED ARTICLES