ಅದೆಷ್ಟೋ ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಯಾವುದೇ ನಿರೀಕ್ಷೆಗಳಿಲ್ಲದೆ ತಮ್ಮ ಸೇವೆಗಳನ್ನು ಚಂದ್ರಮನಂತೆ ಸಲ್ಲಿಸುತ್ತಿರುತ್ತಾರೆ. ಕಾರ್ಯಗಳಲ್ಲಿ ಶಿಸ್ತು, ಬದ್ಧತೆ, ಪ್ರಾಮಾಣಿಕತೆಗಳು ಇರುವವರು ದೊರಕುವುದು ಬಹಳ ವಿರಳ. ಆದರಲ್ಲೂ ಇಂತಹವರನ್ನೇ ಹುಡುಕುವ, ಗೌರವಿಸುವ, ವೇದಿಕೆ ಕಲ್ಪಿಸುವಂತಹ ಕಾರ್ಯ ಮಾಡುವ ಸಂಸ್ಥೆಯೊಂದಿದೆ.
ಆ ರೀತಿಯಲ್ಲಿ ನಾವು ಕಂಡ ಸಂಸ್ಥೆ ಎಂದರೆ ಗುರುಕುಲ ಕಲಾ ಪ್ರತಿಷ್ಠಾನ(ರಿ), ಕೇಂದ್ರ ಸಮಿತಿ -ತುಮಕೂರು.
ಇದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿಯೂ ನಿಸ್ವಾರ್ಥ ಸೇವೆಯಿಂದಲೇ ಹೆಸರುವಾಸಿಯಾಗಿದೆ. ಈ ಸಂಸ್ಥೆಯು ನಾಡಿನ ಸಾಧಕರುಗಳನ್ನು ಗುರುತಿಸಿ ಅವರನ್ನು ಗೌರವಿಸುವುದರ ಮೂಲಕ ಪುರಸ್ಕೃತರ ಮನವು ಮತ್ತಷ್ಟು ಸೇವಾಕಾರ್ಯಗಳಿಗೆ ಮಿಡಿಯುವಂತೆ ಮಾಡುವುದರಲ್ಲಿ ಯಶಸ್ವಿಯಾಗಿರುತ್ತದೆ. ಗುರುಕುಲದಲ್ಲಿ ನೀಡುವ ಪ್ರಶಸ್ತಿಗಳಿಗೆ ಒಂದು ತೂಕವಿದೆ, ಗೌರವವಿದೆ.
ನಮ್ಮ ಪತ್ರಿಕೆಗೆ ನಿನ್ನೆಯಷ್ಟೇ ಮುದ್ರಕರನ್ನು ಗೌರವಿಸುವ ಸಂದರ್ಭದಲ್ಲಿ ಸಿಕ್ಕ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್, ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಶ್ರೀ ಡಾ. ಶಿವರಾಜ್ ಗೌಡ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪರಂಗುಬ್ಬಿರವರು ಗುರುಕುಲದ ದ್ವಿತೀಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲು ಆಗದಿದ್ದ ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಪ್ರಸಿದ್ಧ ನಂಜುಂಡೇಶ್ವರ ಪ್ರಿಂಟರ್ಸ್ ಮಾಲೀಕರಾದ ಶ್ರೀಯುತ ಮಲ್ಲಿಕಾರ್ಜುನ್ ರವರಿಗೆ ಮುದ್ರಣ ಕ್ಷೇತ್ರದಲ್ಲಿ’ ಗುರುಕುಲ ಮುದ್ರಾ ಶ್ರೇಷ್ಠ ‘ಪ್ರಶಸ್ತಿಯನ್ನು ಅವರ ಗೃಹಕ್ಕೆ ಭೇಟಿ ನೀಡಿ ಗೌರವಿಸುತ್ತಿರುವುದು ಅತೀವ ಸಂತಸ ತಂದಿತು. ನಿಜಕ್ಕೂ ಮಲ್ಲಿಕಾರ್ಜುನ್ ರವರು ಮುದ್ರಣ ಕ್ಷೇತ್ರದಲ್ಲಿ ಸೇವಾ ಮನೋಭಾವವನ್ನಿಟ್ಟುಕೊಂಡು ಅಚ್ಚುಕಟ್ಟುತನದಲ್ಲಿ ಹೆಸರುವಾಸಿಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ಶ್ರೀಮಲ್ಲಿಕಾರ್ಜುನ್ ರವರಿಗೂ ಹಾಗೂ ಗುರುಕುಲ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ ಕಲಾಬಂಧು ಪತ್ರಿಕೆಯು ಶುಭ ಹಾರೈಸುತ್ತದೆ.
ಶ್ರೀಮಲ್ಲಿಕಾರ್ಜುನ್ ರವರಿಗೆ ಗುರುಕುಲ ಮುದ್ರಾ ಶ್ರೇಷ್ಠ ಪ್ರಶಸ್ತಿ
RELATED ARTICLES