Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಉದಯೋನ್ಮುಖ ಕಲಾವಿದೆ ಅಂತರ ಶ್ರೀರಾಮ್ -‘ರಂಗೋಲ್ಲಾಸ’

ಉದಯೋನ್ಮುಖ ಕಲಾವಿದೆ ಅಂತರ ಶ್ರೀರಾಮ್ -‘ರಂಗೋಲ್ಲಾಸ’

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ರಮಣ ಮಹರ್ಷಿ ಕಲಿಕಾಕೇಂದ್ರ’ದಲ್ಲಿ ನೃತ್ಯಗುರುಗಳಾಗಿ ಹಾಗೂ ಕಾರ್ಯಕ್ರಮ ನಿರ್ವಾಹಕರಾಗಿರುವ ವಿದ್ವಾನ್ ಶ್ರೀ ಉಜ್ವಲ್ ಜಗದೀಶ್ ಬೆಂಗಳೂರಿನ ಪ್ರಖ್ಯಾತ ನೃತ್ಯಪಟು, ಯುವ ಆಚಾರ್ಯ, ನೃತ್ಯ ಸಂಯೋಜಕ ಹಾಗೂ ಉತ್ತಮ ಸಂಶೋಧಕರು. ಇವರ ನುರಿತ ಗರಡಿಯಲ್ಲಿ ರೂಹುಗೊಂಡಿರುವ ಕಲಾಶಿಲ್ಪ ಕು. ಅಂತರ ಶ್ರೀರಾಮ್ ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ. ಸೃಜನಶೀಲ ಕಲಾಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಕು. ಅಂತರ, ಗುರು ಉಜ್ವಲ್ ಬಳಿ ಹಲವಾರು ವರ್ಷಗಳ ಬದ್ಧತೆಯ ನೃತ್ಯಾಭ್ಯಾಸ ಮಾಡಿದ ನಂತರ ಆತ್ಮವಿಶ್ವಾಸದಿಂದ ರಂಗಾರೋಹಣ ಮಾಡಿ ತನ್ನ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಲು ಸನ್ನದ್ಧಳಾಗಿದ್ದಾಳೆ . ಇದೇ ತಿಂಗಳ 21 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ‘ಅಂತರಂಗಪ್ರವೇಶ’ – ಪ್ರಪ್ರಥಮ ಏಕವ್ಯಕ್ತಿ ಭರತನಾಟ್ಯವನ್ನು ‘ವಿಶ್ವ ತಾಯಂದಿರ ದಿನ’ಕ್ಕಾಗಿ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಸಮರ್ಪಿಸಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ಮನ ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.


ಶ್ರೀಮತಿ ಉಮಾ ಶ್ರೀರಾಮ್ ಹಾಗೂ ಶ್ರೀರಾಮ್ ರವರ ಪ್ರೀತಿಯ ಪುತ್ರಿ ಅಂತರ ಬಾಲಪ್ರತಿಭೆ. ಮೂರನೆಯ ವಯಸ್ಸಿನಲ್ಲೇ ಹೆಜ್ಜೆ ಹಾಕಿದವಳು. ಮೊದಲು ರಂಗಾಭರಣ ಕಲಾಕೇಂದ್ರದಲ್ಲಿ ನೃತ್ಯ ಕಲಿಯಲಾರಂಭಿಸಿ ನಂತರ ಮಹರ್ಷಿ ಕಲಿಕಾ ಕೇಂದ್ರ ಸೇರ್ಪಡೆ. ನೃತ್ಯ-ಸಂಗೀತದ ತರಬೇತಿ ಒಟ್ಟೊಟ್ಟಿಗೆ. ಮೊದಲು ರೂಪಾ ಹೇಮಂತ್ ಅನಂತರ ರೇವತಿ ಶಂಕರ್ ಅವರ ಬಳಿ ತರಬೇತಿ ಹೊಂದಿ, ಪ್ರಸ್ತುತ ಗುರು ಉಜ್ವಲ್ ಜಗದೀಶ್ ಅವರ ಬಳಿ ನೃತ್ಯಶಿಕ್ಷಣ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿ ನಡೆಸುವ ಭರತನಾಟ್ಯದ ಕಿರಿಯದರ್ಜೆಯ ಪರೀಕ್ಷೆ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಮಧ್ಯಮ ಪೂರ್ಣ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಹಿರಿಯ ನೃತ್ಯಗುರುಗಳಾದ ಡಾ. ಅಂಬಿಕಾ ಕಮೇಶ್ವರ್, ಶ್ರೀಮತಿ ಉಮಾ ಸತ್ಯನಾರಾಯಣ್ ಹಾಗೂ ಶ್ರೀಮತಿ ಬ್ರಗಾ ಬೆಸಿಲ್ ರವರ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಹೆಮ್ಮೆ ಅವಳದು.
ಅಂತರ, ಈಗ ಡೆಫೊಡಿಲ್ಸ್ ಆಂಗ್ಲಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಎಲ್ಲಾ ಸಾಂಸ್ಕ್ರುತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂದು. ಆಟ ಮತ್ತು ಪಾಠ ಎರಡರಲ್ಲೂ ಮುಂದಿರುವ ಇವಳು 3ನೇ ತರಗತಿಯಿಂದ 6ನೇ ತರಗತಿಯವರಗೆ “ಆಲ್ ರೌಂಡರ್” ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ಈ ವರ್ಷ ಶಾಲೆಯ ಸಾಂಸ್ಕ್ರುತಿಕ ಚಟುವಟಿಕೆಗಳ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾಳೆ. ಸಾಫ್ ಸ್ಟೂಡಿಯೋನಲ್ಲಿ ಶ್ರೀ ಅರುಣ ರಾಜ್ ರವರಲ್ಲಿ ಏರೋಬಿಕ್ಸ್,ಜುಂಬಾ, ಹಾಗೂ ಸಿನಿಮಾ ನೃತ್ಯವನ್ನು ಕಲಿಯುತ್ತಿದ್ದಾಳೆ. ತಾನೇ ಸ್ವತಃ ನೃತ್ಯ ತರಬೇತಿ ಹಾಗೂ ನೃತ್ಯ ಸಂಯೋಜನೆ ಮಾಡುವ ಕೌಶಲ್ಯವನ್ನೂ ಬೆಳೆಸಿಕೊಂಡಿರುವುದು ಅವಳ ಗರಿಮೆ.
ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಇವಳಿಗೆ, ದುಬೈನ ‘ರೆಲಿಶ್ ದ ರಸ’ ಸಂಸ್ಥೆಯ ‘ನವರಸಾತ್ರಿ ಚಲ್ಲುಕಟ್ಟೋತ್ಸವ’ ದಲ್ಲಿ ಸ್ಟಾರ್ ಪರ್ಫಾರ್ಮರ್ ಬಿರುದು ಹಾಗೂ ಶ್ರೀಮತಿ ಕಮಲಾಬಾಯಿ ಶಾಲೆ ನಡೆಸಿದ ಭಾರತೀಯ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದ್ದು, ನೃತ್ಯ ಸಂಯೋಜನೆಗೆ ‘ಭಾರತ ಕಲಾ ಪಲ್ಲವ’ ಎಂಬ ಬಿರುದು ಸಂದಿದೆ. ನೃತ್ಯ ಕಿಂಕಿಣಿ ಸಂಸ್ಥೆಯ ಆನ್ ಲೈನ್ ಸ್ಪರ್ಧೆಗಳಲ್ಲಿ ನೃತ್ಯ ಕಲಾ ಅಂಕುರ, ಕಲಾರತ್ನ ಶ್ರೇಷ್ಠ, ನೃತ್ಯ ಕಲಾಜ್ಯೋತಿ ಹಾಗೂ ಕಲಾ ಶ್ರೇಷ್ಠ ಪ್ರಶಸ್ತಿಗಳು ದೊರಕಿರುವುದು ಇವಳ ವೈಶಿಷ್ಟ್ಯ.

RELATED ARTICLES
- Advertisment -
Google search engine

Most Popular

Recent Comments