Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಸಿಎಂ, ಡಿಸಿಎಂ ಸೇರಿದಂತೆ 10 ಶಾಸಕರು ಪ್ರಮಾಣವಚನ ಸ್ವೀಕಾರ

ಸಿಎಂ, ಡಿಸಿಎಂ ಸೇರಿದಂತೆ 10 ಶಾಸಕರು ಪ್ರಮಾಣವಚನ ಸ್ವೀಕಾರ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಮತ್ತು 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೆಹಲಿಯಲ್ಲಿ ತಡರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಿನ್ನೆ ದೆಹಲಿಗೆ ತೆರಳಿದ್ದರು.

ನೂತನ ಸಚಿವರ ಪಟ್ಟಿ ಇಲ್ಲಿದೆ :

ಸತೀಶ್ ಜಾರಕಿಹೊಳಿ
ಡಾ.ಜಿ.ಪರಮೇಶ್ವರ್
ರಾಮಲಿಂಗ ರೆಡ್ಡಿ
ಕೆ.ಹೆಚ್. ಮುನಿಯಪ್ಪ
ಕೆ.ಜೆ. ಜಾರ್ಜ್
ಎಂ.ಬಿ.ಪಾಟೀಲ್
ಪ್ರಿಯಾಂಕ್ ಖರ್ಗೆ
ಜಮೀರ್ ಅಹ್ಮದ್ ಖಾನ್

ಹೈಕಮಾಂಡ್ ನಾಯಕರೊಂದಿಗೆ ಸುಮಾರು 5 ಗಂಟೆಗಳ ಚರ್ಚೆ ನಡೆಸಿ ಸಿಎಂ, ಡಿಸಿಎಂ ಸೇರಿ 10 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments