ಬಿಬಿಎಂಪಿ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ್ ರವರಿಗೆ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಕೇಶವಮೂರ್ತಿರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಮನವಿ ಪತ್ರ ನೀಡಿದರು.
ಬೆಂಗಳೂರುನಗರದಲ್ಲಿ ನಿನ್ನೆ ಸುರಿದ ಬಾರಿ ಮಳೆಯಿಂದ ಮಹಾಲಕ್ಷ್ಮೀಪುರಂ ಗಣೇಶ್ ಬ್ಲಾಕ್ 3, 4 ಮತ್ತು 5ನೇ ಮುಖ್ಯರಸ್ತೆ ಮತ್ತು ಶಂಕರನಗರ ಚರಂಡಿ ಪಕ್ಕದ ಉದ್ಯಾನವನ ಹಾಗೂ ಉದ್ಯಾನವನ ಎದುರು ಇರುವ ಹಲವಾರು ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಉಂಟಾದ ಹಾನಿ ತತಕ್ಷಣ ಪರಿಹಾರ ಮತ್ತು ದುರಸ್ತಿ ಕಾರ್ಯ ಮಾಡಬೇಕು.
ಸ್ಥಳೀಯ ನಿವಾಸಿಗಳಿಗೆ ಬಾರಿ ಮಳೆಯಿಂದ ಬೆಲೆಬಾಳುವ ವಸ್ತುಗಳು ಮತ್ತು ಪೀಠೋಪಕರಣಗಳು, ಅಮೂಲ್ಯ ವಸ್ತುಗಳು ನೀರಿನ ಪಾಲಾಗಿದೆ. ತತಕ್ಷಣ ಪರಿಹಾರ ನೀಡಿದರೆ ಅವರ ಜೀವನಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯ ಆಯುಕ್ತರಿಗೆ ಮನವಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಪರಿಸರ ರಾಮಕೃಷ್ಣ, ನಟರಾಜ್, ಆನಂದ್ ಮೂರ್ತಿರವರು ಭಾಗವಹಿಸಿದ್ದರು.